ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ವಲಯ ಶಿರೂರು ಕಾರ್ಯಕ್ಷೇತ್ರದ ಅಳ್ವೆಗೆದ್ದೆ ಶ್ರೀ ಮಹಾಗಣಪತಿ ಸಭಾಭವನದಲ್ಲಿ ಶ್ರೀ ವಿನಾಯಕ ಹಾಗೂ ಪ್ರಿಯದರ್ಶಿನಿ ಜ್ಞಾನವಿಕಾಸ ಕೇಂದ್ರದಲ್ಲಿ ವರಲಕ್ಷ್ಮಿ ಪೂಜೆ ಮತ್ತು ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಶಿರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ರಘುರಾಮ್ ಕೆ. ಪೂಜಾರಿ ಅಧ್ಯಕ್ಷತೆಯನ್ನು ವಹಿಸಿದರು.
ಬೈಂದೂರು ತಾಲೂಕಿನ ಯೋಜನಾಧಿಕಾರಿಗಳಾದ ಕೆ ವಿನಾಯಕ್ ಪೈ, ಸಿ.ಎಸ್.ಸಿ ಸೆಂಟರಿನಲ್ಲಿ ಸಿಗುವಂತಹ ಸೌಲಭ್ಯವನ್ನು ತಿಳಿಸಿ, ಅದನ್ನು ಉಪಯೋಗಿಸಿಕೊಳ್ಳಿ ಎಂದರು. ಭೀಮಾ ಜ್ಯೋತಿ ಇನ್ಶೂರೆನ್ಸ್ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರು ಹಾಗೂ ವಲಯದ ಮೇಲ್ವಿಚಾರಕರು, ಕೇಂದ್ರದ ಸಂಯೋಕಿಯರು ಉಪಸ್ಥಿತರಿದ್ದರು. ಜ್ಞಾನ ವಿಕಾಸದ ಸಮನ್ವಯ ಅಧಿಕಾರಿ ಗೀತಾ ಕಾರ್ಯಕ್ರಮ ನಿರೂಪಿಸಿದರು ಸೇವಾ ಪ್ರತಿನಿಧಿ ರೇವತಿ ವಂದಿಸಿದರು.