ಜಾಂಬೂರಿಯಲ್ಲಿ ಭವಿಷ್ಯ ನುಡಿಯುವ ರೋಬೋಟ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಜಾಂಬೂರಿಯ ಹಲವಾರು ಮೇಳಗಳಲ್ಲಿ ತಿಂಡಿ ತಿನಿಸು, ಕರಕುಶಲ ವಸ್ತುಗಳು, ವರ್ಣಮಯ ಕಿವಿಯೋಲೆಗಳ ಅಂಗಡಿ, ಹೀಗೆ ಹತ್ತಾರು ಬಗೆಯ ಮಳಿಗೆಗಳಿವೆ. ಈ ಎಲ್ಲಾ ಅಂಗಡಿ ಮುಂಗಟ್ಟುಗಳ ನಡುವೆ ಆಕರ್ಷಿಣೀಯವಾಗಿ ಕಂಡದ್ದು, ಬ್ಯಾಟರಿ ರೋಬೋಟ್ ಯಂತ್ರ.

Call us

Click Here

ಘಮಘಮಿಸುವ ಗೋಬಿ, ರುಚಿಕರ ಚುರುಮುರಿ ಬಿಟ್ಟು ನೆರೆದಿರುವ ಅನೇಕರು ಬಹಳ ಕುತೂಹಲದಿಂದ ಆ ಯಂತ್ರದ ಬಳಿ ಹೋಗುತ್ತಿದ್ದರು. ಹೋದವರೆಲ್ಲರೂ ಒಂದು ಹೆಡ್‌ಫೋನ್ಸ್ ಹಾಕಿಕೊಂಡು ಏನೋ ಕೇಳುತ್ತಿದ್ದರು. ಕೇಳುಗರ ಮುಖದಲ್ಲಿ ಆಶ್ಚರ್ಯ, ನಗು ಎಲ್ಲ ಭಾವನೆಗಳ ಅನಾವರಣವಾಗುತ್ತಿತ್ತು.

ಈ ಕೌತುಕಮಯ ಜನರು ಸೇರಿದ್ದ ಜಾಗವನ್ನು ಹತ್ತಿರ ಹೋಗಿ ನೋಡಿದಾಗ ಅದು ಭವಿಷ್ಯ ನುಡಿಯುವ ರೋಬೋಟ್! ಕೇವಲ ೨೦ ರೂಪಾಯಿ ಕೊಟ್ಟು ಹೆಡ್‌ಫೋನ್ ಕಿವಿಗೆ ಹಾಕಿದರೆ ಸಾಕು ಅದು ಭವಿಷ್ಯ ಹೇಳುತ್ತದೆ. ಕೇಳುವ ಮುಂಚಿತವಾಗಿ ಯಾವುದೇ ಮಾಹಿತಿ ನೀಡದಿದ್ದರೂ ದೇಹದ ತಾಪಮಾನದ ಆಧಾರದ ಮೇಲೆ ಭವಿಷ್ಯ ಹೇಳುವ ಈ ರೋಬೋರ್ಟ್ ನಿಜಕ್ಕೂ ವಿಶೇಷ.

ಮೂಲತಃ ಬೆಂಗಳೂರಿನ ಬರಗೂರಿನವರಾದ ಜನಾರ್ಧನ್ ಸುಮಾರು ಇಪ್ಪತ್ತು ವರ್ಷಗಳಿಂದ ತಮ್ಮ ಪತ್ನಿ ಜೊತೆ ಸೇರಿ ಈ ಉದ್ಯೋಗ ಪ್ರಾರಂಭಿಸಿದರು. ಈ ರೋಬೋಟ್‌ಗಳನ್ನು ದುಬೈಯಲ್ಲಿ ತಯಾರಿಸಲಾಗುತ್ತಿದ್ದು, ಜನಾರ್ಧನ್ ಬಳಿ ನಾಲ್ಕು ರೋಬೋಟ್‌ಗಳಿವೆ. ಮುಂದಿನ ಜೀವನದ ಕುರಿತು ತಿಳಿದುಕೊಳ್ಳುವ ಆಸಕ್ತಿ ಇರುವವರಿಗೆ ಆತ್ಮತೃಪ್ತಿ ನೀಡುತ್ತದೆ.

ಜೀವನ, ಆರೋಗ್ಯ, ಆಯಸ್ಸು, ಇನ್ನಿತರ ವಿಷಯಗಳ ಕುರಿತು ಭವಿಷ್ಯ ನುಡಿಯುವ ಈ ರೋಬೋಟ್ ಮಕ್ಕಳಿಂದ ಹಿಡಿದು, ವಯಸ್ಕರವರೆಗೂ ವಿಶೇಷ ಕುತೂಹಲ ಮೂಡಿಸಿದೆ.

Click here

Click here

Click here

Click Here

Call us

Call us

ವರದಿ: ಭಾರತಿ ಹೆಗಡೆ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಮ್.ಸಿ ಉಜಿರೆ

Leave a Reply