ಕೋಟ ಪಂಚವರ್ಣ ಮಹಿಳಾ ಮಂಡಲದ ಆಶ್ರಯದಲ್ಲಿ ಆಸಾಡಿ ವಡ್ರ್ ಗ್ರಾಮೀಣ ಸೊಗಡುಗಳ ತಿಲ್ಲಾನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಗ್ರಾಮೀಣ ಭಾಷೆಗಳ ಬಗ್ಗೆ ಯಾರಿಗೂ ಕೀಳರಿಮೆ ಇರಬಾರದು ಅದರ ಶ್ರೇಷ್ಠತೆ ಅಳಯಲು ಸಾಧ್ಯವಿಲ್ಲ ಎಂದು ಗ್ರಾಮ್ಯ ಭಾಷೆಯ ಸೋಗಡುಗಾರ ಎಂ ಜಯರಾಮ ಶೆಟ್ಟಿ ಹೇಳಿದ್ದಾರೆ

Call us

Click Here

ಪಂಚವರ್ಣ ಯುವಕ ಮಂಡಲ ಕೋಟ, ಪಂಚವರ್ಣ ಮಹಿಳಾ ಮಂಡಲ ಕೋಟ ಆಶ್ರಯದಲ್ಲಿ ಹಂದಟ್ಟು- ದಾನಗುಂದು ಗೆಳೆಯರ ಬಳಗ ಸಭಾಭವನದಲ್ಲಿ ಆಸಾಡಿ ವಡ್ರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಕುಂದಗನ್ನಡಕ್ಕೆ ವಿಶ್ವಮಾನ್ಯತೆ ಎಲ್ಲೆಡೆ ದೊರಕುತ್ತಿದೆ ಅದೊಂದು ಬದುಕಿನ ಚಹರೆಯಾಗಿದೆ ಎಂದರಲ್ಲದೆ ಇದರ ಮಹತ್ವವನ್ನು ನಮ್ಮ ಹಿರಿಯರು ಮುಂದಿನ ಪೀಳಿಗೆಗೆ ಧಾರೆ ಎರೆಯಬೇಕು, ಅದೇ ರೀತಿಯಲ್ಲಿ ಆಷಾಢ ಮಾಸಕ್ಕೆ ವಿಶೇಷತೆ ಇದೆ, ಈ ತಿಂಗಳಲ್ಲಿ ಮಾಡುವ ತಿಂಡಿ ತಿನಿಸುಗಳು ಆರೋಗ್ಯಕ್ಕೆ ಪೂರಕವಾಗಿದ್ದವು ಹಾಗೂ ಆಚರಣೆಯ ಹಿಂದೆ ನಂಬಿಕೆ ಇದೆ ಎಂದರು. ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಕುಂದಗನ್ನಡ ಶಬ್ದ ಮರೆಯಾಗದಿರಲಿ ಎಂದರು ಹಾಗೂ ಕುಂದಾಪ್ರ ಕನ್ನಡ ದಿನಾಚರಣೆ ನಮ್ಮಆಚಾರ- ವಿಚಾರ ಬೆಳೆಸುವಲ್ಲಿ ಸಹಾಯಕವಾಗಿದ್ದು, ಇದು ನಿತ್ಯ ನಿರಂತರವಾಗಿ ನಡೆಯಲಿ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಪತ್ನಿ ಶಾಂತಾ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಕಲಾವತಿ ಅಶೋಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗೀತಾನಂದ ಟ್ರಸ್ಟ್, ಮಣೂರು-ಪಡುಕರೆ ನಿರ್ದೇಶಕಿ ದಿವ್ಯಲಕ್ಷ್ಮೀ ಪ್ರಶಾಂತ ಕುಂದರ್ ಗ್ರಾಮ್ಯ ತಿನಿಸು ಸ್ಪರ್ಧೆಗೆ ಚಾಲನೆ ನೀಡಿದರು. ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಣೈ ಕೋಟ ಅವರು ಗ್ರಾಮೀಣ ಕ್ರೀಡೆಗೆ ಚಾಲನೆ ನೀಡಿದರು. ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಅಧ್ಯಕ್ಷೆ ಜಾನಕಿ ಹಂದೆ ಗ್ರಾಮೀಣ ಪರಿಕರದ ಪ್ರದರ್ಶನವನ್ನು ಅನಾವರಣಗೈದರು.

Click here

Click here

Click here

Click Here

Call us

Call us

ಈ ಸಂದರ್ಭ ಗ್ರಾಮೀಣ ಬಹುಮುಖ ಪ್ರತಿಭೆ ವನಿತಾ ಉಪಾಧ್ಯ ಚಿತ್ರಪಾಡಿಯವರನ್ನು ಸಮ್ಮಾನಿಸಲಾಯಿತು.

ವಿಪ್ರ ಮಹಿಳಾ ಬಳಗ, ಸಾಲಿಗ್ರಾಮ ಅಧ್ಯಕ್ಷೆ ಜಾಹ್ನವಿ ಹೇರ್ಳೆ,
ಮಹಿಳಾ ಮಂಡಲ ಕೋಟದ ಅಧ್ಯಕ್ಷೆ ಸುಶೀಲ ಸೋಮಶೇಖರ್, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಮೃತ ಜೋಗಿ, ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ ಶೇವಧಿ, ಪಂಚವರ್ಣ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಕುಸುಮ ದೇವಾಡಿಗ, ಉಪಸ್ಥಿತರಿದ್ದರು. ಮಹಿಳಾ ಮಂಡಲದ ಪದಾಧಿಕಾರಿ ಸುಜಾತ ತಿಂಗಳಾಯ ಪಡುಕರೆ ಸ್ವಾಗತಿಸಿ, ಸಂಚಾಲಕಿ ಪುಷ್ಪ ಹಂದಟ್ಟು ಪ್ರಾಸ್ತಾವಿಕ ಮಾತನಾಡಿದರು. ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿ, ಚೇತನಾ ಹಾಡಿಕರೆ ವಂದಿಸಿದರು.

ಪಂಚವರ್ಣ ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.ಕ್ರೀಡಾ ಕಾರ್ಯಕ್ರಮವನ್ನು ಅಭಿಜಿತ್ ಪಾಂಡೇಶ್ವರ ನೆರವೆರಿಸಿದರು.

ಗಮನ ಸೆಳೆದ ಗ್ರಾಮೀಣ ಸೊಗಡಿನ ಸ್ಪರ್ಧೆ:
ಮಹಿಳೆಯರಿಗಾಗಿ ಗ್ರಾಮೀಣ ತಿನಿಸು ಮತ್ತು ಗ್ರಾಮೀಣ ಕ್ರೀಡೆಯ ಸ್ಪರ್ಧೆಯ ಭಾಗವಾಗಿ ಹಿಡಿಕಡ್ಡಿಯಾಟ,ಗುಡ್ನಾ,ಹಿಡಿಕಡ್ಡಿ ನೇಯುವುದು ಇನ್ನಿತರ ಕ್ರೀಡೆಗಳು ಗಮನ ಸೆಳೆದವು ,ಗ್ರಾಮೀಣ ಪರಿಕರಗಳು ಅದರಲ್ಲಿ ವಿಶೇಷವಾಗಿ ಪತ್ರೋಡಿ,ಉರ್ಗನ್ ಚಟ್ಲ್ನಿ,ಅತ್ರಸ್,ಅಕ್ಕಿ ಉಂಡಿ,ಹೊರ್ಲಿ ಚಟ್ನಿ,ಗೊಡ್ಡಿಟ್,ಅವಲಕ್ಕಿ ಉಂಡಿ,ಗೂಳಿಯಪ್ಪ,ಅವಡೆ,ಹಲಸಿನ ದಾನಿ ಬೇಸದ್ ,ಕೊಬ್ಬರಿ ಮಿಟಾಯಿ,ಚಾ ಕಣ್,ಪರಿಕರದ ಸಾಲಿನಲ್ಲಿ ಹಳೆಯ ಕಾಲದ ತಕ್ಕಡಿ,ಗಡಿಯಾರ,ಕೃಷಿ ಮಾಡುವ ಗೋರಿ,ನೇಲ ನೋಗ,ಹೀಗೆ ಸಾಕಷ್ಟು ಗ್ರಾಮೀಣ ವಸ್ತುಗಳು ಪ್ರದರ್ಶನಗೊಂಡಿತು.

ಪಂಚವರ್ಣ ಯುವಕ ಮಂಡಲ ಕೋಟ, ಪಂಚವರ್ಣ ಮಹಿಳಾ ಮಂಡಲ ಕೋಟ ಆಶ್ರಯದಲ್ಲಿ ಜು.೩೧ರಂದು ಹಂದಟ್ಟು- ದಾನಗುಂದು ಗೆಳೆಯರ ಬಳಗ ಸಭಾಭವನದಲ್ಲಿ ಆಸಾಡಿ ವಡ್ರ್ ಕಾರ್ಯಕ್ರಮದಲ್ಲಿ ಗ್ರಾಮೀಣ ಬಹುಮುಖ ಪ್ರತಿಭೆ ವನಿತಾ ಉಪಾಧ್ಯ ಚಿತ್ರಪಾಡಿಯವರನ್ನು ಸಮ್ಮಾನಿಸಲಾಯಿತು. ಗೀತಾನಂದ ಟ್ರಸ್ಟ್, ಮಣೂರು-ಪಡುಕರೆ ನಿರ್ದೇಶಕಿ ದಿವ್ಯಲಕ್ಷ್ಮೀ ಪ್ರಶಾಂತ ಕುಂದರ್ ಗ್ರಾಮ್ಯ ತಿನಿಸು ಸ್ಪರ್ಧೆಗೆ ಚಾಲನೆ ನೀಡಿದರು. ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಣೈ ಕೋಟ ಮತ್ತಿತರರು ಉಪಸ್ಥಿತರಿದ್ದರು.

Leave a Reply