ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಪುರಾಣ ಪ್ರಸಿದ್ಧ ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಅಂಗವಾಗಿ ಚಂಡಿಕಾ ಹವನ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಶುಕ್ರವಾರ ನಡೆಯಿತು.
ಬೆಳಿಗ್ಗೆ 8 ಗಂಟೆಗೆ ದೇವತಾ ಪ್ರಾರ್ಥನೆಯೊಂದಿಗೆ ಚಂಡಿಕಾ ಹವನದ ಧಾರ್ಮಿಕ ಅನುಷ್ಠಾನಗಳು ಪ್ರಾರಂಭಗೊಂಡು ಮಧ್ಯಾಹ್ನ ಯಜ್ಞದ ಪೂರ್ಣಾಹುತಿಯೊಂದಿಗೆ ಚಂಡಿಕಾ ಹವನ ಸಂಪನ್ನಗೊಂಡಿತು. ಹರಕೆ ಸೀರೆಗಳ ಏಲಂ, ಭಜನಾ ಕಾರ್ಯಕ್ರಮ, ಬಳಿಕ ಶ್ರೀದೇವಿಗೆ ಮಹಾಪೂಜೆ, ಮಹಾಸಮಾರಾಧನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ವಿಜೃಂಭಣೆಯಿಂದ ನಡೆಯಿತು.
ದೇವಸ್ಥಾನದ ಅರ್ಚಕರು, ಪುರೋಹಿತರು, ದೇವಳದ ಆಡಳಿತ ಮಂಡಳಿ ಸದಸ್ಯರು, ಕುಳಾವಿ ಭಜಕರು, ಸಮಾಜಬಾಂಧವರು, ಭಕ್ತರು ಉಪಸ್ಥಿತರಿದ್ದರು.