ನೈಸರ್ಗಿಕ ವಸ್ತುಗಳ ಹೂರಣ, ಸಾಂಪ್ರದಾಯಿಕ ಕಲಾ ತೋರಣ ‘ಮಧುಬಾನಿ’

Call us

Call us

Call us

ಭಾರತಿ ಹೆಗಡೆ | ಕುಂದಾಪ್ರ ಡಾಟ್ ಕಾಂ ವರದಿ.
ಮೂಡುಬಿದಿರೆ:
ಆಧುನಿಕರಣದ ಭರಾಟೆಯಲ್ಲಿ ಹಲವು ಕುಂಚ ಕಲಾ ಪ್ರಕಾರಗಳು ಮಾಸಿಹೋಗುತ್ತಿವೆ. ಮಧುಬಾನಿ, ಗೊಂಡಾ, ವಾರ್ಲಿ, ಕಲಂಕಾರಿ ಹೀಗೆ ಅದೆಷ್ಟೊ ಚಿತ್ರಕಲಾ ಪ್ರಕಾರಗಳು ಕಾಣಸಿಗದಂತಾಗಿದೆ. ಇವತ್ತಿಗೂ ಕೂಡ ಇಂತಹ ಚಿತ್ರಕಲೆಯನ್ನೇ ಜೀವನೋಪಾಯವಾಗಿಸಿಕೊಂಡ ಕಲಾವಿದರು ಅಲ್ಲಲ್ಲಿ ಇದ್ದು, ಕಲಾಮೇಳದಲ್ಲಿ ಪಾರಂಪರಿಕ ಕಲಾಪ್ರಕಾರಗಳು ಅನಾವರಣಗೊಳ್ಳುತ್ತವೆ.

Call us

Click Here

ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದಲ್ಲಿ ಹಲವಾರು ಚಿತ್ರಕಲಾ ಪ್ರಕಾರಗಳಲ್ಲಿ ಪುರಾತನ ಕಾಲದ ವೈವಿಧ್ಯಮಯ ಚಿತ್ರಗಳೇ ಗಮನ ಸೆಳೆಯುತ್ತಿವೆ. ಅಂತಹವುಗಳಲ್ಲಿ ಬಿಹಾರಿ ಮೂಲದ ವಿಶಿಷ್ಟ ಕಲಾಪ್ರಕಾರದಲ್ಲಿ ಮಧುಬಾನಿಯೂ ಒಂದು. ಸೂಕ್ಷ್ಮ ಕುಸುರಿ ಚಿತ್ರಣ, ಪುರಾತನ ಶೈಲಿಯ ಸೊಗಡಿನಲ್ಲಿ ಮೂಡಿಬರುವ ನವಯುಗದ ಚಿತ್ರಣಗಳು ನಿಜಕ್ಕೂ ಮನಮೋಹಕ.

ಸುಮಾರು ಹದಿನೈದು ವರ್ಷದಿಂದ ಸಾಂಪ್ರದಾಯಿಕ ಶೈಲಿಯಲ್ಲಿ ಮಧುಬಾನಿ ಚಿತ್ರಕಲೆಯನ್ನು ಉಳಿಸಿ ಬೆಳೆಸುವಲ್ಲಿ ಬಿಹಾರದ ’ಸಂತೋಷ ಮಿಥಿಲಾ ಬೋಧನಾ ಕಲಾಕೇಂದ್ರ’ ಪ್ರಮುಖ ಪಾತ್ರವಹಿಸಿದೆ.

ಸಂಪೂರ್ಣವಾಗಿ ಆರ್ಗಾನಿಕ್ ಮಾದರಿಯಲ್ಲಿ ಸಿದ್ಧವಾಗುವ ಈ ಮಧುಬಾನಿ ಚಿತ್ರಕಲಾ ಪ್ರಕಾರದಲ್ಲಿ ಮುಖ್ಯವಾಗಿ ಚಿತ್ರ ಬಿಡಿಸಲು ಬಳಸುವ ಹಾಳೆಯೂ ಕೂಡ ಮಣ್ಣಿನಿಂದ ತಯಾರಾಗುತ್ತದೆ. ಮಣ್ಣಿನ ಹಾಳೆಗಳ ಮೇಲೆ ಸಗಣಿಯನ್ನು ಲೇಪಿಸಿ ಅದನ್ನು ಬಿಸಿಲಿಗೆ ಒಣಗಿಸುವ ಮೂಲಕ ಪ್ರತಿಯೊಂದು ಹಾಳೆ ರೂಪುಗೊಳ್ಳುತ್ತದೆ. ನಂತರದಲ್ಲಿ ಪೇಂಟಿಂಗ್‌ಗೆ ಬಳಸುವ ಬಣ್ಣಗಳೂ ಕೂಡಾ ನೈಸರ್ಗಿಕವಾಗಿ ಲಭ್ಯವಾಗುವಂತದ್ದು ಎನ್ನುವುದು ವಿಶೇಷ. ಹಸಿರೆಲೆಗಳ ಪುಡಿ, ಗುಲಾಬಿ ಹೂವಿನ ರಸ, ಅರಿಶಿಣ ಹೀಗೆ ಇನ್ನಿತರ ಪರಿಸರದಲ್ಲಿ ದೊರಕುವ ವಸ್ತುಗಳಿಂದಲೇ ಮಧುಬಾನಿ ಚಿತ್ರಣಗಳು ತಯಾರಾಗುತ್ತವೆ.

ಪುರಾಣ ಪ್ರಸಿದ್ಧ ಪಾತ್ರಗಳಾದ ರಾಧಾ-ಕೃಷ್ಣ, ಅರ್ಧನಾರೀಶ್ವರ, ಶಿವ-ಪಾರ್ವತಿ ಮತ್ತು ನಿಸರ್ಗಮಾತೆಯ ಚಿತ್ರಣಗಳು ಮಧುಬಾನಿಯಲ್ಲಿ ಮೂಡಿಬರುವ ಪ್ರಮುಖ ಪೇಂಟಿಂಗ್‌ಗಳು. ಇದರ ಜೊತೆಗೆ ಪಕ್ಷಿಗಳು, ರಾಜವಂಶಸ್ಥರ ಚಿತ್ರಣಗಳನ್ನು ಕಾಣಬಹುದು. ಇದಲ್ಲದೇ ’ಸಂತೋಷ ಮಿಥಿಲಾ ಬೋಧನಾ ಕಲಾಕೇಂದ್ರ’ದ ಮಳಿಗೆಯಲ್ಲಿ ಕೈಯಿಂದ ತಯಾರಾಗುವ ಜೂಟ್ ಬ್ಯಾಗ್‌ಗಳು ಹಾಗೂ ಅವಗಳ ಮೇಲಿನ ವೈವಿಧ್ಯಮಯ ಮಧುಬಾನಿ ಪೇಂಟಿಂಗ್ ಮನಮೋಹಕವಾಗಿದೆ.

Click here

Click here

Click here

Click Here

Call us

Call us

  • ವರದಿ: ಭಾರತಿ ಹೆಗಡೆ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ

Leave a Reply