ಜಾಂಬೂರಿಯಲ್ಲಿ ಸಹೋದರರಿಂದ ‘ಹಿಂದೂಸ್ಥಾನಿ ಗಾಯನ’

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ‘ಜಾಂಬೂರಿ’ಯ ಎರಡನೇ ದಿನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶಿವಮೊಗ್ಗದ ನೌಷಾದ್ ಮತ್ತು ನಿಷಾದ್ ಹರ್ಲಾಪುರ್ ಸಹೋದರರ ‘ಹಿಂದೂಸ್ಥಾನಿ ಗಾಯನ’ ಪ್ರೇಕ್ಷಕರನ್ನು ರಂಜಿಸಿತು.

Call us

Click Here

ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ರಸಸ್ಥಾಪನೆಯಲ್ಲಿ ಮೊದಲಿಗೆ ಮುಲ್ತಾನಿ ರಾಗದಲ್ಲಿ ಹಾಡಿದರು. ನಂತರ ವಿಘ್ನವಿನಾ?ಕನನ್ನು ಪ್ರಾಥಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು.

‘ಸುಂದರ ಸುರಜನ್’ ಹಾಡು ಮುಲ್ತಾನಿ ರಾಗದಲ್ಲಿ ಅದ್ಭುತವಾಗಿ ಮೂಡಿದ್ದು ಪ್ರೇಕ್ಷಕರು ಅದಕ್ಕೆ ತಲೆದೂಗಿದರು. ಮುಂದೆ ಪುರಂದರ ದಾಸರ ‘ಕಲಿಯುಗದೊಳು ಹರಿನಾಮವ ನೆನೆದರೆ’ ಎಂಬ ಕೀರ್ತನೆಯು ವಿಶೇಷವಾಗಿ ಮೂಡಿಬಂದಿತು.

ಪುಟ್ಟರಾಜು ಗವಾಯಿಗಳ ‘ಶಂಕರಿಯೇ ಶುಭಕರಿಯೇ’ ದೇವಿವಚನವು ಸಂಗೀತ ಪ್ರಿಯರ ಮನತಣಿಸುವಲ್ಲಿ ಯಶಸ್ವಿಯಾಯಿತು.

ಒಂದೂವರೆ ಗಂಟೆಗಳ ಕಾಲ ನಡೆದ ಈ ಸಂಗೀತ ರಸದೌತಣದಲ್ಲಿ ನೌಷಾದ್ ಮತ್ತು ನಿಷಾದ್ ಹರ್ಲಾಪುರ್ ಸಹೋದರರಿಗೆ ತಬಲಾ ವಾದಕ ವಿನಾಯಕ್ ಸಾಗರ್, ಹಾರ್ಮೋನಿಯಂನಲ್ಲಿ ಪುಟ್ಟರಾಜ್ ಕೀರೇಶ್ ಹಾಗೂ ತಾಂಪೂರ್‌ನಲ್ಲಿ ಸುನೀಲ್ ಮತ್ತು ಶೃತಿ ಸಾಥ್‌ನೀಡಿದರು.

Click here

Click here

Click here

Click Here

Call us

Call us

  • ವರದಿ: ತೇಜಶ್ವಿನಿ ಕಾಂತರಾಜ್, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ.ಸಿ, ಉಜಿರೆ
  • ಚಿತ್ರ: ವಿನಿತಾ

Leave a Reply