ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಬಾಳೆ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವೇ ಒಂದಿಲ್ರ್ಲೆಂದು ಪ್ರಭೇದ ಒಬ್ಬೊಬ್ಬರಿಗೆ ರುಚಿಸುತ್ತದೆ. ಇಂಥ ನೂರಾರು ಪ್ರಬೇಧದ ಬಾಳೆಹಣ್ಣುಗಳು ಒಂದೇ ಕಡೆಗೆ ನೋಡಲು ಸಿಕ್ಕರೆ ಹೇಗಿರುತ್ತೆ… ಮೂಡಬಿದಿರೆ ಆಳ್ವಾಸ್ ಆವರಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022ರ ಕೃಷಿಸಿರಿಯಲ್ಲಿ ಹತ್ತು-ಹಲವು ತಳಿಗಳ ಬಾಳೆಹಣ್ಣುಗಳು ಹಣ್ಣುಪ್ರಿಯರನ್ನು ಸೆಳೆಯುತ್ತಿದೆ.
ಕೇರಳ ಮೂಲದ ವಿನೋದ್ ಅವರು ಕೃಷಿಮೇಳದ ಸ್ಟಾಲ್‌ನಲ್ಲಿ ನೂರಕ್ಕೂ ಹೆಚ್ಚು ಪ್ರಬೇಧದ ಬಾಳೆ ಹಣ್ಣುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಪಿಡಿ ಮೂಂಥಂ, ಬಾರ್ಗಿ, ಕೋಟಿಯ, ಮೈಸೂರ್ ಬಾಳೆ, ಲೇಡಿಸ್ ಫಿಂಗರ್ ಬಾಳೆ, ಸಾವಿರ ಫಿಂಗರ್ ಬಾಳೆ, ಬಸರೈ, ಸಿವಿ ರೋಜ್, ಚೋರಾ ಪೋವನ್, ಮತ್ತಿ, ಎನ್ ಸಿ ಆರ್ ೧೭, ಕಾವೇರಿ ಕಲ್ಕಿ, ಯಂಗಂಬಿ, ಹೋಂಡ, ಹೀಗೆ ಸಂಪ್ರದಾಯಿಕ ದೇಶಿ ವೀದೇಶಿ ಬಾಳೆ ಹಣ್ಣುಗಳು ಎಲ್ಲರನ್ನು ಆಕರ್ಷಿಸಿತು. ಒಂದೇ ಗೋನೆಯಲ್ಲಿ ಸಾವಿರ ಹಣ್ಣುಗಳು ಬಿಡುವ ಸಾವಿರ ಫಿಂಗರ್ ಬಾಳೆಗೊನೆ ಪ್ರದರ್ಶನದಲ್ಲಿ ಗಮನ ಸೆಳೆಯಿತು.
- ವರದಿ: ಐಶ್ವರ್ಯ ಕೋಣನ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ