ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತ್ರಾಸಿ ಕಂಚಗೋಡು ಶ್ರೀರಾಮ್ ದೇವಸ್ಥಾನದಲ್ಲಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ವೀರ ಸಾವರ್ಕರ್ ಅವರ ಬಗೆಗಿನ ಪುಸ್ತಕ ವಿತರಣೆ ಮಾಡಲಾಯಿತು.
ಬೈಂದೂರು ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಪ್ರಣಯ ಕುಮಾರ್ ಶೆಟ್ಟಿ ಸ್ಥಳೀಯರಿಗೆ ಪುಸ್ತಕ ವಿತರಿಸಿದರು. ದೇವಸ್ಥಾನದ ಅಧ್ಯಕ್ಷ ಮೋಹನ್ ಖಾರ್ವಿ, ಹಿಂದೂ ಮುಖಂಡ ರಾಘು ಆರಾಟೆ. ರಾಮದಾಸ್ ಕಂಚಕೊಡು ಹಾಗೂ ಇನ್ನಿತರರು ಉಪಸ್ಥಿತರಿದ್ದರು.