ಬೆಂಕಿ ನಂದಿಸುವ ರೋಬೋಟ್ – ಮೂಡುಬಿದಿರೆ ವಿದ್ಯಾರ್ಥಿಗಳ ಆವಿಷ್ಕಾರ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.

Call us

Click Here

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಮೂಡುಬಿದಿರೆ ಈ ಹೈಸ್ಕೂಲು ವಿದ್ಯಾರ್ಥಿಗಳು ವಿನ್ಯಾಸಗೊಳಿಸಿರುವ ಬೆಂಕಿ ನಂದಿಸುವ ರೋಬೋಟ್ ಆಳ್ವಾಸ್ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸಾಂಸ್ಕ್ರತಿಕ ಜಾಂಬೂರಿಯ ವಿಜ್ಞಾನ ಮೇಳದಲ್ಲಿ ಸದ್ದು ಮಾಡುತ್ತಿದೆ.

ಮೂಡಬಿದರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಜೇಷ್ಠ ಮತ್ತು ಮನಿಶ್ ರೂಪಿಸಿರುವ ಬೆಂಕಿ ನಂದಿಸುವ ರೋಬೋಟ್ ವಿನ್ಯಾಸ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದು, ಬಹಳ ಪ್ರಶಂಸೆಗೆ ಪಾತ್ರವಾಗಿದೆ.

ಈ ರೋಬೋಟ್‌ನ್ನು ರಿಮೋಟ್ ಮೂಲಕ ನಿಯಂತ್ರಿಸಬಹುದಾಗಿದ್ದು, ಯಾವ ಸ್ಥಳದಲ್ಲಿ ಬೆಂಕಿ ಬಿದ್ದಿದೆ ಆ ಸ್ಥಳಕ್ಕೆ ಈ ರೋಬೋಟ್ ತತ್‌ಕ್ಷಣದಲ್ಲೇ ಧಾವಿಸಿ ಬೆಂಕಿ ನಂದಿಸುವ ಕೆಲಸ ಮಾಡುತ್ತದೆ. ಈ ರೋಬೋಟ್ ಬೆಂಕಿ ಬಿದ್ದ ಸ್ಥಳವನ್ನು ಇದಕ್ಕೆ ಅಳವಡಿಸಿರುವ ಫ್ಲೇಮ್ ಸೆನ್ಸಾರ್ ಕಂಡುಹಿಡಿದು, ಆರ್ಡಿಯೋನೋ ಯು.ಎನ್.ಒ ಬೋರ್ಡ್‌ಗೆ ಸಂದೇಶ ಕಳುಹಿಸುತ್ತದೆ.

ಈ ಬೋರ್ಡ್ ಎಲ್ಟೋನೈಂಟಿ ಮೋಟಾರ್‌ಗೆ ಸಂದೇಶ ಕಳುಹಿಸಿ, ಅದಾಗಲೇ ಅಳವಡಿಸಿರುವ ನೀರಿನ ಕಂಟೈನರ್‌ನಲ್ಲಿರುವ ನೀರನ್ನು ಹೊತ್ತು ಮುಂದೆ ಸ್ವಯಂಚಾಲಿತವಾಗಿ ಮುಂದೆ ಸಾಗಿ ಬೆಂಕಿಯನ್ನು ನಂದಿಸುವ ಕೆಲಸ ಮಾಡುತ್ತದೆ. ಇದೇ ರೋಬೊಟನ್ನು ದೊಡ್ಡ ಮಟ್ಟದಲ್ಲಿ ಮಾಡಿ, ಅಭಿವೃದ್ದಿಪಡಿಸಿದರೆ ಕೈಗಾರಿಕಾ ಪ್ರದೇಶ ಮತ್ತು ಶಾಲಾ-ಕಾಲೇಜುಗಳಲ್ಲಿ ಅಥವಾ ಇತರ ಕಡೆಗಳಲ್ಲಿ ಬೆಂಕಿ ಅವಘಡ ಉಂಟಾದಾಗ ತತ್‌ಕ್ಷಣದಲ್ಲೇ ಈ ರೋಬೋಟ್‌ನ್ನು ಬಳಸಿ ಸುಲಭವಾಗಿ ಬೆಂಕಿ ನಂದಿಸಬಹುದು ಎನ್ನುತ್ತಾರೆ ಈ ರೋಬೋಟ್ ವಿನ್ಯಾಸ ರೂಪಿಸಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳು.

Click here

Click here

Click here

Click Here

Call us

Call us

ಈ ಬೆಂಕಿ ನಂದಿಸುವ ರೋಬೋಟ್ ತಯಾರಿಸಲು ಆರ್ಡಿಯೋನೋ ಯು.ಎನ್.ಒ ಬೋರ್ಡ್, ಎಲ್.೨೯೩ ಮೋಟಾರ್ ಡ್ರೈವ್, ಸರ್ವೊ ಮೋಟಾರ್, ಬಯೋ ಮೋಟಾರ್, ಸಣ್ಣ ನೀರಿನ ಪಂಪ್, ಕಂಟೈನರ್, ಬ್ರೆಡ್ ಬೋರ್ಡ್, ಫ್ಲೇಮ್ ಸೆನ್ಸಾರ್, ೪ ಚಕ್ರಗಳು, ಜಂಪ್ ಕೇಬಲ್ಸ್, ೩.೭ ವೋಲ್ಟ್ ಲಿ-ಲಿಯೋನ್ ಮತ್ತು ಬ್ಯಾಟರಿ ಹೋಲ್ಡರ್‌ಗಳನ್ನು ಬಳಸಲಾಗಿದೆ.

  • ವರದಿ: ಶಶಿಧರ ನಾಯ್ಕ ಎ., ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ

Leave a Reply