ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಗೋಸ್ಟ 19 ರಿಂದ 23 ರ ತನಕ ಥೈಲ್ಯಾಂಡಿನಲ್ಲಿ ನಡೆಯುವ ಕರಾಟೆ ಡೂ ಚಾಂಪಿಯನ್ ಶಿಪ್’ಗೆ ಭಂರ್ಡಾಕಾರ್ಸ ಕಾಲೇಜಿನ ಕರಾಟೆ ಪಟುಗಳಾದ ಚೇತನ ಗಾಣಿಗ, ಪವನ ಪೂಜಾರಿ, ಭರತ ದೇವಾಡಿಗ, ಅಜಯ ದೇವಾಡಿಗ ಅವರಿಗೆ ಉಡುಪಿಯ ವೆಂಟನ ಫೌಂಡೇಶನ್ ವತಿಯಿಂದ ಸಹಾಯಧನ ನೀಡುವ ಕಾರ್ಯಕ್ರಮ ನಡೆಯಿತು.
ವೆಂಟನ ಫೌಂಡೇಶನ್ ವತಿಯಿಂದ ಸದಸ್ಯ ಷಣ್ಮುಖರಾಜ ನಾಲ್ಕು ಕ್ರೀಡಾಪಟುಗಳಿಗೆ ತಲಾ ಐವತ್ತೂ ಸಾವಿರ ರೂಪಾಯಿಯ ಚೆಕ್ ಹಸ್ತಾಂತರಿಸಿದರು.
ಬಳಿಕ ಅವರು ಮಾತನಾಡಿ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೆಂಟನ ಫೌಂಡೇಶನ್ ಸಹಾಯಹಸ್ತ ವತಿಯಿಂದ ನೀಡಲಾಗಿದೆ. ಈ ಭಾಗದಿಂದ ಅಂತರಾಷ್ಠೀಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗುವುದು ಹೆಮ್ಮೆಯ ವಿಷಯ. ಇದರ ಹಿಂದೆ ಅವರ ಹಲವಾರು ವರ್ಷದ ಪರಿಶ್ರಮವಿದೆ. ಇವರ ಭಾಗವಹಿಸುವಿಕೆ ಇತರರಿಗೂ ಪ್ರೇರೆಪಣೆಯಾಗಲಿ ಎಂದರು.
ಕಾಲೇಜಿನ ಹಳೆ ವಿದ್ಯಾರ್ಥಿ ಕೆ.ಪಿ. ಭಟ್, ವಿಶ್ವಸ್ಥ ಮಂಡಳಿಯ ಸದಸ್ಯರಾದ ಪ್ರಕಾಶ ಸೋನ್ಸ್, ದೇವದಾಸ ಕಾಮತ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಪಿ. ನಾರಾಯಣ ಶೆಟ್ಟಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ದೈಹಿಕ ಶಿಕ್ಷಕ ಶಂಕರನಾರಾಯಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.