ವಿಜೃಂಭಣೆಯಿಂದ ಜರಗಿದ ಕೊಡೇರಿ ಕಂಬಳೋತ್ಸವ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಬಿಲ್ಲವ ಸಮಾಜ ಸೇವಾ ಸಂಘ ರಿ. ಕೊಡೇರಿ ಇವರ ಆಶ್ರಯದಲ್ಲಿ ಕೊಡೇರಿ ಹಕ್ರೆಮಠ ಶ್ರೀ ಜೈನ ಜಟ್ಟಿಗೇಶ್ವರ ದೇವರ 76ನೇ ವರ್ಷದ ಕಂಬಳೋತ್ಸವವು ನ.21ರಂದು ಕೊಡೇರಿಯಲ್ಲಿ ವಿಜೃಂಭಣೆಯಿಂದ ನಡೆಯಿತು.

Call us

Click Here

ಪ್ರತಿವರ್ಷ ಸಾಂಪ್ರದಾಯಕವಾಗಿ ಜರಗುವ ಈ ಐತಿಹಾಸಿಕ ಕಂಬಳೋತ್ಸವಕ್ಕೆ ಊರ ಮತ್ತು ಅಕ್ಕಪಕ್ಕದ ಊರಿನ ಕೋಣಗಳಲ್ಲದೆ ದೂರದ ಭಟ್ಕಳದಿಂದ ಬಾರ್ಕುರು ವರೆಗಿನ ಕೋಣಗಳನ್ನು ಮಾಲಕರು ತರುವುದಲ್ಲದೆ ಈ ಕಂಬಳೋತ್ಸವದಲ್ಲಿ ಜರಗುವ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸುವುದು ವಿಶೇಷವಾಗಿದೆ ಸುಮಾರು 60ಜೋಡಿ ಕೋಣಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದು ಕಡಿಮೆ ಅವಧಿಯಲ್ಲಿ ಗುರಿ ತಲುಪಿದ ಕೋಣಗಳು ತಮ್ಮ ಮಾಲಕರಿಗೆ ಶಾಶ್ವತ ಫಲಕಗಳೊಂದಿಗೆ ನಗದು ಬಹುಮಾನಗಳನ್ನು ತಂದು ಕೊಡುವಲ್ಲಿ ಯಶಸ್ವಿಯಾದವು. ಕೋಣಗಳು ತಮ್ಮ ಸವಾರನೊಂದಿಗೆ ನಿಗದಿತ ಗುರಿ ತಲುಪಲು ತೆಗೆದುಕೊಂಡ ಸಮಯವನ್ನು ಗುರುತಿಸಲು ಸೆನ್ಸಾರ್ ಅಳವಡಿಸಲಾಗಿದ್ದು ಆ ಮೂಲಕ ಕಡಿಮೆ ಅವಧಿಯಲ್ಲಿ ಗುರಿ ತಲುಪಿದ ಕೋಣಗಳನ್ನು ವಿಜೇತ ಕೋಣಗಳೆಂದು ಘೋಷಿಸಿ ಅವುಗಳ ಮಾಲಕರುಗಳಿಗೆ ನಗದು ಪುರಸ್ಕಾರದೊಂದಿಗೆ ಶಾಶ್ವತ ಫಲಕ ನೀಡಿ ಗೌರವಿಸಲಾಯಿತು ಭಾಗವಹಿಸಿದ ಎಲ್ಲ ಕೋಣಗಳಲ್ಲಿ ಎರಡು ಜೊತೆ ಅದೃಷ್ಟ ಕೋಣಗಳನ್ನು ಆಯ್ಕೆ ಮಾಡಿ ಅವುಗಳ ಮಾಲಕರಿಗೆ ವಿಶೇಷ ಪುರಸ್ಕಾರ ನೀಡಲಾಯಿತು.

ಕಂಬಳೋತ್ಸವಕ್ಕೆ ತಮ್ಮ ಕೋಣಗಳೊಂದಿಗೆ ಆಗಮಿಸಿದ ಮಾಲಕರಿಗೆ ವೀಳ್ಯೆದೊಂದಿಗೆ ಸಾಂಪ್ರದಾಯಕವಾಗಿ ಸ್ವಾಗತಿಸಿರುವುದಲ್ಲದೆ ಸಂಘದ ಸ್ಮರಣಿಕೆಯನ್ನು ನೀಡಿ ಬರಮಾಡಿ ಕೊಳ್ಳಲಾಯಿತು

ಆರಂಭದಲ್ಲಿ ದಿವಂಗತ ಕೋಟಿ ಪೂಜಾರಿ ಗಜ್ನಾರಮನೆ ಅವರ ಕೋಣಗಳನ್ನು ಓಡಿಸುವುದರ ಮೂಲಕ 76ನೇ ವರ್ಷದ ಕಂಬಳೋತ್ಸವಕ್ಕೆ ಚಾಲನೆ ನೀಡಲಾಯಿತು ಆ ಬಳಿಕ ಸಬ್ ಜ್ಯೂನಿಯರ್, ಹಗ್ಗ ಕಿರಿಯ ವಿಭಾಗ, ಹಗ್ಗ ಹಿರಿಯ ವಿಭಾಗ ಮತ್ತು ಹಲಗೆ ವಿಭಾಗಗಳಿಗೆ ಸ್ಪರ್ಧಾ ಓಟ ಆರಂಭಿಸಲಾಯಿತು.

ವಿಜೇತ ಕೋಣಗಳ ಮಾಲಕರ ಹೆಸರುಗಳು:
ಸಬ್ ಜ್ಯೂನಿಯರ್ ವಿಭಾಗ: ಪ್ರಥಮ ಹೆಚ್. ಎನ್. ನಿವಾಸ್ ಫಿನ್ನುಪಾಲ್ ಭಟ್ಕಳ, ದ್ವಿತೀಯ ದಿ. ಶೀನ ಪೂಜಾರಿ ಪಡುಕೇರಿ ಕೋಟ, ತ್ರತೀಯ ಸೂರಾಲು ಗುಂಡಿಬೈಲು ರಶ್ವನ್ ಉದಯ ನಾಯ್ಕ್ ಪೇತ್ರಿ

Click here

Click here

Click here

Click Here

Call us

Call us

ಹಗ್ಗ ಕಿರಿಯ ವಿಭಾಗ: ಪ್ರಥಮ ವಿಶ್ವನಾಥ ದೇವಾಡಿಗ ನರಿಗುಡಿ, ದ್ವಿತೀಯ ಸೂರಾಲು ಗುಂಡಿಬೈಲು ರಶ್ವನ್ ಉದಯ ನಾಯ್ಕ್ ಪೇತ್ರಿ, ತ್ರತೀಯ ರಿಜ್ವಾನ್ ಬ್ಯಾರಿ ಕೋಟ ಪಡುಕೆರೆ

ಹಗ್ಗ ಹಿರಿಯ ವಿಭಾಗ: ಪ್ರಥಮ ವೆಂಕಟ್ ಪೂಜಾರಿ ಸಸಿಹಿತ್ಲು ಬೈಂದೂರು, ದ್ವಿತೀಯ ನೀಲಕಂಠ ಹುದರ್ ತಗ್ಗರ್ಸೆ ತ್ರತೀಯ ವರುಣ ವರಶ್ರೀ ವಾದಿರಾಜ್ ಹಾಲಾಡಿ

ಹಲಗೆ ವಿಭಾಗ: ಪ್ರಥಮ ನೀರಜ್ ಆತ್ಮಜ್ ಬಾರ್ಕುರು, ದ್ವಿತೀಯ ಶ್ರೀರಾಮ್ ಚೈತ್ರಾ ಪರಮೇಶ್ವರ ಭಟ್ ಬೊಳಂಬಳ್ಳಿ, ತ್ರತೀಯ ಆನಂದ ದೇವಾಡಿಗ ಮೇಲ್ ಗುಡ್ಡೆಮನೆ ತೆಕ್ಕಟ್ಟೆ

ಅದೃಷ್ಟ ಕೋಣಗಳ ಮಾಲಕರು: ಪ್ರಥಮ ಪಂಜು ಪೂಜಾರಿ ಗದ್ದೆಮನೆ ನಾಗೂರು, ದ್ವಿತೀಯ ದಿಶಾ ಶ್ರೇಯಸ್ ನಾರಾಯಣ ದೇವಾಡಿಗ ಮಿಯ್ಯಾಣಿ

ಹೀಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿರುವ ಕೋಣಗಳ ಮಾಲಕರೊಂದಿಗೆ ಬೇರೆ ಬೇರೆ ಭಾಗಗಳಿಂದ ಆಗಮಿಸಿದ ಕಂಬಳದ ಅಭಿಮಾನಿಗಳು ಮತ್ತು ಊರ ಗ್ರಾಮಸ್ಥರು ಬಹು ಸಂಖ್ಯೆಯಲ್ಲಿ ನೆರೆದಿರುವುದು ಕಂಬಳೋತ್ಸವಕ್ಕೆ ಇನ್ನಷ್ಟು ಮೆರಗು ನೀಡಿತು ಆನಂದ ಪೂಜಾರಿ ಕೊಡೇರಿ ಮತ್ತು ಗಣೇಶ ಕೊಠಾರಿ ಕಂಬಳದ ವೀಕ್ಷಕ ವಿವರಣೆಯೊಂದಿಗೆ ಕ್ಷಣ ಕ್ಷಣದ ಮಾಹಿತಿಯನ್ನು ಕಂಬಳಾಭಿಮಾನಿಗಳಿಗೆ ನೀಡಿದರು

ಕೊನೆಯಲ್ಲಿ ಸಮಾರೋಪ ಸಮಾರಂಭ ಆಯೋಜಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು ಸಂಘದ ಸಂಸ್ಥಾಪಕರು ಮತ್ತು ಗೌರವಾಧ್ಯಕ್ಷರಾದ ಮಹಾದೇವ ಪೂಜಾರಿ, ಅಧ್ಯಕ್ಷರಾದ ರಾಘವೇಂದ್ರ ಪೂಜಾರಿ, ಕಾರ್ಯದರ್ಶಿ ಸುಧೀರ್ ಪೂಜಾರಿ, ಕೋಶಾಧಿಕಾರಿ ರಾಘವೇಂದ್ರ ಸಿ. ಪೂಜಾರಿ, ಎನ್. ಜಿ. ಪೂಜಾರಿ, ವೆಂಕಟೇಶ ಪೂಜಾರಿ, ಕಂಬಳ ಸಮಿತಿ ಅಧ್ಯಕ್ಷ ಭಾಸ್ಕರ ಎಸ್. ಪೂಜಾರಿ, ಕಾರ್ಯದರ್ಶಿ ದಿನೇಶ ಪೂಜಾರಿ, ಶೇಖರ ಪೂಜಾರಿ, ಪ್ರಮೋದ ಪೂಜಾರಿ, ಸಿ. ಎಸ್. ಖಾರ್ವಿ, ವೆಂಕಟ ಪೂಜಾರಿ, ಶಾಂತರಾಮ ಶೆಟ್ಟಿ, ವಿಜಯ ಪೂಜಾರಿ, ಮಂಜುನಾಥ ಪೂಜಾರಿ ವಿಜೇತರಿಗೆ ಮತ್ತು ಸವಾರರಿಗೆ ಪುರಸ್ಕಾರಗಳನ್ನು ವಿತರಿಸಿ ಅಭಿನಂದಿಸಿದರು.

ಶಾಸಕ ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಗೋವಿಂದ ಬಾಬು ಪೂಜಾರಿ, ಬಾಬು ಹೆಗ್ಡೆ, ದೀಪಕ್ ಕುಮಾರ ಶೆಟ್ಟಿ ಕಂಬಳೋತ್ಸವಕ್ಕೆ ಆಗಮಿಸಿ ಶುಭಕೋರಿದರು

ಕೃಷ್ಣ ಪೂಜಾರಿ, ರವಿರಾಜ್ ಪೂಜಾರಿ, ಸಂಜೀವ ಪೂಜಾರಿ, ಭಾಸ್ಕರ ಪೂಜಾರಿ, ಸುರೇಶ ಪೂಜಾರಿ, ಶಿವಾನಂದ ಪೂಜಾರಿ, ಗಣೇಶ ಪೂಜಾರಿ, ನಾಗರಾಜ ಪೂಜಾರಿ ಮತ್ತು ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಸಹಕರಿಸಿದರು.

ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಆನಂದ ಪೂಜಾರಿ ಕೊಡೇರಿ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರೆ ಪ್ರಧಾನ ಕಾರ್ಯದರ್ಶಿ ಸುಧೀರ್ ಪೂಜಾರಿ ಕಾಡ್ಕೇರಿ ವಂದಿಸಿದರು

Leave a Reply