ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಕಿವಿಗೆ ತಂಪೆರೆಯುವ, ಮನಕ್ಕೆ ಮುದ ನೀಡುವ ಉತ್ತರ ಕರ್ನಾಟಕ ಶೈಲಿಯ ಜಾನಪದ ಗಾಯನವು ಜಾಂಬೂರಿಯಲ್ಲಿ ಗಮನ ಸೆಳೆಯಿತು.
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಜರುಗುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿ ಅಂಗವಾಗಿ ಗುರುವಾರ ‘ಕೃಷಿಸಿರಿ ವೇದಿಕೆ’ಯಲ್ಲಿ ಮೂಲಕ ಶರಣಪ್ಪ ವಡಿಗೇರಿ ಬಳಗದ ‘ಜಾನಪದ ಗಾಯನ’ ನೆರೆದಿದ್ದವರನ್ನು ಮುದಗೊಳಿಸಿದರು. ಜಾನಪದ ಗಾಯನದ ಜೊತೆಗೆ ವೈಚಾರಿಕ ಸ್ಫೂರ್ತಿ ನೀಡುವ ಅವರ ಸಹಜ ಮಾತುಗಳು ಚಿಂತನೆಯನ್ನೂ ದಾಟಿಸುವಲ್ಲಿ ಯಶಸ್ವಿಯಾದವು.
ಸತತ ಒಂದು ಗಂಟೆಯ ಅವಧಿಯಲ್ಲಿ ಐದು ಹಾಡುಗಳನ್ನು ಹಾಡಿದ ಅವರು ಗಾಯನದ ನಡುವೆ ಮೌಲಿಕ ಮಾತುಗಳನ್ನಾಡಿದರು. ಆ ಮಾತುಗಳಿಗೆ ಪೂರಕವಾದ ತಾತ್ವಿಕ ಚಿಂತನೆಯನ್ನು ಹೊಳೆಸುವಂಥ ಗೀತೆಗಳನ್ನು ಹಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
‘ಯಾರ ಮನಿ ಯಾರ ಹೊಲ’ ಎಂಬ ಗೀತೆಯುಜನಪ್ರಿಯ ಶೈಲಿಯ ಭಾವುಕತೆಯ ಮೂಲಕ ಅಲ್ಲಿದ್ದವರನ್ನು ಸೆಳೆಯಿತು. ಈ ಹಾಡಿನಲ್ಲಿ ಮನುಷ್ಯನ ಸ್ವಾರ್ಥಬುದ್ಧಿಯಕುರಿತುತೀಕ್ಷ್ಣಟೀಕೆಇತ್ತು. ಬದಲಾದಜಗತ್ತಿನಲ್ಲಿ ಮನುಷ್ಯ ಸಂಬಂಧಗಳು ಸ್ವಾರ್ಥದಕಾರಣಕ್ಕಾಗಿಯೇ ಅರ್ಥ ಕಳೆದುಕೊಳ್ಳುತ್ತಿರುವ ಕೊರಗಿನಧ್ವನಿ ಇತ್ತು. ಮನುಷ್ಯನುಇನ್ನಷ್ಟು ಉದಾತ್ತಗೊಳ್ಳಬೇಕಾದ ಅಗತ್ಯತೆಯನ್ನುಗಾಯನದ ಮೂಲಕ ಅವರು ಮನಗಾಣಿಸಿದರು. ಸಂತ ಶಿಶುನಾಳ ಷರೀಫರ ಗೀತೆಗಳೊಳಗಿನ ತತ್ವಗಳ ಸತ್ವ ಶರಣಪ್ಪ ವಡಿಗೇರಿಅವರಜನಪದೀಯ ಶೈಲಿಯಧ್ವನಿಯ ಮೂಲಕ ಅಭಿವ್ಯಕ್ತವಾಯಿತು.
ಮರಕೋತಿ, ಕೋಲಾಟಗಳನ್ನು ನೆನಪಿಸುವ ಜಾನಪದ ಸಾಹಿತ್ಯವನ್ನು ಸುಂದರಕಂಠದ ಮೂಲಕ ಜ್ಞಾಪಿಸಿದರು. ಸಣ್ಣ ಮಕ್ಕಳು ಕಲ್ಲುತಿಂದು ಅರಗಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಬೇಕು. ಇಂದು ಮಕ್ಕಳು ಸಿರಿಧಾನ್ಯದ ಪರಿಕಲ್ಪನೆಯನ್ನೇ ಮರೆತಕಾರಣ, ಅವರು ಇಚಿದು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ ಆಹಾರದ ಸತ್ವದ ಕೊರತೆಯ ಜೊತೆ ಜಾನಪದ ಸಾಹಿತ್ಯದ ಕೊರತೆಯು ಎದ್ದು ಕಾಣುತ್ತಿದೆ ಎಂದರು. ಇದಕ್ಕೆ ಸಾಥ್ ನೀಡಿದ ಮುನಿಯಪ್ಪ ಗಂಗೂಬಾಯಿ ಹಾನಗಲ್‌ರಜಾನಪದ ಹಾಡುಗಳನ್ನು ಹಾಡುವ ಮೂಲಕ ರಂಜಿಸಿದರು. ಹೊಳ್ಳಪ್ಪ ಶಿಶುನಾಳರ ತತ್ವಪದಗಳನ್ನು ನೆನಪಿಸಿದರು. ದೇವೇಂದ್ರಕುಮಾರ್ ಕ್ಯಾಸಿಯೋ ವಾದ್ಯ ನುಡಿಸಿದರು.
- ವರದಿ: ರಂಜಿತ್ ಕೆ. ಎಸ್, ದ್ವಿತೀಯ ವರ್ಷ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ