ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಸ್ಕೌಟ್ ಅಂಡ್ ಗೈಡ್ಸ್ ಅಂತಾರಾಷ್ಟ್ರೀಯ ಜಾಂಬೂರಿ ಹಲವು ಕಲೆ ಸಂಸ್ಕೃತಿಗಳಿಗೆ ವೇದಿಕೆಯಾಗಿದೆ. ಅದರಲ್ಲೂ ಬೆಂಗಾಲದಿಂದ ಬಂದಿರುವ ಧೋಕ್ರಾ ಆರ್ಟ್‌ನ ಮೂರ್ತಿಗಳು ಜನಮನ ಸೆಳೆಯುತ್ತಿವೆ.
ಧೋಕ್ರಾ ಆರ್ಟ್, ‘ಧೋಕ್ರಾ ದಾಮರ್’ ಎಂಬ ಬುಡಕಟ್ಟು ಜನಾಂಗದಿಂದ ಬಂದಿದ್ದು, ಈ ಕಲೆಯನ್ನು ಜಗತ್ತಿನ ಮೊದಲ ಕಬ್ಬಿಣಾಂಶ ಇಲ್ಲದ ಲೋಹವನ್ನು ಉಪಯೋಗಿಸಿಕೊಂಡು ಮೂರ್ತಿಗಳನ್ನು ಸಿದ್ದಪಡಿಸಿರುವ ಏಕೈಕ ಕಲೆ ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.
ಧೋಕ್ರಾ ಆರ್ಟ್ ಮೂರ್ತಿಗಳನ್ನು ತಾಮ್ರ್ರದ ತಂತಿಗಳು, ಚೂರುಗಳನ್ನು ಬಳಸಿಕೊಂಡು ಮೂರ್ತಿಗಳನ್ನು ತಯಾರಿಸುವುದೇ ಈ ಕಲೆಯ ವಿಶೇಷತೆ. ಈ ಮೂರ್ತಿಗಳನ್ನು ಲಾಸ್ಟ್ ವ್ಯಾಕ್ಸ್ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ಇಂತಹ ವಿಷೇಶತೆಯುಳ್ಳ ಕಲಾ ಪ್ರಕಾರವನ್ನು ಜಂಬೂರಿಯ ಕಲಾಮೇಳದಲ್ಲಿ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.
ಪಶ್ಚಿಮ ಬಂಗಾಳದ ಹಲವು ಬುಡಕಟ್ಟು ಜನಾಂಗ ಈ ಕಲೆಯಿಂದಲೇ ಜೀವನಾಂಶ ಕಂಡುಕೊಳ್ಳುತ್ತಿವೆ. ಅಂತಹ ಕುಟುಂಬಗಳಲ್ಲಿ ಸುರೇಶ್ ಕರ್ಮಕಾರ್ ಕುಟುಂಬವೂ ಒಂದು. ಇದೀಗ ಮೂಡುಬಿದಿರೆಯ ಜಾಂಬೂರಿಗೆ ಬಂದು ತಾವು ತಯಾರಿಸಿರುವ ಮೂರ್ತಿಗಳನ್ನು ಮಾರಾಟಮಾಡಿ ಪ್ರಚಾರ ಮಾಡುತ್ತಿದ್ದಾರೆ.
ಬರಿಯ ವಿದ್ಯಾರ್ಥಿಗಳೇ ತುಂಬಿಕೊಂಡಿರುವ ಈ ಜಾಂಬೂರಿಯಲ್ಲಿ ತನ್ನ ಕಲೆ ಜನಮೆಚ್ಚುಗೆ ಪಡೆಯುವ ಅನುಮಾನವಿತ್ತು. ಆದರೆ, ಕಲಾಸಕ್ತಿಯುಳ್ಳ ಸಾವಿರಾರು ಮಂದಿ ತಮ್ಮ ಅಂಗಡಿಎ ಭೇಟಿ ನೀಡಿ ಖರೀದಿಯನ್ನೂ ಮಾಡುತ್ತಿರುವುದು ಸಂತೋಷ ನೀಡಿದೆ ಎಂದು ಸುರೇಶ್ ಕಲ್ಮಕಾರ್ ತಮ್ಮ ಅಭಿಪ್ರಯಾ ಹೇಳಿಕೊಂಡರು.
ಸುಮಾರು ನೂರು ರುಪಾಯಿಗಳಿಂದ ಹಿಡಿದು ಹತ್ತು ಸಾವಿರ ರುಪಾಯಿಗಳ ತನಕವೂ ಮೌಲ್ಯವಿರುವ ಮೂರ್ತಿಗಳು ದೊರಕುತ್ತವೆ. ಕಂಚು ಮತ್ತು ಸತುವಿನ ಮಿಶ್ರಣವಿರುವ ತಾಮ್ರವನ್ನು ಎರಕ ಹೊಯ್ಯವ ವಿಧಾನದ ಮೂಲಕ ತಯಾರು ಮಾಡಲಾಗುತ್ತದೆ.
ನೀವೇನಾರೂ ಜಾಂಬೂರಿಯ ಕಲಾಮೇಳಕ್ಕೆ ಭೇಟಿ ನೀಡಿದರೆ ಈ ಐತಿಹಾಸಿಕ ಧೋಕ್ರಾ ಆರ್ಟ್ ಮೂರ್ತಿಗಳ ಮಳಿಗೆಗೆ ಭೇಟಿ ನೀಡೋದನ್ನು ಮಾತ್ರ ಮರಿಯಬೇಡಿ.
ವರದಿ: ಸುತನ್, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ