ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಕರ್ಣಾಟಕ ಬ್ಯಾಂಕ್ ಸಹಕಾರ – ಸಿಒಒ ವೈ.ವಿ. ಬಾಲಚಂದ್ರ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕರ್ಣಾಟಕ ಬ್ಯಾಂಕ್ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು ಎಲ್ಲರ ಜೀವನಕ್ಕೆ ಸ್ಪೂರ್ತಿಯಾಗಿರುವ ಉತ್ತಮ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ನಿರಂತರವಾಗಿ ಸಹಕಾರ ನೀಡುತ್ತಾ ಬಂದಿದೆ. ಅದರಲ್ಲೂ ಯುವ ಜನಾಂಗ ಶಿಕ್ಷಣ, ವೃತ್ತಿಯ ಒತ್ತಡದಲ್ಲೂ ಸಾಹಿತ್ಯ ಸಂಗೀತದಂತಹ ಉತ್ತಮ ಚಟುವಟಿಕೆಯ ಬಗ್ಗೆ ಆಸಕ್ತಿ ತೋರುವಾಗ ಸಂತೋಷವಾಗುತ್ತದೆ ಎಂದು ಕರ್ಣಾಟಕ ಬ್ಯಾಂಕಿನ ಸಿಒಒ ವೈ. ವಿ. ಬಾಲಚಂದ್ರ ಅವರು ಹೇಳಿದರು.

Call us

Click Here

ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜಿನ ಕುಂಭಾಸಿ ರಾಧಾಬಾಯಿ ವೆಂಕಟರಮಣ ಪ್ರಭು ರಂಗ ಮಂದಿರ, ರಂಗ ಅಧ್ಯಯನ ಕೇಂದ್ರದಲ್ಲಿ ಏರ್ಪಡಿಸಿದ ಹಿಂದುಸ್ತಾನಿ ಯುವ ಸಂಗೀತೋತ್ಸವ ‘ಅಮೃತ ಭಾರತಿಗೆ ಸಂಗೀತದಾರತಿ’ ಸಮಾರಂಭದಲ್ಲಿ ಯುವ ಸಂಗೀತ ಕಲಾವಿದರನ್ನು ಗೌರವಿಸುತ್ತಾ ಅವರು ಮಾತನಾಡಿ ಕುಂದಾಪುರದಲ್ಲಿ ಸಂಗೀತ ಭಾರತಿ ಟ್ರಸ್ಟ್ ರಿ., ಚಿರಂತನ ಚಾರಿಟೆಬಲ್ ಟ್ರಸ್ಟ್ ರಿ. ಸುರತ್ಕಲ್ ಸಂಯುಕ್ತ ಆಶ್ರಯದಲ್ಲಿ ಹದಿಮೂರು ಮಂದಿ ಯುವ ಕಲಾವಿದರು ತಮ್ಮ ಸಂಗೀತ ಹಾಗೂ ಸಂಗೀತ ವಾದನಗಳ ಪ್ರತಿಭೆ ತೋರಿಸಲು ಅವಕಾಶ ನೀಡಿರುವುದು ಬಹಳ ಅಭಿನಂದನೀಯ ಕಾರ್ಯವಾಗಿದೆ. ಈ ಪ್ರತಿಭೆಗಳೆಲ್ಲ ಉತ್ತಮ ಭವಿಷ್ಯವಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಗೀತ ಭಾರತಿ ಅಧ್ಯಕ್ಷ ಕೆ. ಶ್ರೀಧರ ಕಾಮತ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ಣಾಟಕ ಬ್ಯಾಂಕ್ ಎ. ಜಿ. ಎಂ. ರಾಜಾರಾಮ್ ಹಾಗೂ ಕರ್ಣಾಟಕ ಬ್ಯಾಂಕ್‌ನ ಮಾಜಿ ನಿರ್ದೇಶಕ ಡಾ. ಎಚ್. ರಾಮ ಮೋಹನ ಆಗಮಿಸಿದ್ದರು.

ಚಿರಂತನ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ತೇಜಸ್ವಿ ಜ್ಯೂ. ಶಂಕರ್ ಅತಿಥಿಗಳನ್ನು ಗೌರವಿಸಿದರು. ಆಡಳಿತ ನಿರ್ದೇಶಕ ಭಾರವೀ ದೇರಾಜೆ ಕಲಾವಿದರನ್ನು ಪರಿಚಯಿಸಿದರು. ಅನುರಾಧ ಭಟ್ ಉಡುಪಿ, ಬಸವರಾಜ ವಂದಲಿ ಧಾರವಾಡ, ಸಮರ್ಥ ಹೆಗಡೆ ತಂಗಾರಮನೆ, ಶಮಂತ ದೇಸಾಯಿ, ಪಂಚಮ ಉಪಾಧ್ಯಾಯ ಧಾರವಾಡ, ವಿಭಾ ಹೆಗಡೆ ಯಲ್ಲಾಪುರ, ಅಭಿಷೇಕ ಪ್ರಭು ಮುಂಬೈ, ರವಿ ಶೆಟ್ಟಿ ಧಾರವಾಡ, ಕೌಶಿಕ್ ಭಟ್ ಬೆಂಗಳೂರು, ಅನಂತರಾಯ ನಾಯಕ್ ಬ್ರಹ್ಮಾವರ, ಹರ್ಷಿತ್ ಪಾಟೀಲ್ ಪೇತ್ರಿ ಹಾಗೂ ಕಲಾವಿದರಿಗೆ ಸಹಕರಿಸಿದ ಯುಕ್ತಾ ಹೊಳ್ಳ ಮತ್ತು ರಾಘವೇಂದ್ರ ಆಚಾರ್ ಕುಂದಾಪುರ ಇವರನ್ನು ಗೌರವಿಸಲಾಯಿತು.

ಮ್ಯಾಕ್ಸ್ ಮೀಡಿಯಾ ಉಡುಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಂಡಾರ್‌ಕಾರ‍್ಸ್ ಕಾಲೇಜು ಸಂಸ್ಥೆಗಳು ಹಾಗೂ ಶ್ರೀ ವಿನಾಯಕ ದೇವಸ್ಥಾನ ಆನೆಗುಡ್ಡೆ, ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಸಹಕಾರಕ್ಕೆ ಅಭಿನಂದಿಸಲಾಯಿತು.

Click here

Click here

Click here

Click Here

Call us

Call us

ಕರ್ಣಾಟಕ ಬ್ಯಾಂಕ್‌ನ ಸಿಒಒ ವೈ. ವಿ. ಬಾಲಚಂದ್ರ ಅವರನ್ನು ಸಂಗೀತ ಭಾರತಿ ಟ್ರಸ್ಟ್ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಸಂಗೀತ ಭಾರತಿ ಟ್ರಸ್ಟ್‌ನ ಟ್ರಸ್ಟಿಗಳಾದ ಸೀತಾರಾಮ ನಕ್ಕತ್ತಾಯ, ಡಾ. ಹೆಚ್. ಆರ್. ಹೆಬ್ಬಾರ್, ರೇಖಾ ಕಾರಂತ, ಸುಪ್ರಸನ್ನ ನಕ್ಕತ್ತಾಯ ಉಪಸ್ಥಿತರಿದ್ದರು. ಟ್ರಸ್ಟಿ ಯು. ಎಸ್. ಶೆಣೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನಾರಾಯಣ ಕೆ. ವಂದಿಸಿದರು.

ಬೆಳಿಗ್ಗೆಯಿಂದ ಸಂಜೆ ತನಕ ನಡೆದ ಗಾಯನ, ಬಾನ್ಸುರಿ ವಾದನ, ತಬಲಾ ಜುಗಲಬಂಧಿ, ಗೀಟಾರ್ ವಾದನ ಕಾರ್ಯಕ್ರಮವನ್ನು ಸಂಗೀತ ಆಸಕ್ತರು ಆಸ್ವಾದಿಸಿ, ಕಲಾವಿದರನ್ನು ಅಭಿನಂದಿಸಿದರು.

Leave a Reply