ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ನೀವು ಬೆಣ್ಣೆ ದೋಸೆ, ಮಸಾಲ ದೋಸೆ, ಈರುಳ್ಳಿ ದೋಸೆ ಸೇರಿದಂತೆ ಮನೆಯಲ್ಲಿ ಮಾಡುವ ಎಲ್ಲಾ ದೋಸೆಯ ರುಚಿ ಸವಿದಿರುತ್ತೀರಿ. ಆದ್ರೆ ಈ ದೋಸೆಯಲ್ಲಿ 99 ಪ್ರಕಾರಗಳಿರೋದು ನಿಮಗೆ ಗೊತ್ತಾ?
ಹೀಗೆ 99 ಬಗೆಯ ದೋಸೆ ತಯಾರಿಸುವ ಈ ಸ್ಟಾಲ್ ಇಡೀ ಆಹಾರಮೇಳದಲ್ಲಿ ಎಲ್ಲರನ್ನೂ ಸೆಳೆಯುತ್ತಿದೆ. ಸಾರ್ವಜನಿಕರು ಪ್ರತಿದಿನ ಈ ಸ್ಟಾಲ್‌ಗೆ ಭೇಟಿ ನೀಡಿ ತರಹೇವಾರಿ ದೋಸೆಗಳ ರುಚಿಯನ್ನು ಹಲವರು ಸವಿಯುತ್ತಿದ್ದಾರೆ.
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸ್ಕೌಟ್ಸ್ ಮತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಆಹಾರ ಮೇಳದಲ್ಲಿ ಕಾರ್ಕಳದ ಕಿರಣ್ ಶೆಟ್ಟಿ ಇಷ್ಟೊಂದು ಬಗೆಯ ದೋಸೆಗಳನ್ನು ಸಿದ್ಧಪಡಿಸಿ ಕೊಡುತ್ತಿದ್ದಾರೆ. ಜನರಿಗೆ ವಿಭಿನ್ನ ರುಚಿಯ ದೋಸೆಗಳನ್ನ ಪರಿಚಯಿಸುವ ಉದ್ದೇಶದಿಂದ ಆಹಾರ ಮೇಳದಲ್ಲಿ ಭಾಗಿಯಾಗಿದ್ದಾರೆ ಅವರು. ಅವರು ಕಣ್ಣೆದುರಿಗೇ ಸಿದ್ಧಪಡಿಸಿಕೊಡುವ ಪಿಜ್ಜಾ ದೋಸೆ, ಚೀಸ್ ದೋಸೆ, ಪನ್ನೀರ್ ಚೀಸ್ ದೋಸೆ ಎಲ್ಲರ ಫೇವರಿಟ್ ಎನ್ನಿಸಿವೆ.
ಜನರಿಗೆ ಸಾಮಾನ್ಯವಾಗಿ ಹೊರಗಿನ ಆಹಾರ ತಿನ್ನಲು ರಾಸಾಯನಿಕಗಳ ಬಳಕೆಯಾಗಿರಬಹುದು ಎನ್ನುವ ಭಯವಿರುತ್ತದೆ, ಆದರೆ ಇಲ್ಲಿ ಯಾವುದೇ ರಾಸಾಯನಿಕ ಮತ್ತು ಟೇಸ್ಟಿಂಗ್ ಪೌಡರ್ ಬಳಸದೆ ಕಣ್ನೆದುರಲ್ಲೇ ನಾವು ಹೇಳಿದ ಪ್ರಕಾರದ ದೋಸೆಯನ್ನ ಮತ್ತು ಜ್ಯೂಸ್ ಅನ್ನು ಸಿದ್ದಪಡಿಸಿ ಕೊಡುತ್ತಾರೆ ಎನ್ನುವುದು ವಿಷೇಶ.
ದೋಸೆಯ ವಿಧದ ಮೇಲೆ ಅದರ ಬೆಲೆ ನಿಗದಿಯಾಗಿದ್ದು 50 ರೂಪಾಯಿಂದ ಆರಂಭವಾಗಿ 150 ರೂ, ಗಳ ತನಕ ದೋಸೆಗಳು ಸಿಗತ್ತವೆ. ಪಿಜ್ಜಾ ದೋಸೆ ಇವರ ಸ್ಪೆಷಲ್ ಆಗಿದ್ದು ಪಿಜ್ಜಾ ಪ್ರೀಯರಿಗೆ ಹಾಗೂ ದೋಸಾ ಪ್ರಿಯರಿಗೆ ವಿಭಿನ್ನವಾದ ಹೊಸ ರುಚಿಯನ್ನು ನೀಡುತ್ತದೆ.
ನೀವೇನಾದ್ರೂ ಜಾಂಬೂರಿಯ ಆಹಾರ ಮೇಳದ ಕಡೆ ಭೇಟಿ ನೀಡಿದ್ರೆ ಇಲ್ಲಿಗೆ ಒಂದು ವಿಸಿಟ್ ನೀಡೋದನ್ನು ಮರೆಯಬೇಡಿ.
- ವರದಿ: ಪ್ರಸೀದ್ ಭಟ್, ದ್ವೀತಿಯ ವರ್ಷ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ.