ಆರೋಗ್ಯಕರ ಹರ್ಬಲ್ ತುಪ್ಪದ ಹೀರೇಕಾಯಿ ನಾರು

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ರ್ಟೀಯ ಸಾಂಸ್ಕೃತಿಕ ಜಾಂಬೂರಿಯ ಕಲಾಮೇಳದ ವಿಶೇಷ ನಾರಿನ ಅಂಗಡಿಯೊಂದು ಜನರ ಆಕರ್ಷಣೆಯ ಕೇಂದ್ರವಾಗಿದೆ.

Call us

Click Here

ಪ್ಲಾಸ್ಟಿಕ್‌ನಿಂದ ಉಂಟಾಗುವ ಅಪಾಯವನ್ನು ಅರಿತ ಅದೆಷ್ಟೋ ಜನರು ದಿನಬಳಕೆಗಾಗಿ ಪ್ಲಾಸ್ಟಿಕ್‌ಗೆ ಪರ್ಯಾಯವನ್ನು ಹುಡುಕಿಕೊಂಡಿದ್ದಾರೆ. ಪರಿಸರ ಪೂರಕ ಮತ್ತು ಆರೋಗ್ಯಕರವಾದ ವಸ್ತುಗಳನ್ನು ಬಳಸುವುದರಿಂದ ಆಗುವಂತಹ ಉಪಯೋಗಗಳನ್ನು ಸ್ವತಃ ಅರಿತ ತುಮಕೂರಿನ ಶಿವಣ್ಣ ಅವರು ತುಪ್ಪದ ಹೀರೇಕಾಯಿ ನಾರಿನ ಉತ್ಪಾದನೆಯ ಅಂಗಡಿಯೊಂದನ್ನು ಪ್ರಾರಂಭಿಸಿದ್ದಾರೆ. ಈ ಮಳಿಗೆಯಲ್ಲಿ ನಾರಿನ ಉತ್ಪನ್ನಗಳನ್ನು ಮಾರುತ್ತಿದ್ದಾರೆ.

ಅತಿಯಾದ ಪರಿಸರ ಮಾಲಿನ್ಯದಿಂದಾಗಿ ಇತ್ತೀಚೆಗೆ ಚರ್ಮ ರೋಗಗಳ ಪ್ರಮಾಣ ಜಾಸ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ಚರ್ಮ ರೋಗದಿಂದ ರಕ್ಷಣೆ ಪಡೆಯಲು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಎನ್ನುವ ಸದುದ್ದೇಶದಿಂದ ತುಪ್ಪದ ಹೀರೇಕಾಯಿಂದ ತಯಾರಾದ ಮೈ ಉಜ್ಜುವ ನಾರು, ಮತ್ತು ಬೆನ್ನು ಉಜ್ಜುವ ಬ್ರಶ್ ಸಿದ್ಧಪಡಿಸಿದ್ದಾರೆ. ಇವರ ಮಳಿಗೆಯ ಪ್ರತಿಯೊಂದು ಉತ್ಪನ್ನಗಳು ನೈಸರ್ಗಿಕವಾಗಿಯೇ ಸಿದ್ಧವಾಗಿವೆ ಎಂಬುದು ಬಹಳ ವಿಶೇಷ.

ಇದಲ್ಲದೇ ಮೊಳಕಾಲು ನೋವು ಮತ್ತು ಕೀಲು ನೋವಿನ ನಿವಾರಣೆಗೆ ಉಪಯುಕ್ತವಾಗುವ ಹುಣಸೆಹಣ್ಣಿನ ಪುಡಿಯನ್ನು ತಯಾರಿಸಿ ಮಾರಾಟಮಾಡುತ್ತಿದ್ದಾರೆ. ಜೊತೆಗೆ ಯಾವುದೇ ಕೆಮಿಕಲ್ ಮತ್ತು ಪ್ರಿಸರ್ವೇಟಿವ್ ಬಳಸದೇ ಬಹು ಸ್ವಾದಿಷ್ಟವಾದ ಹುಣಸೆಹಣ್ಣಿನ ತೊಕ್ಕನ್ನು ತಯಾರಿಸುತ್ತಾರೆ. ಇದರ ಜೊತೆಗೆ ಮಕ್ಕಳ ವಿಶೇಷ ಆಕರ್ಷಣೆಯಾದ ಹುಣಸೆಹಣ್ಣಿನ ಕಟ್ಟಾ-ಮಿಠ್ಠಾ ಕೂಡ ಸಿದ್ಧಪಡಿಸಿದ್ದಾರೆ. ಔಷಧೀಯ ಗುಣಗಳನ್ನು ಹೊಂದಿರುವ ಹುಣಸೆಹಣ್ಣಿನ ವೈವಿಧ್ಯಮಯ ಉತ್ಪನ್ನಗಳನ್ನು ಶಿವಣ್ಣ ಅವರು ತಯಾರಿಸಿದ್ದಾರೆ.

ವರದಿ: ಭಾರತಿ ಹೆಗಡೆ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಮ್.ಸಿ ಉಜಿರೆ

Click here

Click here

Click here

Click Here

Call us

Call us

Leave a Reply