ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗೆಹರಿಸದೇ, ಸುಳ್ಳು ಹೇಳಿಕೆ ನೀಡೋದನ್ನ ಸಚಿವರು ನಿಲ್ಲಿಸಲಿ: ಕೆ. ವಿಕಾಸ್ ಹೆಗ್ಡೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಅರಣ್ಯ ಇಲಾಖೆ ಸುಮಾರು ಒಂಬತ್ತು ಲಕ್ಷ ಹೆಕ್ಟೇರಿಗೂ ಹೆಚ್ಚು ಪ್ರದೇಶವನ್ನು ಡೀಮ್ಡ್ ಅರಣ್ಯ ಎಂದು ಗುರುತಿಸಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಾದ ದೋಷವನ್ನು ಸರಿಪಡಿಸುವ ಬದಲಿಗೆ ರಾಜ್ಯದ ಸಚಿವರು ಹಾಗೂ ಶಾಸಕರುಗಳು ಡೀಮ್ಡ್ ಸಮಸ್ಯೆ ಪರಿಹಾರವಾಗಿದೆ ಎನ್ನುವ ಹಾರಿಕೆಯ ಉತ್ತರವನ್ನು ಕೊಟ್ಟು ಮುಗ್ದ ಜನರನ್ನು ದಾರಿತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ಕೆ. ವಿಕಾಸ್ ಹೆಗ್ಡೆ ಆರೋಪಿಸಿದ್ದಾರೆ.

Call us

Click Here

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ಅರಣ್ಯ ಇಲಾಖೆ ಸುಮಾರು ಒಂಬತ್ತು ಲಕ್ಷ ಹೆಕ್ಟೇರಿಗೂ ಹೆಚ್ಚು ಪ್ರದೇಶವನ್ನು ಡೀಮ್ಡ್ ಅರಣ್ಯ ಎಂದು ಗುರುತಿಸಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿತ್ತು. ಆದರೆ ಈ ಪಟ್ಟಿಯಲ್ಲಿ ರೈತರ ಕೃಷಿ ಭೂಮಿ, ಕೊಟ್ಟಿಗೆ, ಮನೆ, ತೋಟ ಮೊದಲಾದವುಗಳು ಕೂಡ ಸೇರಿದೆ. ಇದರಿಂದ ರೈತರು ಇದರಿಂದ ಅತೀವ ತೊಂದರೆಗೆ ಈಡಾಗಿದ್ದಾರೆ. ಇದರಿಂದ ಅರ್ಜಿ ನಮೂನೆ 94ಸಿ, 53, 57 ಯಾವುದರಲ್ಲೂ ಭೂ ಮಂಜೂರಾತಿ ಆಗುತ್ತಿಲ್ಲ. ಹಿಂದೆ ಮಂಜೂರಾದ ಭೂಮಿಗೆ ಹಕ್ಕುಪತ್ರ, ಪಹಣಿ ಯಾವುದೂ ಸಿಗುತ್ತಿಲ್ಲ.

ಆದರೆ ಈ ಸಮಸ್ಯೆ ಪರಿಹಾರಕ್ಕೆ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದನ್ನು ಬಿಟ್ಟು ಸಚಿವರು ಹಾಗೂ ಶಾಸಕರುಗಳು ಡೀಮ್ಡ್ ಸಮಸ್ಯೆ ಪರಿಹಾರವಾಗಿದೆ ಎನ್ನುವ ಹಾರಿಕೆಯ ಉತ್ತರವನ್ನು ಕೊಟ್ಟು ಮುಗ್ದ ಜನರನ್ನು ದಾರಿತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಇನ್ನಾದರೂ ರೈತರ, ಜನಸಾಮಾನ್ಯರ ಅತೀ ದೊಡ್ಡ ಸಮಸ್ಯೆಯಾಗಿರುವ ಈ ಡೀಮ್ಡ್ ಅರಣ್ಯ ಎನ್ನುವ ಅಧಿಕಾರಶಾಹಿ ನಿರ್ಮಿತ ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಿ ಎಂದು ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.

Leave a Reply