ಜಾಂಬೂರಿಯಲ್ಲಿ ಗಮನ ಸೆಳೆಯುತ್ತಿದೆ ಪ್ರಾಚ್ಯ ವಸ್ತುಗಳ ಸಂಗ್ರಹ

Click Here

Call us

Call us

Call us

ಕಾರ್ತಿಕ ಹೆಗಡೆ | ಕುಂದಾಪ್ರ ಡಾಟ್ ಕಾಂ ವರದಿ.
ವಿದ್ಯಾಗಿರಿ:
ಸಾಂಸ್ಕೃತಿಕ ಜಾಂಬೂರಿಯಲ್ಲಿ ಮಳಿಗೆಯೊಂದರಲ್ಲಿ ಪ್ರಾಚ್ಯ ವಸ್ತುಸಂಗ್ರಾಹಕರಾದ ಹಳ್ಳಿಮನೆ ಹೈದರಾಲಿಯ ಈ ಪ್ರಾಚ್ಯ ವಸ್ತು ಸಂಗ್ರಹಾಲಯ ಗಮನಸೆಳೆಯುತ್ತಿದೆ.

Call us

Click Here

ಬ್ರಿಟಿಷರ ಕಾಲದಲ್ಲಿ ಬಳಕೆಯಾಗುತ್ತಿದ್ದ ವಸ್ತುಗಳು ಇಲ್ಲಿವೆ. ರಾಜರುಗಳ ಆಡಳಿತದಲ್ಲಿ ಪ್ರಾಮುಖ್ಯ ಪಡೆದಿದ್ದ ಆಡಳಿತಾತ್ಮಕ ಚಿಹ್ನೆಗಳು ಗಮನ ಸೆಳೆಯುತ್ತಿವೆ. ಜನರು ಬಳಸುತ್ತಿದ್ದ ನಾಣ್ಯಗಳಿವೆ. ಟಿಪ್ಪು ಸುಲ್ತಾನ ಕಾಲದ ನಾಣ್ಯಗಳು, ದೇಶೀಯ ಮತ್ತು ವಿದೇಶಿ ನೋಟ್‌ಗಳಿವೆ. ಈ ನಾಣ್ಯಗಳು ಆಯಾ ಕಾಲದ ಬದುಕಿನ ಚಿತ್ರಣವನ್ನೂ ಕಟ್ಟಿಕೊಡುತ್ತಿವೆ.

ಅಲ್ಲದೆ ಹಿಂದಿನ ಕಾಲದಲ್ಲಿ ಬಳಸಲಾಗುತ್ತಿದ್ದ ತಾಮ್ರ, ಹಿತ್ತಾಳೆ, ಮರದಿಂದ ಸಿದ್ಧಪಡಿಸಲಾದ ಉಪಕರಣಗಳು ಮತ್ತು ಅವುಗಳು ಬಳಕೆಯಾಗುತ್ತಿದ್ದ ರೀತಿಯ ಪ್ರಾತ್ಯಕ್ಷಿಕೆ ಇಲ್ಲಿದೆ. ವಿದ್ಯುತ್ ಬಳಸದೆಯೇ ಕಾರ್ಯನಿರ್ವಹಿಸುವಂಥ ಉಪಕರಣಗಳು ಕೈ ಮೂಲಕ ತಿರುಗಿಸುವ ಜೆರಾಕ್ಸ್ ಯಂತ್ರೋಪಕರಣಗಳನ್ನು ಕಾಣಬಹುದಾಗಿದೆ. ಬಂಗಾರ ತೂಗುವ ತಕ್ಕಡಿ, ಅಕ್ಕಿ ಅಳೆಯುವ ಶೇರು, ರಾಜರ ಕಾಲದಲ್ಲಿನ ಕತ್ತಿ, ಉಪ್ಪು ಹಾಕಿಡುವ ಮರಾಯಿ, ಚನ್ನೆಮಣೆ, ಶಾವಿಗೆ ಮಣಿ, ೧೦೦ ವರ್ಷಕ್ಕಿಂತ ಹಳೆಯ ಸೆಂಟ್ ಬಾಟಲ್‌ಗಳನ್ನ ಕಾಣಬಹುದು.

ಟೆಲಿಫೋನ್ ಬಂದಾಗಿನಿಂದಲೂ ಇಲ್ಲಿನವರೆಗಿನ ಎಲ್ಲರೀತಿಯ ಫೋನ್ ಮತ್ತು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಲ್ಪಟ್ಟ ಮೊಬೈಲ್‌ನಿಂದ ಹಿಡಿದು ಎಲ್ಲ ಬಗೆಯ ಮೊಬೈಲ್ ಪರಿಕರಗಳನ್ನು ಇಲ್ಲಿ ಕಾಣಬಹುದು. ಸುಮಾರು ೮೦ಕ್ಕಿಂತ ಹೆಚ್ಚು ವಾಚ್‌ಗಳ ಪ್ರದರ್ಶನವೂ ಇಲ್ಲಿದೆ. ಈ ಹಿಂದೆ ಅಮಲಿಗಾಗಿ ಬಳಸುತ್ತಿದ್ದ ಹುಕ್ಕಾ ಪಾಟ್, ಚಿಲಂ, ಸಿಗರೇಟ್ ಬೂದಿಯನ್ನ ಉದುರಿಸಿಡುವ ಪತ್ರೆ ಮತ್ತು ಪೆಟ್ರೊಮ್ಯಾಕ್ಸ್, ಹಾಳೆಯ ಟೊಪ್ಪಿ, ಹಂಡೆ, ಅಕ್ಕಿ ಕೇರುವ ಮರ, ಬೆತ್ತದ ಬುಟ್ಟಿ, ಮಣ್ಣಿನ ಮಡಿಕೆ, ಬ್ಯಾಟರಿಗಳೂ ಇವೆ.

ಕೇವಲ ಇಂತಹ ಉಪಕರಣಗಳಲ್ಲದೆ ರೈತರು ಉಳುಮೆಗೆ ಬಳಸುತ್ತಿದ್ದ ವಿವಿಧ ಭಾಗಗಳಲ್ಲಿನ ನೊಗ ನೇಗಿಲು. ಎತ್ತಿನ ಗಾಡಿ ಮತ್ತು ಮೀನು ಹಿಡಿಯುವ ಮಂಕರಿಗಳು ಜನರನ್ನ ಆಕರ್ಷಿಸುತ್ತಿವೆ. ಈ ಸಂಗ್ರಹಾಲಯದ ಹೈದರಾಲಿ ಅವರು ತಮ್ಮ ೧೫ನೇ ವರ್ಷದಿಂದಲೇ ಹಳೇವಸ್ತು ಗಳನ್ನು ಸಂಗ್ರಹಿಸುತ್ತಾ ಬಂದಿದ್ದು ಕರ್ನಾಟಕವಲ್ಲದೆ ಭಾರತದ ವಿವಿಧ ರಾಜ್ಯಗಳಿಗೆ ಸಂಗ್ರಹದ ಉದ್ದೇಶದ ಕಾರಣಕ್ಕಾಗಿಯೇ ಭೇಟಿ ನೀಡಿದ್ದಾರೆ.

Click here

Click here

Click here

Click Here

Call us

Call us

ವರದಿ: ಕಾರ್ತಿಕ ಹೆಗಡೆ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ

Leave a Reply