ವಿಜ್ಞಾನ ಮಾದರಿ ಮತ್ತು ಮಾಹಿತಿಗಳ ಆಗರ – ಸಂಚಾರಿ ವಿಜ್ಞಾನ ಬಸ್

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ವಿಜ್ಞಾನವೆಂಬುದು ಹಲವು ಕೌತುಕಗಳ ಆಗರ. ಭಾರತ ಸರ್ಕಾರದ ರಾಷ್ಟೀಯ ವಿಜ್ಞಾನ ವಸ್ತು ಸಂಗ್ರಾಹಾಲಯಗಳ ಪರಿಷತ್ತು ಮತ್ತು ಸಂಸ್ಕೃತಿ ಸಚಿವಾಲಯದ ಅಂಗ ಸಂಸ್ಥೆಯಾದ ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯವು ವಿಜ್ಞಾನದ ಹಲವು ಪ್ರಯೋಗಗಳ ಮತ್ತು ಕೆಲವು ಪ್ರಸಿದ್ಧ ವಿಜ್ಞಾನಿಗಳ ನಿಯಮಗಳ ಕುರಿತಾದ ವಿವಿಧ ಮಾದರಿ ಮತ್ತು ಮಾಹಿತಿಗಳನ್ನು ಒಳಗೊಂಡ ’ಸಂಚಾರಿ ವಿಜ್ಞಾನ ಬಸ್’ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಜಾಂಬೂರಿ ಉತ್ಸವದಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಆಕರ್ಷಿಸುತ್ತಿದೆ.

Call us

Click Here

‘ಸಂಚಾರಿ ವಿಜ್ಞಾನ ಬಸ್’ನಲ್ಲಿ ವಿಜ್ಞಾನಗಳ ಕುರಿತಾದ ಸರಣಿ ಮತ್ತು ಸಮನಾಂತರ ಧಾರಕಗಳು, ಕೈ ವಿದ್ಯುತ್ ಕೋಶಗಳು, ನೇರ ವಿದ್ಯುತ್ ಮತ್ತು ಪರ್ಯಾಯ ವಿದ್ಯುತ್, ಸೇತುವೆಯ ಸಮತೋಲನಗಳು, ಆರ್ಸ್ಟೆಡ್‌ನ ಪ್ರಯೋಗ, ಅಯಸ್ಕಾಂತೀಯ ಗುಣಗಳು ಮತ್ತು ಉಷ್ಣತೆ, ಕೆಪಾಸಿಟರ್, ಸರಣಿ ಮತ್ತು ಸಮನಾಂತರ ಧಾರಕಗಳು, ಫ್ಲೆಮಿಂಗನ ಎಡಗೈ ನಿಯಮ, ಡಿ.ಸಿ. ಮೋಟಾರ್, ಸೋಮಾರಿ ಗೋಳ, ಬಲ್ಬಿನ ವಿವಿಧ ವಿಧಗಳು, ಕಿರುವಿದ್ಯುತ್ ಮಂಡಲ ತಡೆ, ವಿದ್ಯುತ್ ಜನರೇಟರ್, ಫ್ಯಾರಡೆಯ ನಿಯಮ, ಓಮ್‌ನ ನಿಯಮ, ಕಾಂತೀಯ ವಿದ್ಯುತ್ ಪ್ರೇರಣೆ ಮುಂತಾದ ಹಲವಾರು ವಿಷಯಗಳನ್ನು ಹೊತ್ತ ಬಸ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ವಿದ್ಯಾರ್ಥಿಗಳು ಬಸ್‌ನಲ್ಲಿರುವ ವಿಜ್ಞಾನ ವಿಷಯಗಳನ್ನು ಬಹಳ ಕುತೂಹಲದಿಂದ ವೀಕ್ಷಿಸುತ್ತಿದ್ದು, ಅವರಲ್ಲಿ ಮೂಡುವ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಕೆಲಸವನ್ನು ಸಂಸ್ಥೆಯ ಅಧಿಕಾರಿಗಳು ಮತ್ತು ಸ್ವಯಂ ಸೇವಕರು ಮಾಡುತ್ತಿದ್ದಾರೆ.

  • ವರದಿ: ಶಶಿಧರ ನಾಯ್ಕ ಎ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ

Leave a Reply