ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವ: ಪೂರ್ವಭಾವಿ ಸಭೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ದೇವರ ಚೈತನ್ಯಶಕ್ತಿ ವೃದ್ಧಿಗೆ ಪ್ರತಿ 12 ವರ್ಷಕ್ಕೊಮ್ಮೆ ಬ್ರಹ್ಮಕಲಶೋತ್ಸವ ನಡೆಸುವ ಕ್ರಮವಿದ್ದು, ದೊಡ್ಡ ಭಕ್ತಗಣವನ್ನೇ ಹೊಂದಿರುವ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿಯೂ ಈ ಕಾರ್ಯ ಶೀಘ್ರ ನಡೆಯುವಂತಾಗಲಿ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.

Call us

Click Here

ಅವರು ಬುಧವಾರ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿ 11 ದಿನಗಳ ಕಾರ್ಯಕ್ರಮಕ್ಕೆ 1 ಕೋಟಿ ರೂ. ಖರ್ಚಾಗಬಹು. ಉತ್ತಮವಾದ ಸಮಿತಿ ನೇಮಿಸಿಕೊಂಡು ಭಕ್ತರ ದೇಣಿಗೆ ಎಲ್ಲಿಯೂ ವ್ಯರ್ಥವಾಗದಂತೆ ಕಾರ್ಯಕ್ರಮ ಆಯೋಜಿಸುವುದು ದೇವಸ್ಥಾನ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಹೊಣೆಯಾಗಿದೆ ಎಂದರು.

ತಂತ್ರಿಗಳಾದ ಕೆ. ಮಂಜುನಾಥ ಅಡಿಗ ಮಾತನಾಡಿ, 25 ವರ್ಷದಿಂದ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿಲ್ಲ. ಗ್ರಾಮಸ್ಥರು, ಭಕ್ತರ ಸಹಕಾರ ಪಡೆದು ಅಷ್ಟಬಂಧ ಕಾರ್ಯಕ್ರಮ ಮಾಡಬೇಕಾಗಿದೆ. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದರು.

ಪ್ರಧಾನ ಅರ್ಚಕ ಪ್ರಕಾಶ್ ಉಡುಪ, ಬೈಂದೂರು ತಹಶಿಲ್ದಾರ್ ಶ್ರೀಕಾಂತ್ ಹೆಗ್ಡೆ, ಸಿಇಓ ಬಿಮಪ್ಪ ಬಿಲ್ಲಾರ, ಬೈಂದೂರು ಪೊಲೀಸ್ ಎಸ್ಐ ನಿರಂಜನ್ ಗೌಡ, ಉಪ್ಪುಂದ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಖಾರ್ವಿ, ದಿವಾಕರ ಶೆಟ್ಟಿ, ಸದಸ್ಯೆ ಪ್ರೇಮಾ ದೇವಾಡಿಗ, ಜಿ.ಪಂ ಮಾಜಿ ಸದಸ್ಯರುಗಳಾದ ಗೌರಿ ದೇವಾಡಿಗ, ಸುರೇಶ್ ಬಟವಾಡಿ, ಮುಖಂಡ ದೀಪಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿ ಪ್ರಮುಖರಾಗಿ ಬಿ.ಎಸ್. ಸುರೇಶ್ ಶೆಟ್ಟಿ ಅವರು ನೇಮಖಗೊಂಡರು. ಸಂದೇಶ್ ಭಟ್ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.

Click here

Click here

Click here

Click Here

Call us

Call us

Leave a Reply