ಕುಂದಗನ್ನಡ ಅಕಾಡೆಮಿ ಸ್ಥಾಪನೆಗೆ ಹತ್ಕೊತ್ತಾಯ

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ವಿಧಾನ ಪರಿಷತ್ತಿನಲ್ಲಿ ಸದಸ್ಯರಾದ ಮಂಜುನಾಥ ಭಂಡಾರಿ ಅವರು ದಿನಾಂಕ 14-02-2023ರಂದು ಕುಂದಾಪುರ ಕನ್ನಡ / ಕುಂದಗನ್ನಡ ಭಾಷಾ ಅಕಾಡೆಮಿ ಸ್ಥಾಪನೆಗೆ ಹಕ್ಕೊತ್ತಾಯನವನ್ನು ಮಂಡಿಸಿದ್ದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಸುನಿಲ್ ಕುಮಾರ್ ಅವರು ನೀಡಿರುವ ಉತ್ತರ ವಿಷಾದನೀಯ ಭಾಷಾವಿಭಿನ್ನತೆಯನ್ನು ಹೊಂದಿರುವ ಕನ್ನಡಕ್ಕೆ ಪ್ರತ್ಯೇಕ ಕುಂದಾಪುರ ಕನ್ನಡ ಅಕಾಡೆಮಿ ಸ್ಥಾಪಿಸುವುದು ಕನ್ನಡ ಭಾಷಾ ಸಮಗ್ರತೆಯ ದೃಷ್ಟಿಯಿಂದ ಸೂಕ್ತವಲ್ಲ ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಸಂಶೋಧಕರಾದ ಡಾ. ಗಾಯತ್ರೀ ನಾವಡ ಹಾಗೂ ಪ್ರೋ. ಎ.ವಿ. ನಾವಡ ಅವರು ಕುಂದಗನ್ನಡ ಅಕಾಡೆಮಿ ಸ್ಥಾಪನೆಯಾಗುವುದು ಭಾಷಾ ಬೆಳವಣಿಗೆ ದೃಷ್ಠಿಯಿಂದ ಸೂಕ್ತವಾದುದು ಎಂಬ ಅಭಿಪ್ರಾಯ ಮಂಡಿಸಿದ್ದಾರೆ. ಅದರ ಪೂರ್ಣಪಾಠ ಹೀಗಿದೆ.

Call us

Click Here

ಕನ್ನಡ ನಾಡು ಕೇವಲ ಒಂದು ಕನ್ನಡ ಭಾಷಾ ನೆಲವಲ್ಲ. ಇದು ಬಹುರೂಪಿ ಕನ್ನಡಗಳ ನೆಲೆ. ಕವಿರಾಜಮಾರ್ಗಕಾರ ಹೇಳಿದಂತೆ ಕನ್ನಡಂಗಳ್ ತಾಣ. ಇದು ಕನ್ನಡ ಸಂಸ್ಕೃತಿಯ ಅಸ್ಮಿತೆ ಮತ್ತು ಸಮೃದ್ಧತೆ. ಭಾಷಾ ಬಹುರೂಪತೆಯೇ ಕನ್ನಡದ ಅಂತಃ ಚೈತನ್ಯ, ಸಮೃದ್ಧತೆ. ಭಾಷಾ ಬಹುತ್ವವೇ ಕನ್ನಡಕ್ಕೆ ಸೋಗಸನ್ನು ಸಮಗ್ರತೆಯನ್ನು ತದ್ದಿತ್ತುದು. ಪ್ರಾದೇಶಿಕ ಹಾಗೂ ಸಮುದಾಯದ ನೆಲೆಯಲ್ಲಿ ಕಾಣಿಸುವ ಭಾಷಾಪ್ರಭೇದ ಮತ್ತು ವೈವಿದ್ಯ ಒಂದು ಭಾಷೆಯ ಜೀವಂತಿಕೆಯ ಮತ್ತು ಬೆಳವಣಿಗೆಯ ಲಕ್ಷಣ. ಈ ಬಹುರೂಪಿ ಸಾಂಸ್ಕೃತಿಕ ಚಹರೆಗಳಿಂದ ಸಂಪನ್ನಗೊಂಡ ಒಳಮಾತುಗಳು (ಉಪಭಾಷೆ ಅಲ್ಲ) ಕನ್ನಡದ ಅಭಿವ್ಯಕ್ತಿ ಶಕ್ತಿಯನ್ನು ವಿಶಿಷ್ಟವಾಗಿಸುತ್ತದೆ ಮತ್ತು ಹೆಚ್ಚಿಸುತ್ತದೆ. ಆ ಮೂಲಕ ಕನ್ನಡಕ್ಕೆ ಸಾಮರ್ಥ್ಯವನ್ನು, ಸಮಗ್ರತೆಯನ್ನು ಕಟ್ಟಿಕೊಡುತ್ತದೆ. ಇದು ನಮ್ಮ ಕನ್ನಡ ಬೆಳೆಯಬೇಕಾದ ಪರಿ.

ಕನ್ನಡದ ಸಮಗ್ರತೆಯನ್ನು ಕಟ್ಟುವುದೆಂದರೆ ಬಹುರೂಪಿ ಕನ್ನಡಗಳ ಅನನ್ಯತೆಯನ್ನು ಉಳಿಸುವುದು ಮತ್ತು ಬೆಳೆಸುವುದು. ಇವತ್ತು ಕನ್ನಡದ ಮುಂದಿರುವ ಸಾವಾಲೆಂದರೆ ಸಾವಿನಂಚಿಗೆ ಸರಿಯುತ್ತಿರುವ ಭಾಷೆಗಳನ್ನು ಅಭಿವೃದ್ಧಿಪಡಿಸುವುದು. ಆ ಮೂಲಕವೇ ಕನ್ನಡಕ್ಕೆ ನಿಜವಾದ ಚೈತನ್ಯವನ್ನು ಸಮಗ್ರತೆಯನ್ನು ತುಂಬುವುದು. ಹಾಗಾಗಿಯೇ ಕುಂದಾಪುರ ಕನ್ನಡಕ್ಕೆ ಅಕಾಡೆಮಿ ಸ್ಥಾಪನೆಯೆಂದರೆ ನಿಜವಾದ ಅರ್ಥದಲ್ಲಿ ಕನ್ನಡಕ್ಕೆ ಸಮಗ್ರತೆ ವಿಸ್ತಾರವನ್ನು ತರುವುದು. ಇನ್ನೊಂದು ಮಗ್ಗುಲಲ್ಲೂ ಕನ್ನಡದ ಸಮಗ್ರತೆಯನ್ನು ಮುಂದಿಟ್ಟು ಆಡುವುದಾದರೆ ಅರೆಭಾಷೆ ಅಥವಾ ಗೌಡಕನ್ನಡ ಅಕಾಡೆಮಿ ಸ್ಥಾಪನೆಯಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಹೊಸ ವಿಸ್ತಾರ ಒದಗಿದೆ. ಪ್ರಸ್ತುತ ಕರ್ನಾಟಕ ಸರಕಾರ ಪ್ರಾದೇಶಿಕ ಭಾಷೆಯಾದ ತುಳುವನ್ನು ಎರಡನೇ ರಾಜ್ಯಭಾಷೆಯಾಗಿ ಪೋಷಿಸುವ ಸನ್ನಾಹದಲ್ಲಿ ಇರುವುದು ಕನ್ನಡದ ಸಮಗ್ರತೆಗೆ ಧಕ್ಕೆ ಎಂದು ಭಾವಿಸುವುದೆ? ಈ ಭಾಷಾಲೋಕದ ವಿಸ್ತಾರದ ಅರಿವುದು ನಮಗಿರಬೇಕು.

ಕುಂದನಾಡಿನ ಜನ ಪ್ರತಿಭಟನೆಗೆ, ಹೋರಾಟಕ್ಕೆ ಇಳಿವ ಮುನ್ನ ಸರಕಾರ ತನ್ನ ನಿಲುವನ್ನು ಮರುಪರಿಶೀಲಿಸಬೇಕು. ಕುಂದಾಪುರ ಭಾಷಾ ಅಕಾಡೆಮಿಯ ಸ್ಥಾಪನೆಗೆ ಮುಂದಾಗಬೇಕು.

Leave a Reply