ಫೆ.4ರಿಂದ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ನಾಲ್ಕು ದಿನಗಳ ರಾಜ್ಯಮಟ್ಟದ ನಾಟಕೋತ್ಸವ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಕಲೆ ಹಾಗೂ ಸಾಂಸ್ಕೃತಿಕ ರಂಗದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಬೈಂದೂರಿನ ಸುರಭಿ ಸಂಸ್ಥೆ ಪ್ರತಿವರ್ಷದಂತೆ ನಾಲ್ಕು ದಿನಗಳ ರಂಗ ಹಬ್ಬವನ್ನು ಆಯೋಜಿಸಿದೆ. ಫೆಬ್ರವರಿ 04ರಿಂದ 07ರ ವರೆಗೆ ಪ್ರತಿದಿನ ಸಂಜೆ ಗಂಟೆ 6-30ಕ್ಕೆ ಬೈಂದೂರು ಶಾರದಾ ವೇದಿಕೆಯಲ್ಲಿ ನಾಟಕೋತ್ಸವ ನಡೆಯಲಿದೆ.

Call us

Click Here

ಫೆ.04ರಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಉತ್ಸವಕ್ಕೆ ಚಾಲನೆ ನೀಡಲಿದ್ದು, ಸಾಹಿತ್ಯ ಸಮುದಾಯ ಶಿವಮೊಗ್ಗದ ಕಾರ್ಯದರ್ಶಿ ಕೆ. ಪ್ರಭಾಕರನ್ ಜ್ಯೋತಿ ಪ್ರಜ್ವಲನಗೈಯಲಿದ್ದಾರೆ. ಕಾರ್ಯಕ್ರಮದ ನಾಲ್ಕು ದಿನಗಳ ಕಾಲ ರಂಗಭೂಮಿ ಚಿತ್ರನಟಿ ಚಂದ್ರಕಲಾ ರಾವ್, ಹಿರಿಯ ರಂಗನಟ ಗಣೇಶ್ ಕಾರಂತ್, ರಂಗನಟ ಹಾಗೂ ಚಲನಚಿತ್ರ ನಟ ರಘು ಪಾಂಡೇಶ್ವರ, ರಂಗನಟ ಯತೀಶ್ ಕೊಳ್ಳೆಗಾಲ ಅವರನ್ನು ಸನ್ಮಾನಿಸಲಾಗುತ್ತದೆ.

ಫೆಬ್ರವರಿ 04ರ ಶನಿವಾರ ನಟ ಮಿತ್ರರು ತೀರ್ಥಹಳ್ಳಿ (ರಿ.) ಪ್ರಸ್ತುತಿಯ ನಾಟಕ ತುರುಬ ಕಟ್ಟುವ ಹದನ’ (ರಚನೆ : ಪಂಪ – ರನ್ನ – ಕುಮಾರವ್ಯಾಸ – ಪುರಂದರದಾಸರು, ಪರಿಕಲ್ಪನೆ/ನಿರ್ದೇಶನ: ಶ್ರೀಕಾಂತ್ ಕುಮಟಾ), ಫೆಬ್ರವರಿ 05ರ ರವಿವಾರ ಸುರಭಿ ರಿ. ಬೈಂದೂರು ಪ್ರಸ್ತುತಿಯ, ಡಾ. ಶಿವರಾಮ ಕಾರಂತರ ಕಾದಂಬರಿ ಆಧಾರಿತ ನಾಟಕ ’ಚೋಮನ ದುಡಿ’ (ರಂಗರೂಪ/ನಿರ್ದೇಶನ/ಸಂಗೀತ: ಗಣೇಶ್ ಮಂದರ್ತಿ), ಫೆಬ್ರವರಿ 06ರ ಸೋಮವಾರ ಸುರಭಿ ರಿ. ಬೈಂದೂರು, ಮಕ್ಕಳ ರಂಗತಂಡ ಪ್ರಸ್ತುತಿಯ ಕುಂದಾಪ್ರ ಕನ್ನಡ ನಾಟಕ ’ಮಕ್ಕಳ ರಾಮಾಯಣ’ (ಮೂಲ ಕರ್ತೃ: ಡಿ.ಆರ್. ವೆಂಕಟರಮಣ ಐತಾಳ್, ಕುಂದಾಪ್ರ ಕನ್ನಡಕ್ಕೆ/ರಂಗರೂಪ/ನಿರ್ದೇಶನ: ಗಣೇಶ್ ಮಂದರ್ತಿ), ಫೆಬ್ರವರಿ 07ರ ಮಂಗಳವಾರ ವರ್ಕ ಶಾಪ್ ಇನ್ ಮೈಸೂರು ಫಾರ್ ಥಿಯೇಟರ್ ಅಭಿನಯದ ನಾಟಕ ’ಕಾಮ್ರೆಡ್ ಕುಂಭಕರಣ’ (ಇಂಗ್ಲೀಷ್ ಮೂಲ: ರಾಮು ರಾಮನಾಥನ್, ಅನುವಾದ & ನಿರ್ದೇಶನ: ಯತೀಶ್ ಎನ್. ಕೊಳ್ಳೆಗಾಲ)

Leave a Reply