ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಕ್ತದಾನದಿಂದ ಇನ್ನೋರ್ವರ ಜೀವ ಉಳಿಸುವುದು ಮಾತ್ರವಲ್ಲದೆ ರಕ್ತದಾನಿಗಳಿಗೂ ಸಹ ಹೃದಯ ಸಂಬಂಧಿ ಕಾಯಿಲೆಗಳ ನಿವಾರಣೆ, ಮಾನಸಿಕವಾಗಿ ಮತ್ತು ಕ್ರಿಯಾತ್ಮಕವಾಗಿ ಬದುಕುವ ಮನೋಭಾವ, ಉತ್ಸುಕತೆಯನ್ನು ಮತ್ತು ಸಾಮಾಜಿಕ ಸೇವೆಯನ್ನು ಮಾಡಿದ ಸಂತೃಪ್ತಿ ಮನೋಭಾವವನ್ನು ಮತ್ತು ಜೀವನ ಸಾರ್ಥಕತೆಯ ಸಾರವನ್ನು ‘ಸ್ವಯಂ ಪ್ರೇರಿತ ರಕ್ತದಾನ ನೀಡುತ್ತದೆ ಎಂದು ಶಿಬಿರವನ್ನು ಬೈಂದೂರು ಸ. ಪ್ರ. ದ. ಕಾಲೇಜಿನ ಪ್ರಾಂಶುಪಾಲರಾದ ಡಾ. ರಘು ನಾಯ್ಕ ಹೇಳಿದರು.
ಮೊಗವೀರ ಯುವ ಸಂಘಟನೆ ರಿ. ಬೈಂದೂರು-ಶಿರೂರು ಘಟಕದ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರಿನಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಅಂಬಲಪಾಡಿ ಉಡುಪಿ, ರಕ್ತನಿಧಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಕುಂದಾಪುರ ಹಾಗೂ ಬೈಂದೂರು, ರಕ್ತನಿಧಿ ಕೇಂದ್ರ ಇವರುಗಳ ಸಹಯೋಗದಲ್ಲಿ ‘ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ’ ಮತ್ತು ‘ಯುವ ರೆಡ್ ಕ್ರಾಸ್ ಘಟಕ’ ಉದ್ಘಾಟಿಸಿ ಮಾತನಾಡಿದರು
ಮೊಗವೀರ ಯುವ ಸಂಘಟನೆ ಬೈಂದೂರು-ಶಿರೂರು ಘಟಕದ ಅಧ್ಯಕ್ಷರಾದ ರವಿರಾಜ್ ಚಂದನ್ ಕಳವಾಡಿ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆ ಬೈಂದೂರಿನ ಸಭಾಪತಿಗಳಾದ ನಿತಿನ್ ಶೆಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು
ಮುಖ್ಯ ಅತಿಥಿಗಳಾಗಿ ಮೊಗವೀರ ಯುವ ಸಂಘಟನೆ ರಿ. ಉಡುಪಿ ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷರಾದ ಶಿವರಾಮ್ ಕೆ. ಎಮ್., ಭಾರತೀಯ ರೆಡ್ಕ್ರಾಸ್ ಸಂಸ್ಥೆ ಬೈಂದೂರಿನ ಸಭಾಪತಿಗಳಾದ ಖಜಾಂಚಿಗಳಾದ ಸಂತೋಷ ಶೆಟ್ಟಿ, ಕುಂದಾಪುರದ ಕಾರ್ಯದರ್ಶಿಗಳಾದ ವೈ. ಸೀತಾರಾಮ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಗಣೇಶ್ ಆಚಾರ್ಯ, ಮೊಗವೀರ ಯುವ ಸಂಘಟನೆ ಬೈಂದೂರು – ಶಿರೂರು ಘಟಕದ ಗೌರವ ಸಲಹೆಗಾರರಾದ ಸಂಜೀವ ಮೊಗವೀರ ದೊಂಬೆ, ದಿನೇಶ್ ಎಂ. ಕುಂದರ್ ಉಪಸ್ಥಿತರಿದ್ದರು.
ಮೊಗವೀರ ಯುವ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಕೃಷ್ಣ ಬೈಂದೂರು ಸ್ವಾಗತಿಸಿ ಯುವ ರೆಡ್ಕ್ರಾಸ್ ಘಟಕದ ಸಂಯೋಜಕರಾದ ಡಾ. ಶಿವಕುಮಾರ್ ಪಿ. ವಿ. ಅವರು ವಂದಿಸಿದರು. ಮೊಗವೀರ ಯುವ ಸಂಘಟನೆಯ ಬೈಂದೂರು ಘಟಕದ ಕಾರ್ಯದರ್ಶಿ ಗೌತಮ್ ತಗ್ಗರ್ಸೆ ಕಾರ್ಯಕ್ರಮವನ್ನು ನಿರೂಪಿಸಿದರು. 58 ಯೂನಿಟ್ ರಕ್ತವನ್ನು ಸಂಗ್ರಹಿಸುವ ಮೂಲಕ ಸಂಪನ್ನಗೊಂಡಿತು.