ಜಾಗೃತ ಹಿಂದು ಸಮಾಜ ನಾಶ ಮಾಡಲು ಸಾಧ್ಯವಿಲ್ಲ: ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ವಿವಿಧ ಕಾರಣಗಳಿಗಾಗಿ ಜನರು ಹಿಂದೂ ಧರ್ಮವನ್ನು ತೊರೆದು ಬೇರೆ ಮತದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಮಾತೃ ಧರ್ಮವನ್ನು ತೊರೆಯುತ್ತಿರುವುದಕ್ಕೆ ನಾನಾ ಕಾರಣಗಳಿರಬಹುದು. ವಿಶೇಷವಾಗಿ ಮಕ್ಕಳು ಈ ಮತಾಂತರಕ್ಕೆ ಒಳಗಾಗುತ್ತಿದ್ದು, ಇದನ್ನು ತಡೆಯುವ ಪ್ರಯತ್ನವನ್ನು ಎಲ್ಲರೂ ಮಾಡಬೇಕು ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು.

Call us

Click Here

ತೆಂಕಬೆಟ್ಟು ನವೀಕೃತ ಶ್ರೀ ಕಾಲಭೈರವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಹಿಂದುತ್ವ ರಾಷ್ಟ್ರೀಯತೆಯ ಮೂಲಮಂತ್ರ. ಸಂಸ್ಕೃತಿ, ಸಂಸ್ಕಾರ ಮತ್ತು ಸಂಸ್ಕೃತದಿಂದ ನಮ್ಮ ದೇಶ ಜಗತ್ತಿನ ವಿಶ್ವಗುರುವಾಗಿದೆ. ಹಿಂದು ಸಮಾಜವನ್ನು ಸಂಕುಚಿತಗೊಳಿಸುವ, ವಿಕೃತಗೊಳಿಸುವ ಕೆಲಸಗಳು ನಿತ್ಯ ನಿರಂತರವಾಗಿ ನಡೆಯುತ್ತಿದೆ. ಹಿಂದುಗಳು ಪ್ರತಿಯೊಂದು ಕ್ಷಣದಲ್ಲೂ ಒಗ್ಗಟ್ಟು ಪ್ರದರ್ಶಿಸಬೇಕು. ಎಲ್ಲಿಯವರೆಗೆ ಹಿಂದುಗಳು ಜೀವಂತವಾಗಿರುತ್ತಾರೋ ಅಲ್ಲಿಯವರೆಗೆ ಜಾಗೃತವಾಗಿರುವ ಹಿಂದು ಸಮಾಜವನ್ನು ನಾಶ ಮಾಡಲು ಯಾವ ಶಕ್ತಿಗಳಿಂದಲೂ ಸಾಧ್ಯವಿಲ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾದ ಬಳಿಕ ನಮ್ಮ ರಾಷ್ಟ್ರ ಹಿಂದು ರಾಷ್ಟ್ರವಾಗಲಿದೆ ಎಂದು ಭವಿಷ್ಯ ನುಡಿದರು.

ನಂತರ ಮಾತನಾಡಿದ ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಹುಟ್ಟಿವಾಗ ಬಡವ, ಶ್ರೀಮಂತರಾಗಿರುವುದು ನಮ್ಮ ನಿಯಂತ್ರಣದಲ್ಲಿಲ್ಲ. ಆದರೆ ಸಾಯುವಾಗಲೂ ಬಡತನದಲ್ಲಿದ್ದರೆ ಅದು ನಮ್ಮ ವೈಫಲ್ಯವೇ ಸರಿ. ಅಭಿವೃದ್ಧಿ ಹೊಂದಲು ಸಾಧನೆ ಬೇಕು. ಅದಕ್ಕೆ ತಕ್ಕ ಪ್ರಯತ್ನ ನಡೆಸಬೇಕು ಎಂದು ಹೇಳಿದರು.

ಹಲವರಿ ಮಠದ ಶ್ರೀ ಫೀರ್ ಯೋಗಿ ಜಗದೀಶನಾಥ್‌ಜಿ, ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಆನಂದ ಸಿ. ಕುಂದರ್, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅ|ಧ್ಯಕ್ಷ ಕೆರಾಡಿ ಚಂದ್ರಶೇಖರ್ ಶೆಟ್ಟಿ ಉದ್ಯಮಿಗಳಾದ ನಿತಿನ್ ನಾರಾಯಣ್ ಜಗದೀಶ್ ಶೆಟ್ಟಿ ಕುದ್ರಕೋಡು ಇನ್ನಿತರರು ಇದ್ದರು.

Leave a Reply