ಕೃಷಿ ಸಿರಿಯಲ್ಲಿ ಗಮನ ಸೆಳೆದ ‘ಅದ್ಭುತ ಹಲಸು’ ಮಳಿಗೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡಬಿದರೆ:
ಹಲಸಿನ ಹಣ್ಣು ಸiಗ್ರ ಪೋಷಕಾಂಶ ಒಳಗೊಂಡ ಮತ್ತು ಎಲ್ಲರೂ ಇಷ್ಟಪಡುವ ಹಣ್ಣು. ಆದರೆ ಸರ್ವ ಋತುಮಾನಗಳಲ್ಲಿ ಈ ಹಣ್ಣು ಸಿಗದು ಎಂಬುದು ಎಲ್ಲರ ಅಳಲು. ಅದಕ್ಕೆ ಉತ್ತರವೆಂಬಂತೆ ವರ್ಷದ ಹೆಚ್ಚಿನ ದಿನಗಳಲ್ಲಿ ಫಲಕೊಡುವ ‘ಅದ್ಭುತ ಹಲಸು’ ಎಂಬ ಹೆಸರಿನ ಒಂದು ಹಲಸಿನ ಹಣ್ಣಿನ ಗಿಡಗಳ ಮಳಿಗೆ ಜಾಂಬೂರಿಯ ಕೃಷಿಸಿರಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

Call us

Click Here

ಪುತ್ತೂರು ಬಳಿಯ ಅಳಕೆಮಜಲಿನ ನಿವಾಸಿಯಾಗಿರುವ ಅನಿಲ್ ಅವರು ಜ್ಯಾಕ್ ಅನಿಲ್ ಎಂದೇ ಪ್ರಸಿದ್ದರಾದವರು. ಕಳೆದೆರಡು ದಶಕಗಳಿಂದ ಹಲಸಿನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಹಲಸಿನ ತಳಿಯ ವಿಚಾರದಲ್ಲಿ ಇವರು ವಿಶೇಷ ಜ್ಞಾನವನ್ನು ಹೊಂದಿದ್ದಾರೆ. ಇದಲ್ಲದೆ ಆಯಾಯ ಪ್ರದೇಶಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕಸಿ ಕಟ್ಟುವುದರಲ್ಲಿ ಕೂಡ ಬಹಳ ಪರಿಣತಿ ಪಡೆದಿದ್ದಾರೆ.

ಅನಿಲ್ ಅವರ ಈ ಮಳಿಗೆಯಲ್ಲಿ ಒಂದೂವರೆ ವರ್ಷದಲ್ಲಿ ಫಲ ಕೊಡುವ ‘ನೆನ್ನಿತ್ತಾಯಿ’ ಎಂಬ ಹಲಸಿನ ಗಿಡಕ್ಕೆ ತುಂಬಾ ಬೇಡಿಕೆಯಿದೆ. ಈ ಹಣ್ಣಿನ ಗಿಡಗಳು ಇತರ ಹಲಸಿನ ಹಣ್ಣಿನ ಮರಗಳ ರೀತಿಯಲ್ಲಿ ಬೃಹದಾಕಾರದಲ್ಲಿ ಬೆಳೆಯದೆ, ಗಿಡ ನೆಟ್ಟು ಕೇವಲ ಒಂದರಿಂದ ಎರಡು ವರ್ಷದೊಳಗೆ ಸಣ್ಣ ಗಿಡದಲ್ಲಿಯೇ ಫಸಲು ನೀಡಲು ಆರಂಭವಾಗಿ, ಇಪ್ಪತ್ತು ವರ್ಷಗಳ ತನಕ ನಿರಂತರ ಫಸಲು ನೀಡುತ್ತದೆ. ಇನ್ನು ಈ ಗಿಡಗಳನ್ನು ಕಡಿಮೆ ಸ್ಥಳದಲ್ಲಿ ನೆಡಬಹುದಾಗಿದ್ದು ಗಿಡ ನೆಡಲು ಇತರ ಗಿಡಗಳ ರೀತಿಯಲ್ಲಿ ಯಾವುದೇ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿಲ್ಲ.

ಇವರ ಮಳಿಗೆಯಲ್ಲಿ ಚಂದ್ರ ಹಲಸು, ಜೇನು ಬೆಕ್ಕೆ, ಸಿದ್ದು ಹಲಸು, ಕೇರಳದ ಹಳೆಯ ಕಾಲದ ಮುಟ್ಟಂವರಿಕೆ, ಕೆಂಪು ಹಲಸು, ಥಾಯ್ಲೆಂಡ್‌ನ ಡೆಯಂಗ್ ಸೂರ್‍ಯ, ಬೆಂಗಳೂರಿನ 150 ವರ್ಷ ಹಳೆಯದಾದ ಲಾಲ್‌ಬಾಗ್ ಮಧುರ, ಜನವರಿ ಮತ್ತು ಫೆಬ್ರವರಿಯಲ್ಲಿ ಮಾತ್ರ ಫಸಲು ಕೊಡುವ ಸಿಂಗಾಪುರ ಹಲಸು, ವಿಯೆಟ್ನಾಮ್‌ನ ಸೂಪರ್ ಅರ್ಲಿ ಮುಂತಾದ 13 ರೀತಿಯ ತಳಿಯ ಹಲಸು ಗಿಡಗಳಿವೆ. ಇದಲ್ಲದೆ ಬ್ರೆಜಿಲಿಯನ್ ದೇಶದ ದ್ರಾಕ್ಷಿ ಎಂದು ಕರೆಯಲ್ಪಡುವ ಜಂಬೂಟಿಕ, ಪೂರ್ವ ಆಫ್ರಿಕ ದೇಶದ ಮಿರಾಕಲ್ ಫ್ರುಟ್, ವರ್ಷ ಪೂರ್ತಿ ಫಸಲು ಕೊಡುವ ಅಂಬಟೆ, ಮುಂಡಪ್ಪ ಮಾವು, ಸಿಹಿ ಅಂಶ ಹೊಂದಿರುವ ಸ್ಟಾರ್ ಫ್ರುಟ್, ಹೈಬ್ರಿಡ್ ತೆಂಗಿನ ಗಿಡ ತಳಿಯ ಮೂರುವರ್ಷದಲ್ಲಿ ಫಲ ಕೊಡುವ ಮಲೆಶಿಯನ್ ಗ್ರೀನ್ ಮತ್ತು ಗೆಂದಲಿ ತೆಂಗು, ಪೇರಲೆ ಹಣ್ಣು, ಪನ್ನೇರಲೆ, ಎಗ್ ಫ್ರುಟ್ ಮುಂತಾದ ಗಿಡಗಳ ಹಣ್ಣಿನ ಗಿಡಗಳಿವೆ.

  • ವರದಿ: ಶಶಿಧರ ನಾಯ್ಕ ಎ., ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ

Leave a Reply