ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟೀಯ ಜಾಂಬೂರಿಯು ಹಲವಾರು ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಿದೆ. ವಿಜ್ಙಾನ ಮೇಳದ ವೇದಿಕೆಯು ಹೊಸ ಹೊಸ ತಂತ್ರಜ್ಙಾನವನ್ನು ಪರಿಚಯ ಮಾಡುತ್ತಿದೆ.
ವಿಜ್ಞಾನ ಮೇಳದಲ್ಲಿ ದಾವಣಗೆರೆಯ ನಾಲ್ವರು ವಿದ್ಯಾರ್ಥಿಗಳು ಮಹಿಳೆಯರ ಸುರಕ್ಷತೆಗಾಗಿ ‘ಫಿಯರ್‌ಲೆಸ್ ಬೆಲ್ಟ್’ ಅನ್ನು ಪರಿಚಯಿಸಿದ್ದಾರೆ. ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯವನ್ನು ತಡೆಯುವ ಸಲುವಾಗಿ ದಾವಣಗೆರೆಯ ಜಿ.ಎಂ.ಐ.ಟಿ ಕಾಲೇಜಿನ ತೃತೀಯ ವರ್ಷದ ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಶನ್ ವಿದ್ಯಾರ್ಥಿಗಳಾದ ಕಾರ್ತಿಕ್ ಎಸ್.ಆರ್, ದರ್ಶನ್ ಜಿ.ಪಿ, ಜಾಫರ್ ಎಸ್ ಮತ್ತು ದೀಪ್ತಿ, ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಸುರಕ್ಷಾ ಬೆಲ್ಟ್ ಮಾದರಿಯನ್ನು ರೂಪಿಸಿದ್ದಾರೆ.
ಬ್ಯಾಟರಿ ಮೂಲಕ ಚಾಲ್ತಿಯಾಗುವ ಈ ಬೆಲ್ಟ್‌ನಲ್ಲಿ ಮಹಿಳೆಯರ ರಕ್ಷಣೆಗಾಗಿ ಕರೆಂಟ್ ಶಾಕ್ ಮತ್ತು ಜಿ.ಪಿ.ಎಸ್ ಅಳವಡಿಕೆ ಮಾಡಲಾಗಿದೆ. ಮಹಿಳೆಚಿiರಿಗೆ ಅಪಾಯ ಎದುರಾದ ಸಂದರ್ಭದಲ್ಲಿ ಬಟನ್ ಒತ್ತಿದರೆ ದೌರ್ಜನ್ಯ ಎಸಗಲು ಯತ್ನಿಸಿದ ವ್ಯಕ್ತಿಯ ಮೇಲೆ ೫ ವೋಲ್ಟ್ ಕರೆಂಟ್ ಪ್ರವಹಿಸುವ ಮೂಲಕ ಮಹಿಳೆಚಿiರಿಗೆ ಸ್ವರಕ್ಷಣೆಯನ್ನು ಒದಗಿಸುತ್ತದೆ. ಇದರಲ್ಲಿ ಅಳವಡಿಸಲಾದ ಜಿ.ಪಿ.ಎಸ್ ಮತ್ತು ರಕ್ಷಣಾ ತಂತ್ರಜ್ಞಾನವು ತುರ್ತು ಪರಿಸ್ಥಿತಿಯಲ್ಲಿ ಆಪ್ತರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡುವ ಜೊತೆಗೆ ಮಹಿಳೆ ಇರುವ ಪ್ರದೇಶದ ನಿಖರ ಮಾಹಿತಿಯನ್ನು ಒದಗಿಸುತ್ತದೆ.
ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಮಹಿಳೆಚಿiರ ಸುರಕ್ಷತೆಗಾಗಿ ತಂತ್ರಜ್ಙಾನವನ್ನು ಬಳಸಿಕೊಳ್ಳುವ ಚಿಂತನೆಯಿಂದ ‘ಫಿಯರ್ ಲೆಸ್ ಬೆಲ್ಟ್’ ಪರಿಚಯಿಸಲಾಗಿದೆ. ಇದು ಪ್ರಾರಂಭಿಕ ಹಂತದಲ್ಲಿದ್ದು ಇದನ್ನು ಅಭಿವೃದ್ಧಿಪಡಿಸಿ ಪ್ರತಿಯೊಬ್ಬ ಮಹಿಳೆಯರಿಗೂ ಸಂರಕ್ಷಣೆ ಒದಗಿಸುವಂತಾಗಬೇಕು ಎಂದು ವಿದ್ಯಾರ್ಥಿ ಕಾರ್ತಿಕ್ ಅಭಿಪ್ರಾಯಪಟ್ಟರು.
- ವರದಿ : ವಿವೇಕ್ ಸಿ.ಪಿ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಮ್.ಸಿ ಉಜಿರೆ