ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಸತತ 78ನೇ ತಿಂಗಳ ಕಾರ್ಯಕ್ರಮವು ಇತ್ತೀಚೆಗೆ ಗೊಂಬೆ ಮನೆಯಲ್ಲಿ ಜರುಗಿತು.
ಹಿರಿಯರಾದ ಸೀತಾರಾಮ ಭಟ್, ಕಲ್ಯಾಣಪುರ ಅವರು ತಮ್ಮ ಭಾಷಣದಲ್ಲಿ ಭಜನೆ, ಸಂಪ್ರದಾಯಗಳ ಬಗ್ಗೆ ವಿವರವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಸದಾಶಿವ ಐತಾಳ್, ಪುಂಡಲೀಕ ಶೆಣೈ, ಪುರೋಹಿತರಾದ ದಿವಾಕರ್ ಭಟ್, ಶ್ರೀಕರ ಭಟ್ ಕಲ್ಯಾಣಪುರ, ಶ್ರೀ ಕುಂದೇಶ್ವರ ಭಜನಾ ಮಂಡಳಿಯ ಅಧ್ಯಕ್ಷೆ ಮಂಜುಳಾ ಗೋವಿಂದರಾಜು ಹಾಗೂ ಅಕಾಡೆಮಿಯ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ವೇದಿಕೆಯಲ್ಲಿ ಆಸೀನರಾಗಿದ್ದರು.
ಮಂಜುಳಾ ಗೋವಿಂದರಾಜು ಹಾಗೂ ಸೀತಾರಾಮ ಭಟ್ ರವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ಶ್ರೀ ಕುಂದೇಶ್ವರ ಭಜನಾ ಮಂಡಳಿ, ಕುಂದಾಪುರ ಹಾಗೂ ಶ್ರೀ ರಾಮಾಂಜನೇಯ ಭಜನಾ ಮಂಡಳಿ, ಕಲ್ಯಾಣಪುರ ಇದರ ಸದಸ್ಯರು ನಡೆಸಿಕೊಟ್ಟ ಭಕ್ತಿ ಸಂಗೀತ ಕಾರ್ಯಕ್ರಮ ಎಲ್ಲರ ಹೃನ್ಮನ ಸೆಳೆಯಿತು. ಈ ಎಲ್ಲಾ ಕಾರ್ಯಕ್ರಮಗಳು ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ಶೀರ್ಷೀಕೆಯಡಿ ನಡೆಯುತ್ತಿವೆ. ನಾಗೇಶ್ ಶ್ಯಾನುಭಾಗ್ ರವರು ಕಾರ್ಯಕ್ರಮ ನಿರೂಪಿಸಿದ್ದರು.