‘ಯಶೋಕಿರಣ’ದಲ್ಲಿ ಬುಡಕಟ್ಟು ವೈವಿಧ್ಯತೆಯ ಅನಾವರಣ

Call us

Call us

Call us

ಕ್ರೀಷ್ಮಾ ಆರ್ನೋಜಿ | ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಯಶೋಕಿರಣ ಕಟ್ಟಡದಲ್ಲಿ ಆಯೋಜಿತವಾಗಿರವ ಕಲಾಮೇಳದಲ್ಲಿ ಭಾರತದ ವಿವಿಧ ರಾಜ್ಯಗಳ ಬುಡಕಟ್ಟು ಜನಾಂಗಗಳ ಅದ್ಭುತ ಲೋಕವೇ ಅನಾವರಣಗೊಂಡಿದೆ.

Call us

Click Here

ಇಲ್ಲಿ ಬುಡಕಟ್ಟು ಸಮುದಾಯಗಳ ಬದುಕಿನ ವಿವಿಧ ಸ್ವರೂಪ ಸೆರೆಹಿಡಿದಿರುವ ಫೋಟೋಗಳು ಹಲವರನ್ನು ಸೆಳೆಯುತ್ತಿವೆ. ಒಂದೊಂದು ಪೋಟೋ ಬುಡಕಟ್ಟು ಜನಾಂಗದ ಜೀವನಶೈಲಿಯ ವಿಶೇಷತೆಯನ್ನು ಪರಿಚಯಿಸುತ್ತದೆ.

ಈ ಪೋಟೋಗಳನ್ನು ಕ್ಲಿಕ್ಕಿಸಿದವರು ಛಾಯಾಚಿತ್ರಗಾರರಾದ ಅಂದೆಕಾರ್ ಸತೀಶ್ ಲಾಲ್. ತೆಲಂಗಾಣ ರಾಜ್ಯದ ಹೈದರಾಬಾದ್‌ನರಾದ ಇವರು ಕಳೆದ ೨೦ ವರ್ಷಗಳಿಂದ ಬುಡಕಟ್ಟು ಸಂಬಂಧಿತ ಬದುಕಿನ ವಿವರಗಳನ್ನು ಫೋಟೋಗಳ ಮೂಲಕ ದಾಖಲಿಸುತ್ತಿದ್ದಾರೆ. ಹೀಗೆ ದಾಖಲಿಸಿದ ಫೋಟೋಗಳೇ ಜಾಂಬೂರಿ ಕಲಾಮೇಳದ ವಿಶೇಷ ಆಕರ್ಷಣೆಯಾಗಿವೆ.

ಬುಡಕಟ್ಟು ಪೋಟೋಗ್ರಪಿ ಪ್ರದರ್ಶನದಲ್ಲಿ ತೆಲಂಗಾಣದ ಗೊಂಡಾ, ಕೋಯಾ, ಒಡಿಶಾದ ಭೂಮಿಯಾ, ಲಂಜಿಯಾ ಸಾರೋ, ಡೋಂಗ್ರಿಯಾ, ಬೊಂಡಾ ಬುಡಕಟ್ಟು, ಮಧ್ಯಪ್ರದೇಶದ ಬೈಗಾ, ನಾಗಾಲಾಂಡ್‌ನ ಕೊನ್ಯಾಕ್, ಆಂಧ್ರಪ್ರದೇಶದ ವಾಲ್ಮೀಕಿ ಬುಡಕಟ್ಟು, ಅರುಣಾಚಲ ಪ್ರದೇಶದ ಅಪತಾನಿ, ಗುಜರಾತ್‌ನ ರಾಬರಿ, ಕುತ್ತಿಯಾ ಕೊಂಡ್, ರಾಜಸ್ಥಾನದ ಜತ್ ಬುಡಕಟ್ಟು ಜನಾಂಗಗಳ ಜೀವನ ವೈವಿಧ್ಯತೆಯನ್ನು ಕಲಾಮೇಳದ ಫೋಟೋಗಳು ಕಾಣಿಸಿವೆ.

ಬುಡಕಟ್ಟು ಬದುಕಿನ ಹಾಡುಪಾಡು, ಅಸಹಾಯಕ ಭಾವ, ಕೌಟುಂಬಿಕ ಬದುಕಿನ ಬಾಂಧವ್ಯ, ಮಾತೃತ್ವ, ಪ್ರಕೃತಿಯೊಂದಿಗಿನ ಆಪ್ತನಂಟು, ದುಡಿಮೆಯ ಆಯಾಮಗಳು, ನೆಮ್ಮದಿಯ ಬದುಕಿಗಾಗಿ ಹಂಬಲಿಸುವ ತಹತಹಿಕೆ – ಇವೆಲ್ಲವೂ ಇಲ್ಲಿ ಪ್ರದರ್ಶಿತಗೊಳ್ಳುತ್ತಿರುವ ಫೋಟೋಗಳ ಮೂಲಕ ಚಿತ್ರಣಗೊಂಡಿದೆ. ಬುಡಕಟ್ಟು ಜನಾಂಗದ ಉಡುಪಿನ ಶೈಲಿ, ಆಭರಣಗಳ ಮಾದರಿಗಳು ಮನಸೆಳೆಯುತ್ತಿವೆ. ಇಲ್ಲಿಯವರೆಗೂ ೧೦ ರಾಜ್ಯಗಳ ೩೦ ಬಗೆಯ ಬುಡಕಟ್ಟು ಜನಾಂಗೀಯ ಸಂಸ್ಕೃತಿ ಬಿಂಬಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

Click here

Click here

Click here

Click Here

Call us

Call us

  • ವರದಿ: ಕ್ರೀಷ್ಮಾ ಆರ್ನೋಜಿ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಮ್.ಸಿ ಉಜಿರೆ
  • ಚಿತ್ರ: ಆಶಿಶ್ ಜಿ ಯಾದವ್

Leave a Reply