ಗಂಗೊಳ್ಳಿ: ಗಂಗೊಳ್ಳಿಯ ಶ್ರೀ ವೀರೇಶ್ವರ ದೀಪೋತ್ಸವ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಅಶೋಕ ಪೂಜಾರಿ ಆಯ್ಕೆಯಾಗಿದ್ದಾರೆ.
ಇತ್ತೀಚಿಗೆ ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಜರಗಿದ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು.
ಸುಧೀರ ಪಂಡಿತ್ (ಗೌರವಾಧ್ಯಕ್ಷ), ವೇದಮೂರ್ತಿ ಜಿ.ಲಕ್ಷ್ಮೀನಾರಾಯಣ ಭಟ್ (ಮಾರ್ಗದರ್ಶಕರು), ಕೃಷ್ಣ ಪೂಜಾರಿ ಹೆಮ್ಮಾಡಿಮನೆ (ಪ್ರಧಾನ ಕಾರ್ಯದರ್ಶಿ), ಪ್ರವೀಣ ಗಾಣಿಗ, ಜಿ.ರಾಮ ಖಾರ್ವಿ ಗುಡ್ಡೆಕೇರಿ, ಮಹೇಶ ಎಸ್‌ಆರ್‌ಜಿ, ಶಂಕರ ಪೂಜಾರಿ, ಗಜೇಂದ್ರ ಗಾಣಿಗ, ಲಕ್ಷ್ಮಣ ಪಿ.ಖಾರ್ವಿ ಗುಡ್ಡೆಕೇರಿ (ಉಪಾಧ್ಯಕ್ಷರು), ರಾಜ ಟಿ.ಎಸ್. (ಕಾರ್ಯದರ್ಶಿ), ಗೋಪಾಲ ಖಾರ್ವಿ ದಾವನಮನೆ (ಕೋಶಾಧಿಕಾರಿ), ಶೇಖರ ಜಿ. (ಲೆಕ್ಕ ಪರಿಶೋಧಕ), ಎಚ್.ಎಸ್.ಚಿಕ್ಕಯ್ಯ ಪೂಜಾರಿ (ಸಲಹೆಗಾರ), ಸತೀಶ ಜಿ., ದಿನೇಶ ಪೂಜಾರಿ ಕೋಟೆಬೈಲು ಮನೆ, ಎಂ.ಪಿ. ಮಣಿ ಖಾರ್ವಿ, ಗುಡ್ಡೆ ಸಂತೋಷ ಖಾರ್ವಿ, ನಾಗರಾಜ ಗಾಣಿಗ, ನಾರಾಯಣ ಖಾರ್ವಿ ದಾವನಮನೆ, ಶ್ರೀನಿವಾಸ ಖಾರ್ವಿ ಹೊಳೆಬದಿ, ಗುಡ್ಡೆ ಹರೀಶ ಖಾರ್ವಿ, ನವೀನ ಜಿ., ಶ್ರೀನಿವಾಸ ಖಾರ್ವಿ ದಾವನಮನೆ, ನಾಗರಾಜ ಖಾರ್ವಿ ದಾವನಮನೆ, ರಘುವೀರ ಕೆ., ಉತ್ತ ಚಂದ್ರ ಖಾರ್ವಿ ದಾಕುಹಿತ್ಲು, ವೆಂಕಟೇಶ ಕೋಟಾನ್ ಖಾರ್ವಿಕೇರಿ ಹಾಗೂ ರಾಘವೇಂದ್ರ ಗಾಣಿಗ (ಸಾಂಸ್ಕೃತಿಕ ಕಾರ್ಯದರ್ಶಿಗಳು) ಆಯ್ಕೆಯಾಗಿದ್ದಾರೆ.
ಸುನಿಲ್ ಹೆಚ್. ಜಿ. ಬೈಂದೂರು
ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.





