Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಪುತ್ತೂರಿನ ಅನೀಶ್ ಭಟ್ ಬಳಗದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ರಂಜನೆ
    alvas nudisiri

    ಪುತ್ತೂರಿನ ಅನೀಶ್ ಭಟ್ ಬಳಗದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ರಂಜನೆ

    Updated:26/12/2022No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ವಿದ್ಯಾಗಿರಿ:
    ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಮೂರನೇ ದಿನ ಡಾ. ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸ್ತುತಿ ಮನಸೆಳೆಯಿತು. ಪುತ್ತೂರಿನ ಅನೀಶ್ ವಿ. ಭಟ್ ಮತ್ತು ಬಳಗದ ಕಲಾವಿದರು ನೆರೆದಿದ್ದವರ ಮನಗೆದ್ದರು.

    Click Here

    Call us

    Click Here

    ಆದಿ ತಾಳದಲ್ಲಿ ನಳಿನಕಂಠಿವರ್ಣ ಗೀತೆಯ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು.ಬಳಿಕ ’ಮಾರಿವೆರೆ ಷಣ್ಮುಖಪ್ರಿಯ’, ಶುದ್ಧ ಧನ್ಯಾಸಿ, ಸುಬ್ರಹ್ಮಣ್ಯೇನ ಹಾಡುಗಳು ಆದಿತಾಳದಲ್ಲಿ ಹೊರಹೊಮ್ಮಿದವು. ಶ್ರೀ ಕಾಂತೀಮತಿಮ್ ಪದ್ಯವು ಹೇಮಾವತಿರಾಗ, ಆದಿತಾಳದಲ್ಲಿ ಮೂಡಿಬಂದಿತ್ತು. ಕೊನೆಗೆ ಮಿಶ್ರಪೀಲು ರಾಗ ಮತ್ತು ಮಿಶ್ರಛಾಪು ತಾಳದಲ್ಲಿ ರಾಘವಂಕರುಣಾಕರಂ ಗೀತೆಯು ಕಲಾಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸಿತು.

    ಈ ಸಂದರ್ಭದಲ್ಲಿ ಮಾತನಾಡಿದ ಅನೀಶ್ ವಿ ಭಟ್ ಶಾಸ್ತ್ರೀಯ ಸಂಗೀತದ ಸದ್ಯದ ಸ್ಥಾನಮಾನದ ಕುರಿತು ವಿಚಾರಗಳನ್ನು ಹಂಚಿಕೊಂಡರು. ಈಗಿನ ದಿನಗಳಲ್ಲಿ ಉತ್ತರ ಭಾರತದ ಸಂಗೀತ ಪ್ರಕಾರಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಆದರೆ ದಕ್ಷಿಣ ಭಾರತದ ಸಂಗೀತ ಪ್ರಕಾರಗಳಿಗೆ ಅದೇ ಬಗೆಯ ಆದ್ಯತೆ ಇಲ್ಲ. ಕರ್ನಾಟಕದಲ್ಲಿಯೂ ಕರ್ನಾಟಕ ಶಾಸ್ತೀಯ ಸಂಗೀತಕ್ಕೆ ಅವಕಾಶಗಳು ಕಡಿಮೆ. ತಮಿಳುನಾಡಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚಿನ ಮಾನ್ಯತೆ ಇದೆ. ಆದರೆ ಕಲಿಯುವವರ ಸಂಖ್ಯೆ ಕಡಿಮೆ. ಹಾಗೇ ಕಲಿಸುವವರ ಸಂಖ್ಯೆಯೂಕಡಿಮೆ. ಕಲಿಯುವ ಆಸಕ್ತಿ ಇದ್ದವರು ಉತ್ತಮತರಬೇತಿ ಹಾಗೂ ನಿರಂತರವಾಗಿಅಭ್ಯಾಸ ಮಾಡಿದರೆ ಖಂಡಿತವಾಗಿಯೂ ಒಳ್ಳೆಯ ಅವಕಾಶಗಳು ದೊರಕುತ್ತವೆ ಎಂದು ತಿಳಿಸಿದರು.

    ಅನೀಶ್ ವಿ.ಭಟ್‌ಜೊತೆಗೆ ವಿಶ್ವಜಿತ್ ಮತ್ತೂರು ವಯೋಲಿನ್‌ನಲ್ಲಿ ಹಾಗೂ ನಾಗೇಂದ್ರ ಪ್ರಸಾದ್ ಮೃದಂಗದಲ್ಲಿ ಸಾಥ್ ನೀಡಿದ್ದು ಪ್ರೇಕ್ಷಕರನ್ನು ಇನ್ನಷ್ಟು ಮನರಂಜಿಸಿತ್ತು. ಈ ಸ್ವರ ಮಾಂತ್ರಿಕತೆಗೆ ನೆರೆದಿದ್ದವರೆಲ್ಲಾ ಸತತ ಒಂದುವರೆ ಗಂಟೆಗಳ ಕಾಲ ತಲೆದೂಗುವಂತೆ ಮಾಡಿತ್ತು.

    • ವರದಿ: ಪ್ರೀತಿ ಹಡಪದ, ದ್ವಿತೀಯ ವರ್ಷ, ಸ್ನಾತಕೋತ್ತರ ಕೇಂದ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
    SDM Ujire Students
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಆಳ್ವಾಸ್‌ನಿಂದ ರಾಜ್ಯ ಮಟ್ಟದ ಮಹಿಳಾ ಮಧ್ಯವರ್ಜನ ಶಿಬಿರ

    04/07/2026

    ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಉತ್ತೀರ್ಣ

    03/07/2026

    ಪಠ್ಯಜ್ಞಾನಕ್ಕಿಂತ ನಾಯಕತ್ವ ಗುಣಗಳಿಗೇ ಎನ್‌ಡಿಎ ಆಯ್ಕೆಯಲ್ಲಿ ಆದ್ಯತೆ: ಕರ್ನಲ್‌ ಸೋಮು ಮಹಾರಾಜನ್

    02/07/2026
    Leave A Reply Cancel Reply

    sixteen + six =

    Call us

    Click Here

    Call us

    Call us

    Call us
    Highest Viewed Recently
    • ಉಡುಪಿ: ವಿದ್ಯಾರ್ಥಿವೇತನ ಸೌಲಭ್ಯಕ್ಕೆ ಅರ್ಜಿ ಆಹ್ವಾನ
    • ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ನಾಥಪಂಥದ ಪೀರ್‌ ಯೋಗಿ ಜಗದೀಶ್‌ನಾಥ್ ಜೀ ಭೇಟಿ
    • ಆಳ್ವಾಸ್‌ನಿಂದ ರಾಜ್ಯ ಮಟ್ಟದ ಮಹಿಳಾ ಮಧ್ಯವರ್ಜನ ಶಿಬಿರ
    • ನಿವೃತ್ತ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಕೆ.ಎಸ್. ಅವರಿಗೆ ಅಭಿನಂದನೆ
    • ಕುಂದಾಪುರ: ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ ಕ್ಯಾಂಪಸ್ ಪ್ಲೇಸ್ಮೆಂಟ್

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.