ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಮಾನವನಲ್ಲಿ ಸಹಾಯ ಪ್ರವೃತ್ತಿ ಮುಖ್ಯ. ಸೌಟ್ಸ್ -ಗೈಡ್ಸ್ ಸಂಸ್ಥೆ ಮಗುವಿಗೆ ಸಹಾಯ ಮನೋಭಾವ ಬೆಳೆಸುವಲ್ಲಿ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಜಾಂಬೂರಿ ಸಾರ್ಥಕತೆ ಪಡೆದಿದೆ ಎಂದು ಭಾರತ್ ಸ್ಕೌಟ್ಸ್-ಗೈಡ್ಸ್ ಸಂಸ್ಥೆಯ ಕರ್ನಾಟಕ ರಾಜ್ಯ ಆಯುಕ್ತ ಪಿ.ಜಿ ಆರ್ ಸಿಂಧ್ಯಾ ಹೇಳಿದರು
ಪುತ್ತಿಗೆಯ ಶ್ರೀ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಸೌಟ್ಸ್ ಮತ್ತು ಗೈಡ್ಸ್ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಸಮಾರೋಪ ಭಾಷಣದಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಸೌಟ್ಸ್ ಗೈಡ್ಸ್ ಸಂಸ್ಥೆ ಆರಂಭವಾಗಿ ೧೫೦ ವ? ಕಳೆದವು ಆದರೆ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಭಾರತದಲ್ಲಿ ನಡೆದಿದೆ. ಸಹಸ್ರಾರು ಮಂದಿ ಶಿಬಿರಾರ್ಥಿಗಳಿಗೆ ಹಲವು ಮೇಳಗಳ ಮೂಲಕ ಸಂಸ್ಕೃತಿಯ ಅನಾವರಣ ಸಾಧ್ಯವಾಗಿದೆ. ವಿಶ್ವ ಭ್ರಾತೃತ್ವ ಸಾರಲು ಇದಕ್ಕಿಂತ ದೊಡ್ಡ ವೇದಿಕೆ ದೊರೆಯಲು ಸಾಧ್ಯವಿಲ್ಲ. ಇಂತಹ ಯಶಸ್ಸು ಸ್ಕೌಟ್ಸ್ – ಗೈಡ್ಸ್ ಇತಿಹಾಸದಲ್ಲಿ ಹೊಸ ಮೈಲುಗಳು ಸೃಷ್ಟಿಸಿದೆ. ಇಂತಹ ಯಶಸ್ಸಿಗೆ ಬಹು ದೊಡ್ಡ ಮಟ್ಟದಲ್ಲಿ ಸಹಾಯ ನೀಡಿದವರು ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರಿಗೆ ಸ್ಕೌಟ್ಸ್- ಗೈಡ್ಸ್ ಸಂಸ್ಥೆ ಸದಾ ಚಿರರುಣಿ. ಇದು ವಿದಾಯವಲ್ಲ ಬದಲಿಗೆ ಹೊಸ ಆರಂಭಕ್ಕೆ ಮುನ್ಸೂಚನೆ ಎಂದರು.
ಕಾರ್ಯಕ್ರಮದಲ್ಲಿ ಸೌಟ್ಸ್ ಮತ್ತು ಗೈಡ್ಸ್ ಅತ್ಯುನ್ನತ ಪ್ರಶಸ್ತಿಯಾದ ಸಿಲ್ವರ್ ಎಲಿಫೆಂಟ್ ಪ್ರಶಸ್ತಿಯನ್ನು ಭಾರತ್ ಸೌಟ್ಸ್ ಗೈಡ್ಸ್ ಸಂಸ್ಥೆಯ ಕರ್ನಾಟಕ ರಾಜ್ಯ ಆಯುಕ್ತ ಪಿ.ಜಿ ಆರ್ ಸಿಂಧ್ಯಾ ಆಳ್ವಾಸ್ ಶಿಕ್ಷಣ ಪ್ರತಿ?ನದ ಅಧ್ಯಕ್ಷ ಹಾಗೂ ಜಿಲ್ಲಾ ಮುಖ್ಯ ಆಯುಕ್ತ ಡಾ. ಎಂ ಮೋಹನ್ ಆಳ್ವರಿಗೆ ನೀಡಿ ಗೌರವಿಸಿದರು.