ಎ.30ರಿಂದ ಮೇ.11ರ ತನಕ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು:
ಶ್ರೀ ಮೂಕಾಂಬಿಕಾ ದೇಳದ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ದಿನಾಂಕ 30-04-2023 ರಿಂದ 11-05-2023ರ ತನಕ ನಡೆಸುವು ಬಗ್ಗೆ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಹೇಳಿದರು.

Call us

Click Here

ಅವರು ದೇವಳದ ಆಡಳಿತ ಕಛೇರಿಯಲ್ಲಿ ಹಮ್ಮಿಕೊಂಡ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು 1972ರಲ್ಲಿ ಹಾಗೂ 30 ವರ್ಷಗಳ ನಂತರ 2002ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸಲಾಗಿತ್ತು. ಇದೀಗ 21 ವರ್ಷಗಳ ನಂತರ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸಲು ಸಮಯ ಒದಗಿ ಬಂದಿದೆ. ಪ್ರತಿ 12 ವರ್ಷಗಳಿಗೊಮ್ಮೆ ಅಷ್ಟಬಂಧ ನಡೆಸಬೇಕೆಂದು ಶಾಸ್ತ್ರ ಹೇಳುತ್ತದೆ. ಅನಿವಾರ್ಯ ಕಾರಣಗಳಿಂದ ಅಷ್ಟಬಂಧ ನಡೆಸಲು ಸಾಧ್ಯವಾಗಿರಲಿಲ್ಲ ಈಗ ಕಾಲ ಕೂಡಿ ಬಂದಿದೆ. ಕ್ಷೇತ್ರದ ತಂತ್ರಿಗಳು, ಅರ್ಚಕರು, ಉಪಾಧಿವಂತ ಕ್ಷೇತ್ರ ಪುರೋಹಿತರು, ಇಲಾಖಾ ಆಗಮ ಪಂಡಿತರು ಹಾಗೂ ಊರ ಪರ ಊರ ಭಕ್ತರ ಸಲಹೆ-ಸೂಚನೆಯನ್ನು ಪಡೆದು ಮಾನ್ಯ ಜಿಲ್ಲಾಧಿಕಾರಿಯವರ, ಮಾನ್ಯ ಧಾರ್ಮಿಕ ದತ್ತಿ ಆಯುಕ್ತರ ಹಾಗೂ ಸರ್ಕಾರದಿಂದ ಅನುಮತಿಯನ್ನು ಪಡೆದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ವಿಶೇಷವೆಂದರೆ 1972ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸುವಾಗ ದೇವಸ್ಥಾನದ ಪರಿವಾರ ದೇವರುಗಳಲ್ಲಿ ಪ್ರಮುಖವಾದ ಶ್ರೀ ವೀರಭದ್ರ ದೇವರ ಗುಡಿಯನ್ನು ಜೀರ್ಣೋದ್ಧಾರಗೊಳಿಸಿ ನೂತನ ದೇವಸ್ಥಾನದ ಕಲಶ ಪ್ರತಿಷ್ಠೆ ಮತ್ತು ಕಲಾವೃದ್ಧಿ ಸೇವೆಗಳನ್ನು ನಡೆಸಿ ಲೋಕಾರ್ಪಣೆಗೊಳಿಸಲಾಗಿತ್ತು. 2002ರಲ್ಲಿ ಕ್ಷೇತ್ರಕ್ಕೆ ನೂತನ ಶಿಲಾ ಮಹಾದ್ವಾರ ಸಮರ್ಪಣೆ, ನೂತನ ಸ್ವಾಗತ ಗೋಪುರ ಸಮರ್ಪಣೆ, ಸ್ವರ್ಣಲೇಪಿತ ಧ್ವಜಸ್ಥಂಭ ಸಮರ್ಪಣೆ ಕಾರ್ಯ ನಡೆದಿರುತ್ತದೆ.

50 ವರ್ಷಗಳ ನಂತರ ದಾನಿಗಳಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಹಾಗೂ ಅವರ ಕುಟುಂಬಸ್ಥರು ನಿರ್ಮಿಸಿ ದೇವಸ್ಥಾನಕ್ಕೆ ನೀಡಿರುವ ಶ್ರೀ ವೀರಭದ್ರ ದೇವರ ನೂತನ ಶಿಲಾಮಯ ದೇವಸ್ಥಾನವು ಲೋಕಾರ್ಪಣೆಗೊಂಡಿರುತ್ತದೆ. ಅಲ್ಲದೇ ಖ್ಯಾತ ಉದ್ಯಮಿ ಮುರ್ಡೇಶ್ವರದ ಶ್ರೀ ಆರ್. ಎನ್. ಶೆಟ್ಟಿ ಇವರ ಪುತ್ರ ಉದ್ಯಮಿ ಸುನಿಲ್ ಆರ್.ಶೆಟ್ಟಿ ಇವರು ಭಕ್ತಿ ಪೂರ್ವಕವಾಗಿ ನೀಡಿರುವ ನೂತನ ಬ್ರಹ್ಮರಥವು ಲೋಕಾರ್ಪಣೆಗೊಂಡಿರುತ್ತದೆ. ಈ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುವ ಈ ಸಮಯದಲ್ಲಿ ಕ್ಷೇತ್ರಕ್ಕೆ ದಾನಿಗಳ ನೆರವಿನಿಂದ ಶ್ರೀ ವೀರಭದ್ರ ದೇವರ ನೂತನ ಶಿಲಾಮಯ ಗುಡಿಯ ಲೋಕಾರ್ಪಣೆ ಹಾಗೂ ನೂತನ ಬ್ರಹ್ಮರಥದ ಸಮರ್ಪಣೆ ನಡೆದಿರುವುದು ದೇವಿಯ ಪ್ರೇರಣೆ ಎಂದು ನಾವೆಲ್ಲ ಭಾವಿಸಿರುತ್ತೇವೆ ಎಂದರು.

ಅಪರ ಜಿಲ್ಲಾಧಿಕಾರಿ ಹಾಗೂ ದೇವಳದ ಇಓ ವೀಣಾ ಬಿ.ಎನ್ ಮಾತನಾಡಿ, ಕ್ಷೇತ್ರದಲ್ಲಿ ದಿನಾಂಕ 30-04-2023 ರಿಂದ 11-05-2023ರ ವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ಕೆ ಅಂದಾಜು 5 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದ್ದು, ದೇವಸ್ಥಾನದಿಂದ ರೂ. 2 ಕೋಟಿಯನ್ನು ಬಳಸಿಕೊಳ್ಳಲು ಮತ್ತು ಉಳಿದ 3 ಕೋಟಿ ರೂಪಾಯಿಗಳನ್ನು ಭಕ್ತರಿಂದ ಸಂಗ್ರಹಿಸಿ ಖರ್ಚು ಮಾಡಲು ಸರ್ಕಾರ ಅನುಮತಿ ನೀಡಿರುತ್ತದೆ. ಈ ನಿಟ್ಟಿನಲ್ಲಿ ಭಕ್ತರ ಸಹಕಾರವನ್ನು ಕೋರಲಾಗಿದೆ. ಧಾರ್ಮಿಕ ಕಾರ್ಯಕ್ಕೆ ದೇಣಿಗೆ ನೀಡುವ ಭಕ್ತರು ಕಡ್ಡಾಯವಾಗಿ ಡಿಜಿಟಲ್ ಪೇಮೆಂಟ್, ಇ-ಹುಂಡಿ ಮೂಲಕ ಹಣ ಸಂದಾಯ ಮಾಡಬೇಕಿದೆ. ದೇವಸ್ಥಾನಕ್ಕೆ ಬರುವ ಭಕ್ತರು ನೇರವಾಗಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಕೌಂಟರ್ ಮೂಲಕ ಹಣ ಸಂದಾಯ ಮಾಡಬಹುದಾಗಿದೆ ಎಂದರು.

Click here

Click here

Click here

Click Here

Call us

Call us

ದೇವಳದ ಪ್ರಧಾನ ಅರ್ಚಕ ಡಾ. ಕೆ. ರಾಮಚಂದ್ರ ಅಡಿಗ ಅಷ್ಟಬಂಧದ ಮಹತ್ವ ಹಾಗೂ ಈ ಹಿಂದಿನ ಅವಧಿಯಲ್ಲಿ ಅಷ್ಟಬಂಧ ಪೂರ್ವಭಾವಿಯಾಗಿ ನಡೆಸಲಾದ ವಿವಿಧ ಧಾರ್ಮಿಕ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ್, ಗೋಪಾಲಕೃಷ್ಣ, ಗಣೇಶ್ ಕಿಣಿ, ಸಂಧ್ಯಾ ರಮೇಶ್, ಶೇಖರ ಪೂಜಾರಿ, ರತ್ನ ರಮೇಶ್ ಕುಂದರ್ ಉಪಸ್ಥಿತಿರಿದ್ದರು.

Leave a Reply