ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಹೆರಂಜಾಲು ಗ್ರಾಮದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರ ಸಭೆ ಇತ್ತಿಚಿಗೆ ಜರುಗಿತು.
ಅಖಿಲ ಭಾರತ ಕೃಷಿಕೂಲಿಕಾರರ ಸಂಘ (ಎಐಎಡಬ್ಲ್ಯುಯು) ದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಸಭೆಯನ್ನುದ್ದೇಶಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಕೃಷಿಕೂಲಿಕಾರರಿಗೆ ನರೇಗಾ ಕೂಲಿ ಕೆಲಸ ಕೊಡಲು ನಿರಾಕರಿಸಿದ ಸ್ಥಳಿಯ ಗ್ರಾಮ ಪಂಚಾಯತ್ ಅಧಿಕಾರಿಗಳ ನಡೆಯನ್ನು ಖಂಡಿಸಿದರು. ಅಗತ್ಯವಿರುವಲ್ಲಿ ಈ ಕೂಡಲೇ ಕೆಲಸ ಕೊಡಬೇಕು ಎಂದು ಸ್ಥಳಿಯಾಡಳಿತವನ್ನು ಒತ್ತಾಯಿಸಿದರು. ಇಲ್ಲವಾದರೆ ಕೂಲಿಕಾರರೊಡನೆ ಕೆಲಸಕ್ಕಾಗಿ ಒತ್ತಾಯಿಸಿ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಿಐಟಿಯು ಮುಖಂಡ ಗಣೇಶ ತೊಂಡೆಮಕ್ಕಿ ಕೂಲಿಕಾರರ ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದರು. ಕೂಲಿ ಬೇಡಿಕೆಯನ್ನು ನಮೂನೆ-6 ರಲ್ಲಿ ಗ್ರಾಮ ಪಂಚಾಯತಿಗೆ ಈ ಕೂಡಲೆ ಅಜಿ೯ ಸಲ್ಲಿಸಲು ಸಭೆಯಲ್ಲಿ ತೀಮಾ೯ನಿಸಲಾಯಿತು. 30 ಮಂದಿ ಕೂಲಿಕಾರರನ್ನೊಳಗೊಂಡ ಕಾಯಕ ಗುಂಪು ರಚಿಸಲಾಯಿತು. ಸುಶೀಲ ದೇವಾಡಿಗ ಇವರನ್ನು ಕಾಯಕ ಬಂಧುವಾಗಿ ಆಯ್ಕೆ ಮಾಡಲಾಯಿತು ಮಹಾಬಲ ದೇವಾಡಿಗ ವಂದಿಸಿದರು.