ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕುಂದಾಪುರ ತಾಲೂಕು ಘಟಕದ 2023 – 24ನೇ ಅವಧಿಯ ಅಧ್ಯಕ್ಷರಾಗಿ ಎಸ್. ದಸ್ತಗೀರ್ ಕಂಡ್ಲೂರು ಸರ್ವಾನುಮತದಿಂದ ಆಯ್ಕೆಯಾದರು.
2023-24ನೇ ಸಾಲಿನ ಮೊದಲ ಸಭೆ ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಇಬ್ರಾಹಿಮ್ ಸಾಹೇಬ್ ಕೋಟರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ತಾಲೂಕು ಉಪಾಧ್ಯಕ್ಷರಾಗಿ ಎಸ್. ಎಸ್. ಹನೀಫ್ ಗುಲ್ವಾಡಿ, ಕಾರ್ಯದರ್ಶಿಯಾಗಿ ರಿಯಾಝ್ ಕೋಡಿ, ಜೊತೆ ಕಾರ್ಯದರ್ಶಿಯಾಗಿ ಜಿ. ಎಮ್. ಅಬೂಬಕರ್ ಮಾವಿನಕಟ್ಟೆ, ಕೋಶಾಧಿಕಾರಿಯಾಗಿ ಮುಜಾವರ್ ಅಬು ಮುಹಮ್ಮದ್ ಕುಂದಾಪುರ ಆಯ್ಕೆಯಾದರು.
ತಾಲೂಕು ಸಮಿತಿಯ ಸದಸ್ಯರಾಗಿ ಮುಹಮ್ಮದ್ ರಫೀಕ್ ವಂಡ್ಸೆ, ಎಸ್. ಮುನೀರ್ ಕಂಡ್ಲೂರು, ಪಳ್ಳಿ ಉಸ್ಮಾನ್ ಗುಲ್ವಾಡಿ, ಮುನಾಫ್ ಕೋಡಿ, ನಸೀರ್ ನಯ್ನಾರ್ ಕೋಡಿ, ಅಬ್ದುಲ್ ಖಾದರ್ ಮೂಡಗೋಪಾಡಿ ಇವರುಗಳು ತಾಲೂಕು ಸಮಿತಿ ಸದಸ್ಯರಾಗಿ ಆಯ್ಕೆಯಾದರು. ಝಹೀರ್ ನಾಖುದಾ ಗಂಗೊಳ್ಳಿ, ಫಾರೋಕ್ ಹಳವಳ್ಳಿ, ಮುಹಮ್ಮದ್ ರಫೀಕ್ ಬೆಳ್ವೆ, ಆಸಿಫ್ ಕೋಟೇಶ್ವರ, ಕಲಂದರ್ ಹಂಗಳೂರು ಅವರನ್ನು ನಾಮ ನಿರ್ದೇಶನ ಮಾಡಲಾಯಿತು.
ಮುಹಮ್ಮದ್ ರಫೀಕ್ ಬಿ. ಎಸ್. ಎಫ್. ಜಿಲ್ಲಾ ಉಪಾಧ್ಯಕ್ಷರಾಗಿ, ಶಾಬಾನ್ ಹಂಗಳೂರು, ಮೌಲಾನಾ ಝಮೀರ್ ಅಹ್ಮದ್ ರಶಾದಿ, ಜಿ. ರೆಹಾನ್ ತ್ರಾಸಿರವರು ಜಿಲ್ಲಾ ಸಮಿತಿ ಸದಸ್ಯರಾಗಿ ಆರಿಸಲ್ಪಟ್ಟಿರುವರು.
ಮೌಲಾನಾ ಝಮೀರ್ ಅಹ್ಮದ್ ರಶಾದಿಯವರ ಕುರ್ ಆನ್ ಪಠಣದೊಂದಿಗೆ ಸಭೆ ಆರಂಭವಾಯಿತು. ಮುಹಮ್ಮದ್ ರಫೀಕ್ ಬಿ. ಎಸ್. ಎಫ್. ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇದ್ರಿಸ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್. ಕೆ. ಇಕ್ಬಾಲ್ ಕಟಪಾಡಿ ಚುನಾವಣಾ ಪ್ರಕ್ರಿಯೆ ನಡೆಸಿ ಕೊಟ್ಟರು. ಜಿಲ್ಲಾ ಉಪಾಧ್ಯಕ್ಷರಾದ ಮುಹಮ್ಮದ್ ಮೌಲಾ ಉಡುಪಿ ನೂತನ ಪದಾಧಿಕಾರಿಗಳನ್ನು ಅಭಿನಂದಿಸುತ್ತಾ ಧನ್ಯವಾದವಿತ್ತರು. ಹಾಲಿ ಅಧ್ಯಕ್ಷರಾದ ಮುಹಮ್ಮದ್ ರಫೀಕ್ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.