ಕೋಟ: ಸಾಮರ್ಥ್ಯಾಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಜ್ಞಾನ ಪೀಠ ಪ್ರಶಸ್ತಿ ವಿಜೇತ ಕೋಟ ಶಿವರಾಮ ಕಾರಂತರಷ್ಟು ಉತ್ತಮ ಉದಾಹರಣೆ ಆದರ್ಶ ಇನ್ನೋರ್ವರಿಲ್ಲ. ಸರ್ವೇಂದ್ರೀಯವನ್ನು ನಿಗ್ರಹಿಕೊಂಡು ಅವರು ಮಾಡಿರುವ ಸಾಧನೆಯೇ ಅವರನ್ನು ವಿಶ್ವಮಾನ್ಯರನ್ನಾಗಿಸಿದೆ. ಇಂದಿನ ಮಕ್ಕಳಿಗೆ ಅವರೇ ಆದರ್ಶ ಎಂದು ಮಾಬುಕಳ ಚೇತನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಜಿ. ಅಭಿಪ್ರಾಯಪಟ್ಟರು.
ಅವರು ಕಾರಂತ ಥೀಂ ಪಾರ್ಕನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಕಾರ್ಯಕ್ರಮದ 6ನೇ ದಿನದ ಅಂಗವಾಗಿ ಜೇಸಿಐ ಸಾಲಿಗ್ರಾಮ ಕೋಟ ಟೆಂಪಲ್ ಸಿಟಿ, ಗಾಣಿಗ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ ಕೋಟ ಘಟಕ, ಚೇತನ ಪ್ರೌಢಶಾಲೆ ಹಂಗಾರಕಟ್ಟೆ, ಇಂಡಿಕಾ ಬಳಗ ಮಣೂರು ಪಡುಕರೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋಟತಟ್ಟು ಪಂಚಾಯಿತಿ ಸದಸ್ಯೆ ಪಾರ್ವತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಕಾರ್ಯಕ್ರಮದಲ್ಲಿ ಜೇಸಿಐ ಸಾಲಿಗ್ರಾಮ ಕೋಟ ಟೆಂಪಲ್ ಸಿಟಿ ಅಧ್ಯಕ್ಷ ಜೇಸಿ ಕೃಷ್ಣ ಪ್ರಸಾದ, ಗಾಣಿಗ ಸಂಘಟನೆಯ ರಾಜೇಶ್ ಗಾಣಿಗ ಅಚ್ಲಾಡಿ, ಚೇತನಾ ಪ್ರೌಢಶಾಲೆಯ ಶಿಕ್ಷಕ ಚಂದನ್ ಮತ್ತು ಪ್ರತಿಷ್ಠಾನದ ಪ್ರಭಾಕರ ಕಾಂಚನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಜೇಸಿಐ ತರಬೇತುದಾರ ಜೇಸಿ ಕೆ.ಕೆ.ಶಿವರಾಮ ಸ್ವಾಗತಿಸಿ, ಪ್ರಸ್ತಾವಿಸಿದರು. ಗ್ರಂಥಪಾಲಕಿ ಶೈಲಜಾ ಕಾರ್ಯಕ್ರಮ ನಿರೂಪಿಸಿದರು. ಕೋಟತಟ್ಟು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಾರ್ವತಿ ವಂದಿಸಿದರು.