ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಅ.12: ಗ್ರಾಮ ಪಂಚಾಯತ್ ಮಾಜಿ ಸದಸ್ಯ ಇಬ್ರಾಹಿಂ ಸಾಹೇಬ್ ಹೈಕಾಡಿ (71) ಅವರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ.
ಆವರ್ಸೆ ಗ್ರಾಮ ಪಂಚಾಯತ್ ಮಾಜಿ ಸದ್ಯಸರಾಗಿ, ಉಡುಪಿ ಭೂ ನ್ಯಾಯ ಮಂಡಳಿಯ ಮಾಜಿ ಸದಸ್ಯರಾಗಿ ಹೈಕಾಡಿ ಮಸೀದಿಯ ಮಾಜಿ ಅಧ್ಯಕ್ಷರುರಾಗಿ, ಹೈಕಾಡಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಇಬ್ರಾಹಿಂ ಸಾಹೇಬ್ ಅವರು ಸೇವೆ ಸಲ್ಲಿಸಿದ್ದರು. ಮೃತರು ಐದು ಗಂಡು, ಮೂರು ಹೆಣ್ಣು ಮಕ್ಕಳುನ್ನು ಅಗಲಿದ್ದಾರೆ.