ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಯಲ್ಲೂ ತಿರಂಗ ಹಾರಿಸುವ ನಿಟ್ಟಿನಲ್ಲಿ ಇಂದು ಕುಂದಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಸಮಾಜದ ಗಣ್ಯರಾದ ಎಸ್ ಎನ್ ಪಡಿಯಾರ್, ದಿನಕರ್ ಶೆಣೈ, ರಾಜೀವ್ ಶೆಟ್ಟಿ ಮನೆಗೆ ತೆರಳಿ ರಾಷ್ಟ್ರಧ್ವಜ ಹಸ್ತಾಂತರಿಸಿ, ಶುಭಕೋರಲಾಯಿತು.
ಈ ಸಂದರ್ಭ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಸಹಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಕಾರ್ಯದರ್ಶಿ ಅನಿತಾ ಶ್ರೀಧರ್, ಮಂಡಲ ಕಾರ್ಯದರ್ಶಿ ಸುರೇಂದ್ರ ಸಂಗಮ್, ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪಾ ಪೈ, ಯುವಮೋರ್ಚಾ ಉಪಾಧ್ಯಕ್ಷ ಅಭಿಷೇಕ ಅಂಕದಕಟ್ಟೆ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೌರಭಿ ಪೈ, ಜಯಲಕ್ಷ್ಮೀ ಗಾಣಿಗ, ಕಾರ್ಯದರ್ಶಿ ರೋಹಿಣಿ ಪೈ, ಪುರಸಭಾ ಸದಸ್ಯೆ ಪುಷ್ಪಾ ಶೇಟ್ ಇದ್ದರು.