ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಕ್ಲಬ್ ಬೈಂದೂರು ಪ್ರಾಯೋಜಿತ ರೋಟರ‍್ಯಾಕ್ಟ್ ಕ್ಲ್‌ಬ್ ಉದ್ಘಾಟನಾ ಸಮಾರಂಭ ಇತ್ತಿಚಿಗೆ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ರೋಟರ‍್ಯಾಕ್ಟ್ ಜಿಲ್ಲಾಧ್ಯಕ್ಷ ಜೈವಿಠ್ಠಲ್ ಕೆ.ಎಸ್. ಪದಗ್ರಹಣ ನೆರವೇರಿಸಿ ಶುಭಹಾರೈಸಿದರು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಎಚ್. ಉದಯ ಆಚಾರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಡುಪಿ ಅರಣ್ಯ ಸಂಚಾರಿದಳದ ಎಸಿಎಫ್ ಶ್ರೀಧರ ಪಿ., ಉಪಾಧ್ಯಕ್ಷ ಚಂದ್ರ ಪೂಜಾರಿ, ವಲಯ ಸೇನಾನಿ ಡಾ. ಪ್ರವೀಣ ಶೆಟ್ಟಿ, ರೋಟರ‍್ಯಾಕ್ಟ್ ಝೋನಲ್ ಕೋ-ಆರ್ಡಿನೇಟರ್ ಜಾನ್ಸ್‌ನ್ ಡಿ. ಅಲ್ಮೆಡಾ, ಎನ್‌ಇಸಿಎಫ್ ಬೈಂದೂರು ಅಧ್ಯಕ್ಷ ಪ್ರಸಾದ ಪಿ ಮೊದಲಾದವರು ಉಪಸ್ಥಿತರಿದ್ದರು.
ರೋಟರ‍್ಯಾಕ್ಟ್ ನೂತನ ಅಧ್ಯಕ್ಷರಾಗಿ ಬಿಕಾಂ ವಿದ್ಯಾರ್ಥಿ ರಾಮಕೃಷ್ಣ, ಕಾರ್ಯದರ್ಶಿಯಾಗಿ ಬಿಎ ವಿದ್ಯಾರ್ಥಿ ಕಿಶೋರ್ ಹಾಗೂ ಖಜಾಂಚಿಯಾಗಿ ಬಿಬಿಎ ವಿದ್ಯಾರ್ಥಿ ನಾಗೇಂದ್ರ ಪದವಿ ಸ್ವೀಕರಿಸಿದರು. ಈ ವೇಳೆ ಮಂಗಳೂರು ವಿಭಾಗ ಎನ್.ಇ.ಸಿ.ಎಫ್‌ನ ಹರಿಶ್ ರಾಜ್ ಅವರನ್ನು ಸನ್ಮಾನಿಸಲಾಯಿತು.
ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರಘು ನಾಯ್ಕ್ ಸ್ವಾಗತಿಸಿ, ಬೈಂದೂರು ರೋಟರಿ ಕಾರ್ಯದರ್ಶಿ ಸುಧಾಕರ ಪಿ. ವಂದಿಸಿದರು. ಬೈಂದೂರು ರೋಟರಿಯ ಗೋವಿಂದ ಎಂ. ಕಾರ್ಯಕ್ರಮ ನಿರೂಪಿಸಿದರು.