ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಗುಜ್ಜಾಡಿ ಮಂಕಿಯಲ್ಲಿ ಸ್ಪಂದನ ಯುವ ಸಂಘದಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ “ಗುರುಗಳಿಗೆ ಶಿಷ್ಯರ ಗೌರವ ವಂದನೆ” ನಡೆಯಿತು.
ಈ ಸಂದರ್ಭಮಂಕಿ ಸ.ಹಿ.ಪ್ರಾ. ಶಾಲೆ ಇದರ ಮುಖ್ಯೋಪಾಧ್ಯಾಯನಿಯಾದ ಗೀತಾ ಭಾಸ್ಕರ ಮಯ್ಯ ಹಾಗೂ ಶಾಲಾ ಶಿಕ್ಷಕ ವೃಂದದವರನ್ನು ಸಹ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಶಂಕರ ಬಿಲ್ಲವ, ಪರಮೇಶ್ವರ ಶ್ರೀಯಾನ್ ಮತ್ತು ಸ್ಪಂದನ ಸಂಘದ ಅಧ್ಯಕ್ಷರಾದ ರಘು ಎಂ. ಉಪಸ್ಥಿತರಿದರು.
ಸುಧೀರ್ ಪಿ. ನಾಯ್ಕ್ ಸ್ವಾಗತಿಸಿ, ಸದಾನಂದ ಎಂ. ವಂದಿಸಿದರು. ತದನಂತರ ಸ್ಪಂದನ ಕಲಾತಂಡ ಮಂಕಿ-ಗುಜ್ಜಾಡಿ, ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.