ಉಡುಪಿಯ ದೃಶ್ಯಕಲಾ ಮಂದಿರದ ವಿದ್ಯಾರ್ಥಿಗಳ ಸ್ಪಾಟ್ ಆರ್ಟ್ ಕಲಾಕೌಶಲ್ಯ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಹೊಸಪೀಳಿಗೆಗೆ ಇಷ್ಟವಾಗುವ ಟ್ಯಾಟೋ ದೀರ್ಘಾವಧಿಯವರೆಗೆ ಇರುತ್ತದೆ. ಒಂದೇ ದಿನಕ್ಕೆ ಕಾಣಿಸಿಕೊಂಡು ಅಳಿಸಬಹುದಾದಂತಹ, ಟ್ಯಾಟೋವನ್ನೇ ಹೋಲುವಂಥ ಕಲಾಕೌಶಲ್ಯದ ಸ್ಪಾಟ್ ‘ಆರ್ಟ್’ನ ಪ್ರಯೋಜನದ ಅವಕಾಶ ಮೂಡಬಿದಿರೆಯ ಆಳ್ವಾಸ್ ಆವರಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಲಾಮೇಳದಲ್ಲಿ ಲಭಿಸುತ್ತಿದೆ.

Call us

Click Here

ಉಡುಪಿಯ ದೃಶ್ಯಕಲಾ ಮಂದಿರದ ವಿದ್ಯಾರ್ಥಿಗಳು ಮೂಡಿಸುತ್ತಿರುವ ಈ ಆರ್ಟ್ ಒಂದೇ ದಿನದಲ್ಲಿ ಅಳಿಸಿಹೋಗುತ್ತದೆ. ಇವರು ತಮ್ಮ ಕೈಚಳಕದಿಂದ ವಿಶೇಷ ಗಮನ ಸೆಳೆಯುತ್ತಿದ್ದಾರೆ.

ಸ್ಥಳದಲ್ಲೇ ವಿಭಿನ್ನ ರೀತಿಯ ಆರ್ಟ್‌ಗಳನ್ನು ಕೈಮೇಲೆ ಬಿಡಿಸುತಿದ್ದಾರೆ. ಕೇವಲ ೨೦ ರುಪಾಯಿಗೆ ಕೈ ಮೇಲೆ ಇಷ್ಟದ ಚಿತ್ರಗಳನ್ನು ರೇಖಿಸುತ್ತಿದ್ದಾರೆ. ವಿದ್ಯಾರ್ಥಿಗಳು ಚಿತ್ರಕಲೆಗಳನ್ನು ಪ್ರದರ್ಶಿಸಲು ಮೇಳಕ್ಕೆ ಬಂದಿದ್ದು, ಇದೇ ಸಮಯದಲ್ಲಿ ತಮಗೆ ಗೊತ್ತಿರುವ ಕಲೆಯನ್ನು ಬಳಸಿಕೊಳ್ಳೋ ಉದ್ದೇಶದಿಂದ ಸ್ಪಾಟ್ ಆರ್ಟ್ ಬಿಡಿಸುತ್ತಿದ್ದಾರೆ.

ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಹಲವಾರು ವಿದ್ಯಾರ್ಥಿಗಳು ಇದಕ್ಕೆ ಮಾರುಹೋಗಿ ತಮ್ಮ ಕೈಮೇಲೆ ವಿವಿಧ ಆರ್ಟ್‌ಗಳ ಚಿತ್ರಗಳನ್ನು ಬಿಡಿಸಿಕೊಳ್ಳುತ್ತಿದ್ದಾರೆ. ವಿವಿಧ ರೀತಿಯ ಚಿತ್ರಗಳು ಸಹ ಎಲ್ಲರ ಮನಸ್ಸನ್ನು ಗೆಲ್ಲುತ್ತಿವೆ. ಯಕ್ಷಗಾನ. ಪ್ರಕೃತಿಯ ಚಿತ್ರಗಳು, ಹೀಗೆ ವಿಭಿನ್ನ ಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ.

ವಯೋಲಿನ್, ಕತ್ತಿ, ಪಕ್ಷಿ, ಗೊಂಬೆ ಸೇರಿದಂತೆ ಹಲವಾರು ಚಿತ್ರಗಳನ್ನು ಕೆಲವೇ ನಿಮಿಷಗಳಲ್ಲಿ ಕೈ ಮೇಲೆ ಬಿಡಿಸಿ ಎಲ್ಲರ ಕಣ್ಮನ ಸೆಳೆಯುತ್ತಿದ್ದಾರೆ. ಇಷ್ಟದ ಚಿತ್ರಗಳನ್ನು ಕೈಮೇಲೆ ಮೂಡಿಸಿಕೊಳ್ಳುವ ಅಪೇಕ್ಷೆಯುಳ್ಳವರು ಈ ಕಲಾಮೇಳಕ್ಕೆ ಭೇಟಿ ನೀಡಬಹುದು.

Click here

Click here

Click here

Click Here

Call us

Call us

ವರದಿ: ಐಶ್ವರ್ಯ ಕೋಣನ, ದ್ವಿತೀಯ ವರ್ಷದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
ಚಿತ್ರಗಳು: ವಿನೀತಾ ಎಸ್

Leave a Reply