ಆಳ್ವಾಸ್: ಸ್ಟೆಲಿಯಂ ಟೆಕ್ನಾಲಜಿ ಆಂಡ್ ಇನೋವೇಶನ್ ಸೆಂಟರ್ಗೆ ಚಾಲನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ
: ಹ್ಯೂಸ್ಟನ್ ಮೂಲದ ಮ್ಯಾನುಫಾಕ್ಚರಿಂಗ್ ಹಾಗೂ ಲಾಜಿಸ್ಟಿಕ್ಸ್ ಸಂಬಂಧಿತ ‘ಸ್ಟೆಲಿಯಂ ಇಂಕ್’ ಅಂತರಾಷ್ಟ್ರೀಯ ಕಂಪೆನಿಯ ಸಹಭಾಗಿತ್ವದಲ್ಲಿ ವಿನೂತನ ತಂತ್ರಜ್ಞಾನ ಆಧಾರಿತ ‘ಸ್ಟೆಲಿಯಂ ಟೆಕ್ನಾಲಜಿ ಆಂಡ್ ಇನೋವೇಶನ್ ಸೆಂಟರ್’ (ಎಸ್ಟಿಐಸಿ) ಮಿಜಾರಿನ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉದ್ಘಾಟಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ರಿಬ್ಬನ್ ಕತ್ತರಿಸುವ ಮೂಲಕ ನೂತನ ಲ್ಯಾಬ್ಗೆ ಚಾಲನೆ ನೀಡಿ ಶುಭ ಹಾರೈಸಿದರು.

Call us

Click Here

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸ್ಟೆಲಿಯಂ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಣ್ದೀಪ್ ನಂಬಿಯಾರ್, ಆಳ್ವಾಸ್ನಲ್ಲಿ ಆರಂಭಗೊಂಡಿರುವ ಸ್ಟೆಲಿಯಂ ಟೆಕ್ನಾಲಜಿ ಆಂಡ್ ಇನೋವೇಶನ್ ಸೆಂಟರ್ ಭಾರತೀಯ ಉದ್ಯಮ ಕ್ಷೇತ್ರದಲ್ಲಿ ಅಪರೂಪದ ಮೈಲುಗಲ್ಲು. ವಿದ್ಯಾರ್ಥಿಗಳು ತಮ್ಮ ಆಸಕ್ತಿಯನ್ನು ಹೊಸ ಆವಿಷ್ಕಾರಗಳಿಗೆ ಅಳವಡಿಸಲು ಈ ಲ್ಯಾಬ್ ಒಂದು ಉತ್ತಮ ವೇದಿಕೆಯಾಗಲಿದ್ದು, ಏಷ್ಯಾ ಖಂಡವು ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸಲಿದೆ. ತಮ್ಮ ಸಂಸ್ಥೆಗೆ ಇದೊಂದು ಹೊಸ ಆರಂಭವಾಗಿದ್ದು, ವೇಗವಾಗಿ ಬೆಳೆಯುವುದರೊಂದಿಗೆ ಪ್ರಪಂಚದಾತ್ಯಂತ ಮಾರುಕಟ್ಟೆಗಳಲ್ಲಿ ಕಂಪೆನಿಯನ್ನು ವಿಸ್ತರಿಸುವ ಯೋಜನೆ ಇದೆ ಎಂದರು.

ಕಾನ್ಫೆಡೆರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯ ಅಧ್ಯಕ್ಷ ಗೌರವ್ ಹೆಗ್ಡೆ ಮಾತನಾಡಿ, ಇಂದು ಲಾಜಿಸ್ಟಿಕ್ಸ್ ಹಾಗೂ ಇ-ಕಾಮರ್ಸ್ ಕ್ಷೇತ್ರವು ಬಹಳಷ್ಟು ಬೇಡಿಕೆ ಮತ್ತು ಅವಕಾಶಗಳನ್ನು ಹೊಂದಿದೆ. ಈ ನಿಟ್ಟಿನಲ್ಲಿ ಸ್ಟೆಲಿಯಂ ಸಂಸ್ಥೆಯು ಅಟೋಮೇಶನ್ ಇಕ್ವಿಪ್ಮೆಂಟ್ ಮೂಲಕ ಲಾಜಿಸ್ಟಿಕ್ಸ್ ಹಾಗೂ ಸಪ್ಲೈ ಚೈನ್ ಸೇವೆಗಳನ್ನು ಸುಗಮಗೊಳಿಸಲಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಅಗತ್ಯತೆಗಳನ್ನು ಆರಂಭಿಸದರಷ್ಟೇ ಸಾಲದು, ವಿದ್ಯಾರ್ಥಿಗಳ ನಿರಂತರ ಒಳಗೊಳ್ಳುವಿಕೆಯೂ ಬಹು ಅಗತ್ಯವೆಂದರು.

ಮಂಗಳೂರಿನ ಯಂಗ್ ಇಂಡಿಯಾ (ವೈಐ) ಸಂಸ್ಥೆಯ ಕೋ-ಚೇರ್ಪರ್ಸನ್ ಸಿಎ ಸಲೋಮಿ ಲೋಬೋ, ಸ್ಟೆಲಿಯಂ ಸಂಸ್ಥೆಯ ಮುಖ್ಯ ಹಣಕಾಸು ಹಾಗೂ ನಿರ್ವಹಣಾಧಿಕಾರಿ ಮೇರಿ ಥೋಮಸ್, ಡಿಜಿಟಲ್ ಎಂಟರ್ಪ್ರೈಸ್ನ ನಿರ್ದೇಶಕ ಕಾರ್ತಿಕ್ ಕೃಷ್ಣನ್, ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಹಾಗೂ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಇಂದ್ರಜಾ ಸ್ವಾಗತಿಸಿ, ನಿರೂಪಿಸಿದರು.

ಸ್ಟೇಲಿಯಂ ಟೆಕ್ನಾಲಜಿ ಆಂಡ್ ಇನೋವೇಶನ್ ಸೆಂಟರ್ (ಎಸ್ಟಿಐಸಿ) ವಿಶೇಷತೆ:
ಸ್ಟೆಲಿಯಂ ಇಂಕ್’ ಕಂಪೆನಿಯು ಸಪ್ಲೈ ಚೈನ್, ಮ್ಯಾನುಫಾಕ್ಚರಿಂಗ್ ಹಾಗೂ ಲಾಜಿಸ್ಟಿಕ್ಸ್ ಸಂಬಂಧಿತ ಕಾರ್ಯಗಳಲ್ಲಿ ದಶಕಗಳಿಂದ ವಿನೂತನ ಆವಿಷ್ಕಾರಗಳನ್ನು ತೆರೆದಿಟ್ಟಿದೆ.

Click here

Click here

Click here

Click Here

Call us

Call us

ವಿದ್ಯಾರ್ಥಿಗಳಿಗೆ ಎಸ್ಟಿಐಸಿ ಸ್ವಯಂಚಾಲಿತ ಕನ್ವೇಯರ್ ಸಿಸ್ಟಮ್ಗಳು, ಮಿನಿ ವೇರ್ಹೌಸ್ ಸಿಮ್ಯುಲೇಶನ್ಗಳು, ತಂತ್ರಜ್ಞಾನ ಮಾದರಿಗಳನ್ನು ಹೊಂದಿರುವ ಸಂಪೂರ್ಣ ಪ್ರಾಯೋಗಿಕ ಕೇಂದ್ರವಾಗಿದೆ. ಸ್ಟೀಲಿಯಂ, ಸ್ಯಾಪ್, ಜೀಬ್ರಾ ಟೆಕ್ನಾಲಜೀಸ್ ಮತ್ತು ರಾಕ್ಸ್ ಮತ್ತು ರೋಲರ್ ಸಂಸ್ಥೆಯ ಸಹಭಾಗಿತ್ವದಲ್ಲಿ ಇಲ್ಲಿನ ಚಟುವಟಿಕೆಗಳನ್ನು ವಿಸ್ತರಿಸಲು ಯೋಜಿಸಿದೆ.

“ಎಸ್ಟಿಐಸಿ ಮೂಲಕ ಆಳ್ವಾಸ್ ವಿದ್ಯಾರ್ಥಿಗಳಿಗೆ ವರ್ಷದ ಎಲ್ಲಾ ದಿನಗಳಿಲ್ಲಯೂ ನಿರಂತರ ಕಲಿಕಾ ವಾತಾವರಣ ನಿರ್ಮಿಸುವ ಗುರಿ ಹೊಂದಿದ್ದೇವೆ. ಉದ್ಯಮ ಕ್ಷೇತ್ರ ಹಾಗೂ ಶಿಕ್ಷಣ ಸಂಸ್ಥೆಗಳ ಕೊಡುಕೊಳ್ಳುವಿಕೆಯ ಮೂಲಕ ಉದ್ಯಮ ಕ್ಷೇತ್ರದ ಅಗತ್ಯಗಳನ್ನು ಪೂರೈಸಲು ಹಾಗೂ ಅವರ ಕೌಶಲ್ಯಗಳನ್ನು ಹೆಚ್ಚಿಸುವ ಮೂಲಕ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟನಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಲಾಗುವುದು. ವಿದ್ಯಾರ್ಥಿಗಳಲ್ಲಿ ಆಲೋಚಿಸುವ, ಆವಿಷ್ಕರಿಸುವ ಮತ್ತು ವಿತರಿಸುವ ಅಗತ್ಯವನ್ನು ಕಲಿಸಲು ಈ ಕೇಂದ್ರ ಒಂದು ಅತ್ಯುತ್ತಮ ವೇದಿಕೆಯಾಗಲಿದೆ.
-ವಿವೇಕ್ ಆಳ್ವ, ಮ್ಯಾನೇಜ್ಮೆಂಟ್ ಟ್ರಸ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ

Leave a Reply