ಶ್ರೀ ರಾಮಕೃಷ್ಣ ಕುಟೀರದಲ್ಲಿ ನವರಾತ್ರಿ ಆಚರಣೆ. ಧಾರ್ಮಿಕ ಪಠಣ, ಸಂಗೀತ ತರಬೇತಿ ಶಿಬಿರ ಉದ್ಘಾಟನೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಎಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಿ ನವರಾತ್ರಿ ಅಂಗವಾಗಿ ಒಂಬತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

Call us

Click Here

ವಿಜಯ ದಶಮಿಯಂದು ಧಾರ್ಮಿಕ ಪಠಣ ಹಾಗೂ ಸಂಗೀತ ತರಬೇತಿ ಶಿಬಿರ – ‘ವಿದ್ಯಾದಾನ’ಕ್ಕೆ ಜಿಲ್ಲಾ ಭಗವದ್ಗೀತಾ ಅಭಿಯಾನದ ಪ್ರಶಿಕ್ಷಕಿ ಯಶೋದಾ ಅಡಿಗ ಅವರು ಚಾಲನೆ ನೀಡಿದರು. ಈ ವೇಳೆ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ, ನಾಗಶ್ರೀ ಮಧ್ಯಸ್ಥ ಹಾಗೂ ಕುಟೀರದ ವಿದ್ಯಾರ್ಥಿಗಳು ಹಾಜರಿದ್ದರು.

ಆಶ್ರಮದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಶರನ್ನವರಾತ್ರಿಯ ಪ್ರತಿದಿನ ಬೆಳಿಗ್ಗೆ ಬ್ರಾಹ್ಮಿ ಮಹೂರ್ತದಲ್ಲಿ ಪ್ರಾತಃ ಪೂಜೆ, ಚಂಡಿಕಾ ಪಾರಾಯಣ, ಆಶ್ರಮದ ವಿದ್ಯಾರ್ಥಿಗಳಿಂದ ಸಪ್ತ ಶತಿಯಲ್ಲಿ ಬರುವ ದೇವಿ ಸ್ತುತಿಗಳು, ಲಕ್ಷ್ಮೀ ಅಷ್ಟೋತ್ತರ, ಮಹಾಕಾಳಿ ಮಹಾಲಕ್ಷ್ಮಿ, ಮಹಾಸರಸ್ವತಿಯ ಅಷ್ಟಕ ಹಾಗೂ ವಿವಿಧ ಸ್ತೋತ್ರಗಳ ಪಠಣ, ಉಪನಿಷತ್ ಪಠಣ ಪೂಜೆ, ಪ್ರಸಾದ ವಿತರಣೆ, ವಿವಿಧ ದೇವಿ ಸ್ತುತಿಗಳೊಂದಿಗೆ ಭಜನೆ, ಚಂಡಿಕಾ ಪಾರಾಯಣ, ಪೂಜೆ, ಪ್ರಸಾದ ವಿತರಣೆ ನಡೆಯಿತು.

ನವರಾತ್ರಿಯ ವಿವಿಧ ದಿನಗಳಲ್ಲಿ ಗಣಹೋಮ, ಲಲಿತಾ ಪಂಚಮಿಯಂದು ಸಾಮೂಹಿಕ ಲಲಿತ ಸಹಸ್ರನಾಮ ಪಠಣ, 101 ವಿಷ್ಣು ಸಹಸ್ರನಾಮ ಪಠಣ, ದುರ್ಗಾಷ್ಟಮಿಯಂದು ದುರ್ಗಾಹವನ, ಕುಮಾರಿ ಪೂಜೆ, ಸುಹಾಸಿನಿ ಪೂಜೆ, ಮಹಾನವಮಿಯಂದು ಸಾಮೂಹಿಕ ಚಂಡಿಕಾ ಪಾರಾಯಣ ನಡೆಯಿತು.

Leave a Reply