ಶುದ್ಧ ಕನ್ನಡದ ಬಳಕೆ ಯಕ್ಷಗಾನದಲ್ಲಿ ಮಾತ್ರ ಸಾಧ್ಯ: ತೀರ್ಥಹಳ್ಳಿ ಗೋಪಾಲ ಆಚಾರ್ಯ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಉಪ್ಪುಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಪ್ಪುಂದ ಇದರ 49ನೇ ವರ್ಷದ ಗಣೇಶೋತ್ಸವದ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದ ಅಪ್ರತಿಮ ಸಾಧನೆಗಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೀಥಹಳ್ಳಿ ಗೋಪಾಲ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.

Call us

Click Here

ಸನ್ಮಾನ ಸ್ವೀಕರಿಸಿ ಮಾತನಾಡಿದ ಆಚಾರ್ಯ ಅವರು ಶುದ್ಧ ಕನ್ನಡದ ಬಳಕೆ ಯಕ್ಷಗಾನದಲ್ಲಿ ಮಾತ್ರ ಸಾಧ್ಯ ಕನ್ನಡ ಉಳಿಸಿ ಬೆಳೆಸುವಲ್ಲಿ ಯಕ್ಷಗಾನದ ಪಾತ್ರ ಮಹತ್ವವಾಗಿದ್ದು ಇಂಗ್ಲಿಷ್ ವ್ಯಾಮೋಹದ ಬರಾಟೆಯಲ್ಲಿಯೂ ಪೋಷಕರು ಯಕ್ಷಗಾನ ಕಲಿಯುವಿಕೆಯಲ್ಲಿ ಮಕ್ಕಳಿಗೆ ಆಸಕ್ತಿ ಬರುವಂತೆ ಮಾಡುವ ದೊಡ್ಡ ಜವಬ್ದಾರಿ ಇದ್ದು ಹೆತ್ತರವರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉದ್ಯಮಿ ಜಿ. ಗೋಕುಲ ಶೆಟ್ಟಿ, ಗಣೇಶೋತ್ಸವದ ಅಧ್ಯಕ್ಷ ಯು. ಸಂದೇಶ ಭಟ್, ಉದ್ಯಮಿ ಕುಶಲ ಶೆಟ್ಟಿ ಕಾರ್ಯದರ್ಶಿ ಜನಾರ್ಧನ ಖಾರ್ವಿ ಸಮಿತಿಯ ಸದಸ್ಯರಾದ ಮಂಜುನಾಥ ದೇವಾಡಿಗ, ಅನಿಲ್ ಡಿ ಉಪ್ಪುಂದ, ಆನಂದ ದೇವಾಡಿಗ ಉಪಸ್ಥಿತರಿದ್ದರು. ವೇದಮೂರ್ತಿ ಶಂಕರನಾರಾಯಣ ಭಟ್ ಸ್ವಾಗತಿಸಿದರು, ಕಾರ್ಯದರ್ಶಿ ಜನಾರ್ಧನ ಖಾರ್ವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply