ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಇದರ “ಆ್ಯನ್ಸ್ ಡೇ ” ಕಾರ್ಯಕ್ರಮವು ಗಿಳಿಯಾರು ಕುಶಲ್ ಹೆಗ್ಡೆ ರೋಟರಿ ಭವನದಲ್ಲಿ ಆನ್ಸ್ ಮತ್ತು ಅನೆಟ್ಸ್ ಸಾಂಸ್ಕೃತಿಕ ಸಂಜೆ ಕಲರವ ಸಂಭ್ರಮದಿಂದ ನಡೆಯಿತು.
ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿದ್ದ ಕುಂದಾಪುರದ ಖ್ಯಾತ ನ್ಯಾಯವಾದಿ, ರೋಟರಿ ಕುಂದಾಪುರದ ಹಿರಿಯ ಸದಸ್ಯ ಟಿ.ಬಿ.ಶೆಟ್ಟಿ ಅತ್ಯಂತ ಪ್ರತಿಭಾವಂತರಿಂದ ಕೂಡಿದ ಆ್ಯನ್ಸ್ ಕ್ಲಬ್, ರೋಟರಿ ಸದಸ್ಯರನ್ನು ಒಳಗೊಂಡು ಪ್ರಸಕ್ತ ನಗುಮೊಗದ ಅಧ್ಯಕ್ಷ ವೆಂಕಟೇಶ ನಾವುಂದ ಕ್ಲಬ್ ನಡೆಸಿದ ರೀತಿ ಶ್ಲಾಘನೀಯವಾದದ್ದು ಎಂದರು. ಇನ್ನೊರ್ವ ಮುಖ್ಯ ಅತಿಥಿ ಖ್ಯಾತ ಉದ್ಯಮಿ ಪ್ರಶಾಂತ್ ತೋಳಾರ್ ಆನ್ಸ್ ಕ್ಲಬ್ ಚಟುವಟಿಕೆಗಳನ್ನು ಕೊಂಡಾಡಿದರು. ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ವೆಂಕಟೇಶ್ ನಾವುಂದ ಆನ್ಸ್ ಕ್ಲಬ್ ನೀಡಿದ ಸಹಕಾರವನ್ನು ಸ್ಮರಿಸಿದರು.
ವೇದಿಕೆಯಲ್ಲಿ ಆನ್ಸ್ ಸಭಾಪತಿ ಪಾರ್ವತಿ ಕೊತ್ವಾಲ್ ಪ್ರಾಸ್ತಾವಿಕ ನುಡಿಯನ್ನಾಡಿದರು, ಆನ್ಸ್ ಅಧ್ಯಕ್ಷೆ ಸ್ಮಿತಾ ವೆಂಕಟೇಶ್ ಸ್ವಾಗತಿಸಿದರು, ರೋಟರಿ ಕುಂದಾಪುರದ ಕಾರ್ಯದರ್ಶಿ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಆನ್ಸ್ ಕ್ಲಬ್ ಚಟುವಟಿಕೆಗಳ ನೇತ್ರತ್ವ ವಹಿಸುವ ಗೀತಾ ಟಿ.ಬಿ.ಶೆಟ್ಟಿ ಇವರನ್ನು ಆನ್ಸ್ ಸದಸ್ಯರು ಪ್ರೀತಿಪೂರ್ವಕವಾಗಿ ಸನ್ಮಾನಿಸಿದರು. ಕಾರ್ಯಕ್ರಮ ದ ಭಾಗವಾಗಿ ಆನ್ಸ್ ಮತ್ತು ಅನೆಟ್ಸ್ ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆನ್ಸ್ ಕಾರ್ಯದರ್ಶಿ ವಂದನಾ ಕಾಂಚನ್ ವಂದಿಸಿದರು. ಹಾಗೂ ರೇಖಾ ಆರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು