ಸಮಾಜದಲ್ಲಿ ತಿದ್ದಲಾಗದ ವ್ಯಕ್ತಿಗಳಿಗೆ ಕಾನೂನು ಬುದ್ಧಿ ಕಲಿಸುತ್ತೆ: ಎಸ್ಪಿ. ಅಣ್ಣಾಮಲೈ

Call us

Call us

Call us

ಕುಂದಾಪುರ: ಸಮಾಜ ತಿದ್ದಲಿಕ್ಕೆ ಆಗದ ಮನಸ್ಥಿತಿಯನ್ನು ಹೊಂದಿರುವ ವ್ಯಕ್ತಿಗಳಿಗೆ ಕಾನೂನು ಬುದ್ದಿ ಹೇಳುವ ಕೆಲಸ ಮಾಡುತ್ತದೆ. ಸಮಾಜದ ಶಾಂತಿ ಕದಡುವ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ವ್ಯಕ್ತಿಗಳ ಸಂಖ್ಯೆ ಇರುವುದು ಬೆರಳೆಣಿಕೆ ಮಾತ್ರ. ಅಂತಹ ವ್ಯಕ್ತಿಗಳನ್ನು ಹುಡುಕಿ ಅವರನ್ನು ಕಾನೂನು ಕೈಗೆ ಒಪ್ಪಿಸುವ ಕೆಲಸವನ್ನು ಪೊಲೀಸ್ ಇಲಾಖೆ ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಹೇಳಿದರು.

Call us

Click Here

ತಾಲ್ಲೂಕಿನ ಬೆಳ್ವೆ ಗೋಳಿಯಂಗಡಿಯಲ್ಲಿ  ನಡೆದ ಸಾರ್ವಜನಿಕ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಅಮಾನುಷವಾಗಿ ಹತ್ಯೆಯಾಗಿದ್ದ ಯುವತಿಯ ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ಅವರು ಕೊಲೆಯಾದ ಅಮಾಯಕ ಹುಡುಗಿ ನಮ್ಮ ಮನೆ ಮಗಳು ಎನ್ನುವ ಭಾವನೆ ನಮ್ಮಲ್ಲಿದೆ. ಸಾರ್ವಜನಿಕರ ಸಹಕಾರದಿಂದ ಆಕೆಯನ್ನು ಅಮಾನುಷವಾಗಿ ಹತ್ಯೆ ಮಾಡಿದ ಆರೋಪಿಯನ್ನು ಕಾನೂನು ತೆಕ್ಕೆಗೆ ಒಪ್ಪಿಸುವ ಕೆಲಸವನ್ನು ಇಲಾಖೆ ಮಾಡಿದೆ. ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಆರೋಪಿಗೆ ಕಾನೂನು ವ್ಯಾಪ್ತಿಯ ಒಳಗೆ ಗರಿಷ್ಠ ಶಿಕ್ಷೆಯಾಗುವಂತೆ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್ಸುಗಳನ್ನು ಓಡಿಸಬೇಕು ಎನ್ನುವ ಸಾರ್ವಜನಿಕರ ಆಗ್ರಹವನ್ನು ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರಲಾಗುವುದು. ಆರೋಪಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎನ್ನುವ ಕುರಿತು, ಕಾನೂನು ಅಭಿಪ್ರಾಯವನ್ನು ಪಡೆದುಕೊಂಡು ಮುಂದಿನ ಕ್ರಮವನ್ನು ಅನುಸರಿಸಲಾಗುವುದ. ಬೈಂದೂರಿನ ಅಕ್ಷತಾ ಕೊಲೆ ಪ್ರಕರಣ ಹಾಗೂ ಈ ಪ್ರಕರಣವನ್ನು ಇಲಾಖೆ ಅತ್ಯಂತ ಸೂಕ್ಷ್ಮ ರೀತಿಯಿಂದ ಅವಲೋಕನ ನಡೆಸುತ್ತಾ ಇರುವುದರಿಂದ, ಆರೋಪಿ ಕೂಡಲೇ ಬಿಡುಗಡೆಯಾಗುತ್ತಾನೆ ಎನ್ನುವ ವದಂತಿಗಳ ಕುರಿತು ಆತಂಕ ಪಡುವ ಅಗತ್ಯವಿಲ್ಲ ಎಂದು ನುಡಿದರು.  (ಕುಂದಾಪ್ರ ಡಾಟ್ ಕಾಂ)

ಸಾರ್ವಜನಿಕರಿಂದ ಬಂದ ಪ್ರಶ್ನೆ ಹಾಗೂ ಅನುಮಾನಗಳಿಗೆ ಸಮಂಜಸವಾಗಿ ಉತ್ತರ ನೀಡಿದ ಎಸ್.ಪಿ ಯವರು ಕಾನೂನು ಪಾಲನೆಯ ದಿಸೆಯಲ್ಲಿ ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರವೂ ಅತ್ಯಂತ ಮಹತ್ವದ್ದಾಗಿದೆ. ಸುಚಿತ್ರಾ ಕೊಲೆ ಪ್ರಕರಣದಲ್ಲಿ ಸ್ಥಳೀಯರೇ ಆರೋಪಿಯನ್ನು ಹಿಡಿದು ಕೊಡುವ ಮೂಲಕ ಕಾನೂನಿಗೆ ಗೌರವ ಕೊಡುವ ಕೆಲಸವನ್ನು ಮಾಡಿದ್ದಾರೆ. ಕಾನೂನಿನ ಮೇಲೆ ವಿಶ್ವಾಸವಿರುವ ನಾಗರೀಕ ಸಮಾಜ ಮಾಡುವ ಜವಾಬ್ದಾರಿತ ಕೆಲಸಗಳು ಇಲ್ಲಿ ನಡೆದಿದೆ. ಕಾನೂನು ಪಾಲನೆ ಹಾಗೂ ಅನುಷ್ಠಾನ ಎಲ್ಲವೂ ನಂಬಿಕೆಯ ಮೇಲೆ ನಡೆಯುತ್ತದೆ. ಪೊಲೀಸ್ ಇಲಾಖೆಯ ಮೇಲೂ ನಂಬಿಕೆಯ ಇಡಿ ಎಂದು ಮನವಿ ಮಾಡಿದ ಅವರು ನಿಮ್ಮ ನಂಬಿಕೆಗೆ ನಾವು ಬಿರಿಯಾನಿ ಕೊಡೋದಿಲ್ಲ, ಬದಲಿಗೆ ಇನ್ನೂ 15 ದಿನಗಳ ಒಳಗೆ ಈ ಭಾಗದಲ್ಲಿ ಪೊಲೀಸ್ ಇಲಾಖೆಯ ಹೊಣೆಯನ್ನು ಪರಿಣಾಮವಾಗಿ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಮಾತನಾಡಿದ ನ್ಯಾಯವಾದಿ ರವಿರಾಜ್ ಶೆಟ್ಟಿಯವರು ಸೂಕ್ಷ್ಮ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ದ ಕಠಿಣ ಕಾನೂನು ಉಪಕ್ರಮಗಳನ್ನು ತೆಗೆದುಕೊಳ್ಳಬೇಕು. ಸುಚಿತ್ರಾ ಕೊಲೆ ಪ್ರಕರಣ ಆರೋಪಿ ಈ ಹಿಂದೆ ಬೇರೆ ಗಂಭೀರ ಪ್ರಕರಣದಲ್ಲಿ ಭಾಗಿಯಾದಾಗ ಆತನ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳದ ಕಾರಣದಿಂದ ಆತನ ವರ್ತನೆ ಪುನಾರಾವರ್ತನೆಯಾಗಿ ಅಮಾಯಕ ಯುವತಿಯೊಬ್ಬಳ ಬಲಿಯಾಗಿದೆ. ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಬೇಕು. ಬೆಳ್ವೆ-ಗೋಳಿಯಂಗಡಿ ಭಾಗದಲ್ಲಿ ಪೊಲೀಸ್ ಹೊರ ಠಾಣೆಯನ್ನು ಸ್ಥಾಪಿಸಬೇಕು. ಆಧುನೀಕರ ತಂತ್ರಜ್ಞಾನಗಳ ಉಪಯೋಗ ಹಾಗೂ ಅಪಾಯದ ಕುರಿತು ನಮ್ಮ ಮನೆ ಮಕ್ಕಳಿಗೆ ಹಿರಿಯರು ಬುದ್ದಿ ಮಾತು ಹೇಳಬೇಕು ಎಂದು ಹೇಳಿದ ಅವರು ಸುರಕ್ಷತೆ ಕಾನೂನು ಆಗದೆ ನಮ್ಮ ಹೃದಯದಲ್ಲಿ ಇರಬೇಕು ಎಂದು ನುಡಿದರು. (ಕುಂದಾಪ್ರ ಡಾಟ್ ಕಾಂ)

Click here

Click here

Click here

Click Here

Call us

Call us

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕುಂದಾಪುರ ಉಪವಿಭಾಗದ ಡಿವೈಎಸ್‌ಪಿ ಯವರು ಕೊಲೆ ಪ್ರಕರಣ ನಡೆದ ದಿನ ಇದ್ದ ಸಾಕಷ್ಟು ಗೊಂದಲದ ನಡುವೆ ಆರೋಪಿಯನ್ನು ಪತ್ತೆ ಮಾಡಿ ಪೊಲೀಸ್‌ರಿಗೆ ಒಪ್ಪಿಸುವ ಮೂಲಕ ಸ್ಥಳೀಯ ಯುವಕರು ಜವಾಬ್ದಾರಿಯುತ ಕೆಲಸವನ್ನು ಮಾಡಿದ್ದಾರೆ. ಅವರನ್ನು ಸಾರ್ವಜನಿಕರು ಅಭಿನಂದಿಸಬೇಕು. ಪ್ರತಿ ಮನೆ ಉದ್ದಾರವಾದರೆ ಹಳ್ಳಿ ಉದ್ದಾರವಾಗುತ್ತದೆ. ಒಳ್ಳೆಯ ವಿಚಾರಗಳ ಕುರಿತು ಗ್ರಾಮಸ್ಥರಲ್ಲಿ ಒಗ್ಗಟ್ಟು ಇರುವುದು ಒಳ್ಳೆಯ ಬೆಳವಣಿಗೆ. ಈ ಪರಿಸರದಲ್ಲಿ ನಡೆಯುವ ಯಾವುದೆ ಆಕ್ರಮ ಚಟುವಟಿಕೆಗಳ ಕುರಿತು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ನುಡಿದರು.  (ಕುಂದಾಪ್ರ ಡಾಟ್ ಕಾಂ)

ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಂ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೆಳ್ವೆ ವಸಂತಕುಮಾರ ಶೆಟ್ಟಿ, ಕುಡುಬಿ ಸಮಾಜೋದ್ದಾರಕ ಸಂಘದ ಅಧ್ಯಕ್ಷ ಸುಬ್ಬಣ್ಣ ನಾಯ್ಕ್ ಹೆಂಗವಳ್ಳಿ, ಹಿಂದೂ ಸಂಘಟನೆ ಮುಖಂಡ ಬೆಳ್ವೆ ವಿಜಯ್‌ಕುಮಾರ ಶೆಟ್ಟಿ, ತಾ.ಪಂ ಸದಸ್ಯೆ ದೀಪಿಕಾ ಶೆಟ್ಟಿ, ಬೆಳ್ವೆ ಗ್ರಾ.ಪಂ ಅಧ್ಯಕ್ಷೆ ಶೋಭಾ ಶೆಟ್ಟಿ, ಗ್ರಾ.ಪಂ ಉಪಾಧ್ಯಕ್ಷ ಯಳಂತೂರು ಸುರೇಂದ್ರ ನಾಯಕ್, ಆವರ್ಸೆ ಗ್ರಾ.ಪಂ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಪ್ರಮೋದ್ ಹೆಗ್ಡೆ ಹಿಲಿಯಾಣ, ಬೆಳ್ವೆ ವ್ಯ.ಸೇ.ಸ ಬ್ಯಾಂಕಿನ ಜಯರಾಮ್ ಶೆಟ್ಟಿ, ವರ್ತಕರ ಸಂಘದ ಅಧ್ಯಕ್ಷ ಗೋಪಾಲ ಭಟ್, ಉದ್ಯಮಿ ಕೃಷ್ಣಪ್ಪ ಶೆಟ್ಟಿ, ಸ್ಥಳೀಯ ಪ್ರಮುಖರಾದ ಹೆಂಗವಳ್ಳಿ ರಘುರಾಮ ಶೆಟ್ಟಿ, ಸಿದ್ದಾರ್ಥ ಶೆಟ್ಟಿ, ಹರೀಶ್ ಶೆಟ್ಟಿ ಹಾಗೂ ಯೋಗೀಶ್ ಮಡಿವಾಳ ಇದ್ದರು. ನಾರಾಯಣ ನಾಯ್ಕ್ ಸ್ವಾಗತಿಸಿದರು, ಗಣೇಶ್ ಅರಸಮ್ಮಕಾನು ನಿರೂಪಿಸಿದರು.

News SP3News SP4News SP1

Leave a Reply