ಸಾಧಕ ವಿದ್ಯಾರ್ಥಿಗಳಿಗೆ ಡಾ| ಶಿವರಾಮ ಕಾರಂತ ಬಾಲ ಪುರಸ್ಕಾರ ಪ್ರದಾನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಮಕ್ಕಳ ಹೊಸ ಚಿಂತನೆಗೆ ಪೋಷಕರ ಸಹಕಾರ ಆಗತ್ಯ, ಅವರ ಸರ್ವತೋಮುಖ ಬೆಳವಣಿಗೆಗೆ ಹೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೆಪಿಸಬೇಕು, ಕಾರಂತರ ಬಾಲ ಪುರಸ್ಕಾರದಿಂದ ಮಕ್ಕಳಲ್ಲಿ ಇನ್ನೂ ಹೊಸ ಹುರುಪು ಸೃಷ್ಠಿ ಸಾಧ್ಯ ಎಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದರು.

Call us

Click Here

ಅವರು ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಡಾ|| ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಡಾ|| ಶಿವರಾಮ ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಇವರ ಆಶ್ರಯದಲ್ಲಿ ನಡೆದ ಕಾರಂತರ ಇಪ್ಪತ್ತೈದನೇ ಪುಣ್ಯ ಸ್ಮರಣೆ ಅಂಗವಾಗಿ ಮಕ್ಕಳ ಸಾಂಸ್ಕೃತಿಕ – ಸಾಹಿತ್ಯಿಕ ರಸಗವಳ ಅನೂಹ್ಯ-೨೦೨೨ (ನಾವೀನ್ಯದ ಗೌಜಿ) ಮೂರನೇ ದಿನದ ಕಾರ್ಯಕ್ರಮದಲ್ಲಿ ಡಾ|| ಶಿವರಾಮ ಕಾರಂತ ಬಾಲ ಪುರಸ್ಕಾರ ಪ್ರದಾನ ಮಾಡಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ನ ದೃತಿ ಎಸ್, ಜಿ.ಎಂ. ವಿದ್ಯಾನಿಕೇತನ ಬ್ರಹ್ಮಾವರದ ವಿದ್ಯಾರ್ಥಿನಿ ಮಾನ್ವಿ ಆರ್, ಸ.ಹಿ.ಪ್ರಾ.ಶಾಲೆ ಮಣೂರು ಪಡುಕೆರೆ ವಿದ್ಯಾರ್ಥಿ ಲಕ್ಷ್ಮೀಶ ಟಿ ಶ್ರೀಯಾನ್ , ಕೆ.ಪಿ.ಎಸ್ ಬಿದ್ಕಲ್‌ಕಟ್ಟೆ ವಿದ್ಯಾರ್ಥಿನಿ ಶ್ರೀ ನಿತಾ ಎನ್, ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ.ಶಾಲೆ ಗಂಗೊಳ್ಳಿ ವಿದ್ಯಾರ್ಥಿ ಸಂಜಿತ್ ಎಂ, ಸ.ಹಿ.ಪ್ರಾ.ಶಾಲೆ ಮಣೂರು-ಪಡುಕೆರೆ ವಿದ್ಯಾರ್ಥಿನಿ ಲಿಖಿತಾ, ಶ್ರೀ ದು.ಪ.ಅ.ಹಿ.ಪ್ರಾ.ಶಾಲೆ ಮಂದಾರ್ತಿ ವಿದ್ಯಾರ್ಥಿನಿ ಸಿರಿ, ರೋಟರಿ ಕೇಂದ್ರೀಯ ಶಾಲೆ ವಿದ್ಯಾರ್ಥಿನಿ ಇಶಾ ಪ್ರದೀಪ್ ದೇವಾಡಿಗ, ಮಿಲಾಗ್ರೀಸ್ ಆಂಗ್ಲ ಮಾಧ್ಯಮ ಶಾಲೆ ಕಲ್ಯಾಣಪುರ ವಿದ್ಯಾರ್ಥಿನಿ ಪ್ರವಣ್ಯ ಯು ರಾವ್, ಸ.ಹಿ.ಪ್ರಾ.ಶಾಲೆ ಚಿತ್ರಪಾಡಿ ವಿದ್ಯಾರ್ಥಿನಿ ಅನ್ವಿತಾ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್‌ಕಟ್ಟೆ ವಿದ್ಯಾರ್ಥಿ ಆದೀಶ ಪಿ.ಬಿ,ಶ್ರೀ ರವಿ ಶಂಕರ ವಿದ್ಯಾಮಂದಿರ ಕೊಂಚಾಡಿ ಶಾಲೆ ವಿದ್ಯಾರ್ಥಿನಿ ಪ್ರಾಪ್ತಿ ಡಿ ಶೆಟ್ಟಿ, ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ವಿದ್ಯಾರ್ಥಿನಿ ಮಹಾಲಸ ಶ್ಯಾನುಭಾಗ್, ಸ.ಮಾ.ಹಿ.ಪ್ರಾ.ಶಾಲೆ ಅಜೆಕಾರು ವಿದ್ಯಾರ್ಥಿ ಸುನಿಧಿ ಎಸ್ ಅಜೆಕಾರು, ಆದಿವುಡುಪಿ ಆಂಗ್ಲ ಮಾಧ್ಯಮ ಶಾಲೆ ಉಡುಪಿ ವಿದ್ಯಾರ್ಥಿ ಅಮೋಘ ಕಂಬಳಕಟ್ಟ, ನಾರಾಯಣ ವಿಶೇಷ ಮಕ್ಕಳ ಶಾಲೆ ತಲ್ಲೂರು ವಿದ್ಯಾರ್ಥಿ ಅನುರಾಗ್ ನಾಯಕ್, ಲಿಟಲ್‌ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ ವಿದ್ಯಾರ್ಥಿನಿ ಆರಾಧ್ಯ ಎಸ್ ಶೆಟ್ಟಿ, ಕುವೆಂಪು ಶತಮಾನೋತ್ಸವ ಸ.ಶಾಲೆ ತೆಕ್ಕಟ್ಟೆ ಸಮೃದ್ಧಿ ಎಸ್ ಮೊಗವೀರ, ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆ ಮಣಿಪಾಲ ವಿದ್ಯಾರ್ಥಿ ಬಿ ಸಮರ್ಥ ಎಸ್ ಭಟ್ ಸ.ಮಾ.ಹಿ.ಪ್ರಾ.ಶಾಲೆ ಹೆಬ್ರಿ ವಿದ್ಯಾರ್ಥಿ ಪ್ರೀತಮ್ ಅವರಿಗೆ ಡಾ|| ಶಿವರಾಮ ಕಾರಂತ ಬಾಲ ಪುರಸ್ಕಾರ ಪ್ರದಾನ ಮಾಡಲಾಯಿತು.

ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ರಾಜೇಶ್ ಗಾಣಿಗ ಅಚ್ಲಾಡಿ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಪ್ರಗತಿ ಪರ ಕೃಷಿಕ ರವೀಂದ್ರ ಐತಾಳ್, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ತಾರಾನಾಥ ಹೊಳ್ಳ, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ್ ಆಚಾರ್ಯ, ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಮ್ ಶೆಟ್ಟಿ, ಸದಸ್ಯರಾದ ಶ್ರೀಮತಿ ಪೂಜಾ ಹಂದಟ್ಟು, ವಿದ್ಯಾ ಸಾಲಿಯಾನ್, ಪ್ರತಿಷ್ಠಾನದ ಸದಸ್ಯ ಸತೀಶ್ ವಡ್ಡರ್ಸೆ ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಶರಧಿ ಎಸ್ ನಿರೂಪಿಸಿ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಸ್ತಾಪಿಸಿದರು.

ಸಭಾ ಕಾರ್ಯಕ್ರಮದ ನಂತರ ಡಾ|| ಶಿವರಾಮ ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರ ಕೋಟ ವಿದ್ಯಾರ್ಥಿಗಳಿಂದ ಯಕ್ಷ ನೃತ್ಯ, ಭರತನಾಟ್ಯ, ಸಂಗೀತ ಕಾರ್ಯಕ್ರಮ ನಡೆಯಿತು.

Leave a Reply