ಬೈಂದೂರು ಗಾಂಧಿ ಮೈದಾನ ಬಿಟ್ಟು ಬೇರೆಲ್ಲಾದರೂ ಪುರಭವನ ನಿರ್ಮಿಸಿ – ಮೈದಾನ ಸಂರಕ್ಷಣಾ ಸಮಿತಿ ಆಗ್ರಹ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸಾಹಿತಿ ಮೊಗೇರಿ ಗೋಪಾಲಕೃಷ್ಣ ಅಡಿಗರ ಹೆಸರಿನಲ್ಲಿ ಬೈಂದೂರಿನಲ್ಲಿ ನಿರ್ಮಿಸಲು ಹೊರಟಿರುವ ಪುರಭವನವನ್ನು ಗಾಂಧಿ ಮೈದಾನ ಹೊರತುಪಡಿಸಿ, ಪಟ್ಟಣ ಪಂಚಾಯತ್ ವ್ಯಾಪ್ತಿಯ ಬೇರೆ ಭಾಗದಲ್ಲಿ ನಿರ್ಮಿಸಲಿ ಎಂದು ಬೈಂದೂರು ಗಾಂಧಿ ಮೈದಾನ / ಕ್ಯಾಂಪಸ್ ಗ್ರೌಂಡ್ / ಬಂಗಲಿ ಝೆಡ್ ಮೈದಾನ ಸಂರಕ್ಷಣಾ ಸಮಿತಿಯ ಸುಬ್ರಹ್ಮಣ್ಯ ಬಿಜೂರು ಹೇಳಿದರು.

Call us

Click Here

Watch video

ಅವರು ಬೈಂದೂರಿನಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಗಾಂಧಿ ಮೈದಾನದ ಜಾಗ ರಕ್ಷಣಾ ಇಲಾಖೆಗೆ ಸಂಬಂಧಿಸಿದ್ದಾಗಿದೆ. ಪದವಿಪೂರ್ವ ಕಾಲೇಜಿನ ಆಟದ ಮೈದಾನವಾಗಿ ಮಾತ್ರ ಬಳಸಿಕೊಳ್ಳುವಂತೆ ಹಿಂದಿನ ದ.ಕ ಜಿಲ್ಲಾಧಿಕಾರಿ ಷರತ್ತುಬದ್ಧ ಅನುಮತಿ ನೀಡಿದ್ದರು. ಈ ಜಾಗದಲ್ಲಿ ಪುರಭವನ ನಿರ್ಮಿಸಿ ಬೈಂದೂರು ಹೃದಯ ಭಾಗದಲ್ಲಿರುವ ಏಕೈಕ ಮೈದಾನವನ್ನು ಹಾಳು ಮಾಡುವುದರ ಬದಲಿಗೆ, ಬೇರೆಡೆ ಪುರಭವನ ನಿರ್ಮಿಸುವುದು ಒಳಿತು ಎಂದರು.

ಸಮಿತಿಯ ಗಿರೀಶ್ ಬೈಂದೂರು ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಮೈದಾನದ ಜಾಗವನ್ನು ಕಬಳಿಸಿದರೆ ಮತ್ತೊಂದು ಮೈದಾನ ನಿರ್ಮಿಸಲು ಸಾಧ್ಯವಿಲ್ಲ. ಮಕ್ಕಳಿಂದ ವಯೋವೃದ್ಧರ ತನಕ ಪ್ರತಿಯೊಬ್ಬರಿಗೂ ಮೈದಾನದ ಅಗತ್ಯವಿದೆ. ಮೈದಾನ ಕಿರಿದಾಗುತ್ತಾ ಹೋದರೆ ಉತ್ತಮ ಕ್ರೀಡಾಪಟುಗಳು ತರಬೇತಿ ಪಡೆಯಲು ಹೇಗೆ ಸಾಧ್ಯ. ಸಾಹಿತಿ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರ ಬಗ್ಗೆ ನಮಗೆ ಹೆಮ್ಮೆಯಿದ್ದು, ಪುರಭವನ ಬೇರೆ ಕಡೆಯಲ್ಲಿ ಮಾಡಲು ನಮಗೆ ಅಭ್ಯಂತರವಿಲ್ಲ. ಅದಕ್ಕಾಗಿ ಮೈದಾನ ಬಳಸಿಕೊಳ್ಳುವುದು ಸರಿಯಲ್ಲ. ಈ ವಿಷಯವನ್ನು ಶಾಸಕರು, ಸಂಸದರ ಗಮನಕ್ಕೆ ತರಲಾಗಿದ್ದು, ಸ್ಪಂದಿಸದಿದ್ದರೆ ಕೋರ್ಟ್ ಮೆಟ್ಟಿಲೇರುವುದಾಗಿ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಶಿವರಾಜ ಯೋಜನಾನಗರ, ಸಮಿತಿಯ ರಾಘವೇಂದ್ರ ಪಡುವರಿ, ಮಂಗೇಶ್ ಶ್ಯಾನುಭೋಗ್, ಗಣೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Leave a Reply