ಜಂಬೂರಿಯಲ್ಲಿ ಸಾರಂಗಿ ಸಂಗೀತದ ಮಧುರಾನುಭೂತಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡಬಿದಿರಿ:
ಸಾರಂಗಿ ಎಂದರೆ ಸಂಗೀತಕ್ಕಿರುವ ಸಮಗ್ರತೆಯ ಮಾಧುರ್ಯವನ್ನು ಹಿಡಿದಿಡುವ ಪರಿಭಾಷೆ. ಈ ಪರಿಭಾಷೆಗಿರುವ ಮಧುರ ಅನುಭೂತಿಯನ್ನು ದಾಟಿಸಿದ್ದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತರರಾಷ್ಟ್ರೀಯ ಸಾಂಸ್ಕೃತಿಕ ‘ಜಾಂಬೂರಿ’ಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಸಾರಂಗಿ ನುಡಿಸಿದ ಸಫ್ರಾಜ್ ಖಾನ್.

Call us

Click Here

ಸಾರಂಗಿಯ ಮೂಲಕ ಹೊರಹೊಮ್ಮಬಹುದಾದ ಎಲ್ಲಾ ಬಗೆಯ ಶಾಸ್ತ್ರೀಯ ಮಾಧುರ್ಯವನ್ನು ಅವರು ದಾಟಿಸಿದ ವೈಖರಿ ವಿಶೇಷವಾಗಿತ್ತು. ರಾಗದ ಏರಿಳಿತಗಳ ಜೊತೆಗಿನ ಶಾಸ್ತ್ರೀಯವಾದ ಹೊಸದೊಂದು ಭಾವಲೋಕವನ್ನು ಸೃಷ್ಟಿಸುವಲ್ಲಿ ಅವರು ಯಶಸ್ವಿಯಾದರು.

ಸಾರಂಗಕ್ಕೆ ಇರುವ ಅನನ್ಯಶಕ್ತಿಯನ್ನು ತಮ್ಮ ಕರಕೌಶಲ್ಯದ ಮೂಲಕ ಮನಗಾಣಿಸಿಸಾರಂದ ಶೈಲಿ ಆಪ್ತವಾಗಿತ್ತು. ಸಾರಂಗಿ ಭಾರತೀಯ ತಂತಿವಾದ್ಯವಾಗಿದ್ದು ಇದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಳಲ್ಲಿ ಹೆಚ್ಚುಬಳಕೆಯಲ್ಲಿದೆ. ಇದರ ಶಕ್ತಿಯನ್ನು ಮನವರಿಕೆ ಮಾಡಿಕೊಡುವ ಹಾಗೆ ಸರ್ಫರಾಜ್ ಖಾನ್ ಅವರು ಸಾರಂಗಿ ನುಡಿಸಿದರು. ಚಿಕ್ಕ ಕುತ್ತಿಗೆಯ ಮೂರು ತಂತಿ ವಾದ್ಯದ ನಾದದ ಮಧುರ ವೈಖರಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಸಾರಂಗಿಯ ರಚನೆಗಳನ್ನು ನುಡಿಸುವವರು ತುಂಬಾ ಅಪರೂಪ ಆದರೆ ಸರ್ಫರಾಜ್ ಖಾನ್ ಅವರು ಸತತ ಒಂದು ಗಂಟೆಗಳ ಕಾಲ ಸಾರಂಗಿಯ ಮಧುರ ನಾದವನ್ನು ನೆರೆದಿರುವ ಪ್ರೇಕ್ಷಕ ವೃದಕ್ಕೆ ಉಣಬಡಿಸಿದರು.

ಸಾರಂಗಿ ತಬಲಾದೊಂದಿಗೆ ಮಾಧುರ್ಯದ ಬೆಂಬಲ ಪಡೆದು ಪ್ರೇಕ್ಷಕರ ಚಪ್ಪಾಳೆಯ ಧ್ವನಿಯ ಮೂಲಕ ಹೊಸ ರೂಪ ಪಡೆದು ವಿನೂತನ ಸಂಗೀತದ ಅನುಭವವನ್ನು ನೀಡಿತು.

Click here

Click here

Click here

Click Here

Call us

Call us

ವರದಿ: ಐಶ್ವರ್ಯ ಕೋಣನ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ
ಚಿತ್ರಗಳು: ಶಶಿಧರ್ ನಾಯ್ಕ್

Leave a Reply