ಕೃಷಿಮೇಳದ ಪ್ರದರ್ಶನದಲ್ಲಿ 150ಕ್ಕೂ ಅಧಿಕ ಭತ್ತದ ತಳಿಗಳು

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ದೈನಂದಿನ ಆಹಾರ ಕ್ರಮದಲ್ಲಿ ಪ್ರಮುಖ ಪಾತ್ರವಹಿಸುವ ಭತ್ತದ ತಳಿಗಳ ಕುರಿತು ಕುಂಬಳೂರು ಹರಿಹರದ ಶರಣ ಮುದ್ದಣ್ಣ ಸಾವಯವ ಕೃಷಿಕರ ಬಳಗವು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಕೃಷಿಮೇಳದಲ್ಲಿ ಪ್ರದರ್ಶನ ಎರ್ಪಡಿಸಿದ್ದು, ಕೃಷಿಪ್ರಿಯರ ಗಮನ ಸೆಳೆಯಿತು.

Call us

Click Here

ಈ ಮಳಿಗೆಯು 150ಕ್ಕೂ ಅಧಿಕ ಸಾಂಪ್ರದಾಯಿಕ ಪ್ರಾಚೀನ ಪ್ರಬೇಧದ ಭತ್ತಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ತಿಳುವಳಿಕೆ ನೀಡುತ್ತಿದೆ. ಇಲ್ಲಿ ರೈತರೇ ಮುಂದೆ ಬಂದು ವಿದ್ಯಾರ್ಥಿಗಳಿಗೆ ತಿಳೀಹೇಳುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಚಂದನ್ ಬೋಗಾ, ವಂದನಾ, ಅಂಬಾ ಮಾರಿ, ತೂಯಮಲ್ಲಿ, ಗೋಪಿಕಾ, ರತ್ನಸಾಗರ್, ಬಾಸುಮತಿ, ಕರಿಗಜವಿಲ್ಲಿ, ಇನ್ನಿತರ ವೈವಿಧ್ಯಮಯ ಸಾಂಪ್ರದಾಯಿಕ ಮತ್ತು ದೇಶೀಯ ಭತ್ತದ ತಳಿಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಪುರಾತನ ಕಾಲದಿಂದ ಬೆಳೆಸಿಕೊಂಡು ಬಂದ ವಿವಿಧ ಬಗೆಯ ಭತ್ತಗಳು ಇಂದು ಎಲ್ಲೆಡೆ ಕಾಣಸಿಗುವುದು ಅತಿ ವಿರಳ. ಅದೆಷ್ಟೋ ಜನರಿಗೆ ಭತ್ತದಲ್ಲಿನ ಔಷದೀಯ ಗುಣದ ಕುರಿತು ತಿಳಿದಿಲ್ಲ. ಇಂತಹ ವಿಶೇಷ ಭತ್ತದ ಪ್ರಕಾರಗಳ ಕುರಿತಾದ ವಿವರಣೆಯನ್ನು ಕೃಷಿಮೇಳದ ವಸ್ತು ಪ್ರದರ್ಶನದಲ್ಲಿ ಹೇಳಲಾಗಿದೆ. ಜೊತೆಗೆ ಭತ್ತದ ಮಹತ್ವ, ಅದರಿಂದಾಗವ ಉಪಯೋಗಗಳ ಕುರಿತಾದ ವಿಶೇಷ ಮಾಹಿತಿ ಒದಗಿಸಲಾಗಿದೆ.

  • ವರದಿ: ವಿನೀತಾ ಎಸ್, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ

Leave a Reply