ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ ಡಿ.26: ಮಂಗಳೂರು ವಿವಿ ವತಿಯಿಂದ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ಆಶ್ರಯದಲ್ಲಿ ಆಯೋಜಿಸಿದ್ದ ಅಂತರಕಾಲೇಜು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಪ್ರಥಮ ಬಿಬಿಎ ವಿದ್ಯಾರ್ಥಿ, ಆಳ್ವಾಸ್ ಸ್ಪೋರ್ಟ್ಸ್ ಕರಾಟೆ ತರಬೇತಿ ಕೇಂದ್ರದ ವೃಂದಾ – 55, ಕೆಜಿ ವಿಭಾಗದ ಕುಮಿಟೆ ಕರಾಟೆ ಸ್ಪರ್ಧೆಯಲ್ಲಿ ಕಂಚಿನ ಪದಕದೊಂದಿಗೆ ತೃತೀಯ ಬಹುಮಾನ ಮತ್ತು ಟೀಮ್ ಕುಮಿಟೆಯಲ್ಲಿ ಬೆಳ್ಳಿ ಪದಕದೊಂದಿಗೆ ದ್ವಿತೀಯ ಬಹುಮಾನ ವಿಜೇತರಾಗಿದ್ದಾರೆ.
ವೃಂದಾ ಇವರು ಶಿವರಾಮ ಪ್ರಭು ಮತ್ತು ರೇಷ್ಮಾ ಎಸ್. ಪ್ರಭು ದಂಪತಿಯ ಸುಪುತ್ರಿ, ಪ್ರಸ್ತುತ ಆಳ್ವಾಸ್ ಸ್ಪೋರ್ಟ್ಸ್ ಕರಾಟೆ ತರಬೇತಿ ಕೇಂದ್ರದ ರಾಷ್ಟ್ರೀಯ ಕರಾಟೆಪಟು, ತರಬೇತುದಾರರಾದ ಆತ್ರಾಡಿ ಪ್ರಮೋದ್ ಶೆಟ್ಟಿ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ವಿಶ್ವವಿದ್ಯಾಲಯ ಮಟ್ಟದ ಕರಾಟೆ ಕ್ರೀಡೆಯ ಇವರ ಚೊಚ್ಚಲ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ, ಟ್ರಸ್ಠಿ ವಿವೇಕ್ ಆಳ್ವ, ಪ್ರಾಂಶುಪಾಲರಾದ ಡಾ. ಕುರಿಯನ್ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ತಿಲಕ್ ಶೆಟ್ಟಿ ಇವರು ಶುಭಹಾರೈಸಿದ್ದಾರೆ.